Publicstory. in
ತುರುವೇಕೆರೆ: ಕಳೆದ ಭಾರಿ ವಿಧಾನಸಭಾ ಚುನಾವಣೆಯಲ್ಲಿ ಗುಬ್ಬಿ ಶಾಸಕ ಶ್ರೀನಿವಾಸ್ ಮಸಾಲಜಯರಾಂನೊಂದಿಗೆ ಒಳ ಒಪ್ಪಂದ ಮಾಡಿಕೊಂಡು ನನ್ನ ಸೋಲಿಗೆ ಕಾರಣರಾದ ಇಲ್ಲವಾದರೆ ಮಸಾಲಜಯರಾಂ ಹೇಗೆ ಗೆಲ್ಲುತ್ತಿದ್ದರೆಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ದೂರಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ನಡೆ ಸುದ್ದಿ ಗೋಷ್ಠಿಯಲ್ಲಿ ಮಾತನಾಡುತ್ತಾ, ಸಚಿವರಾಗಬೇಕೆಂದು ದುರಾಲೋಚನೆಯಿಂದ ನನ್ನ ಸೋಲಿಗೆ ಕಾರಣರಾದಿರಿ. ನೀವೆ ದೇವಾಲಯದ ಮುಂದೆ ನಿಂತು ಆತ್ಮಾವಲೋಕನ ಮಾಡಿಕೊಳ್ಳಿ.
ಎಚ್.ಡಿ.ಕುಮಾರಸ್ವಾಮಿ ಬಿಜೆಪಿಯೊಂದಿಗೆ ಆತಂರಿಕ ಒಪ್ಪಂದ ಮಾಡಿಕೊಂಡಿದ್ದರಿಂದ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಸೋತರು ಎಂಬ ಗುಬ್ಬಿ ಶಾಸಕ ಶ್ರೀನಿವಾಸ ಆಪಾದನೆ ಸತ್ಯಕ್ಕೆ ದೂರವಾದದು ಎಂದರು.
ಎಚ್.ಡಿಕೆ ಮತ್ತು ದೇವೇಗೌಡರ ಬಗ್ಗೆ ಮಾತನಾಡುವಾಗ ವಿಷಯ ತಿಳಿದು ಮಾತನಾಡಬೇಕು. ಜೊತೆಯಲ್ಲಿದ್ದು ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಬೇಡಿ ಎಂದು ತಿರುಗೇಟು ನೀಡಿದರು.
ನಮ್ಮ ಪಕದಿಂದ ಕೃಷ್ಣಪ್ಪ ಸಂಸದರ ಚುನಾವಣೆಗೆ ಸ್ಪರ್ಧಿಸಿದಾಗ ಗುಬ್ಬಿ ಶಾಸಕರು ಮುದ್ದಹನುಮೇಗೌಡರ ಜೊತೆ ಒಪ್ಪಂದ ಮಾಡಿಕೊಂಡಿರಲಿಲ್ಲವೇ? ಎಂದು ಕುಟುಕಿದರು.
ಇಷ್ಟೆಲ್ಲ ಎಚ್ಡಿಕೆ ಬಗ್ಗೆ ಲಘುವಾಗಿ ಮಾತನಾಡುವ ನೀವು ಕಾಂಗ್ರೆಸ್ ಮುಖಂಡರೊಂದಿಗೆ ಇತ್ತೀಚೆಗೆ ಕಾಣಿಸಿಕೊಳ್ಳುತ್ತಿರುವ ಮರ್ಮವೇನೆಂಬುದು ಈಗ ಜಗತ್ ಜಾಹೀರಾತಾಗಿದೆ. ರಾಜಕಾರಣ ನಿಂತ ನೀರಲ್ಲ ಯಾರು ಎಲ್ಲಿಗೆ ಬೇಕಾದರೂ ಹೋಗಬಹುದು ಮತ್ತೊಬ್ಬರನ್ನು ಅವಹೇಳನ ಮಾಡಿ ಪಕ್ಷ ತೊರೆಯುವ ಅನಿವಾರ್ಯತೆ ಏನಿತ್ತು ಎಂದು ಕೇಳಿದರು.
ಎಚ್.ಡಿ.ಕುಮಾರ್ ಸ್ವಾಮಿಯವರು ಯಾರೊಂದಿಗೂ ಪಿತೂರಿ ನಡೆಸಿಲ್ಲ. ನೇರ ನುಡಿಯ ರಾಜಕಾರಣಿ ಅವರು. ಸುಕಾಸುಮ್ಮನೆ ಕಾಂಗ್ರೆಸ್ನವರು ಎಚ್.ಡಿಕೆ ವಿರುದ್ದ ಮಾತನಾಡುವುದರಲ್ಲಿ ತಿರುಳಿಲ್ಲ.
ನನ್ನ ಅವಧಿಯಲ್ಲಿ ತಾಲ್ಲೂಕಿನ ಶಾಲಾ ಕಾಲೇಜು ತೆರೆಯಲು 55 ಕೋಟಿ ಅನುದಾನ ತಂದಿದ್ದೆ. ಹಾಲಿ ಶಾಸಕರದು ಬರಿ ಕಮಿಷನ್ ಕೊಡಿಗೆಯಷ್ಟೆ ಎಂದು ಗೇಲಿ ಮಾಡಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಮಧುಸೂದನ್, ವೆಂಕಟಾಪುರ ಯೋಗೀಶ್, ವಿಜಯೇಂದ್ರ, ಜಫ್ರಲ್ಲಾ, ಇದ್ದರು.