ಡಿ ಎಂ ಘನಶ್ಯಾಮ.
ಪುಟ್ಟಿಗೆ ಸೈಕಲ್ ತುಳಿಸಬೇಕು, ಫ್ರೆಂಡ್ಸ್ ಟೂ ಬಿಟ್ಟಾಗ ರಾಜಿ ಮಾಡಿಸಬೇಕು, ಅವಳು ಏನು ಹೇಳ್ತಿದ್ದಾಳೆ ಅಂತ ಅಪ್ಪನಿಗೆ ಕನ್ನಡ ಟು ಕನ್ನಡ ಅನುವಾದಿಸಿ ಅರ್ಥ ಆಗೋಹಂಗೆ ಹೇಳಬೇಕು, ಮಿಸ್ ಕಳಿಸೊ ಪಾಠದ ವಿಡಿಯೊ ನೋಡಿ ಪುಟ್ಟಿ ಕೈಲಿ ಹೋಂವರ್ಕ್ ಮಾಡಿಸಬೇಕು. ಅವಳೇನಾದ್ರೂ ‘ಮಾಡಲ್ಲ ಹೋಗೋ’ ಅಂದ್ರೆ ‘ಜಾಣಿ ಬಂಗಾರಿ ಅಲ್ವಾ, ಮಾಡ್ಬೇಕು ಅಲ್ವಾ’ ಅಂತ ಮುದ್ದು ಮಾಡಿ ಬರೆಸಬೇಕು, ಆಟ ಆಡಿ ಮನೆಗೆ ಬರುವಾಗ ಅವಳೇನಾದ್ರೂ ಚಪ್ಪಲಿ ಮರೆತುಬಂದಿದ್ರೆ ಅಮ್ಮನಿಗೆ ಗೊತ್ತಾಗೋ ಮೊದಲೇ ಶ್ರೇಯಾ-ಸಾನ್ವಿ-ಅಮ್ದನ್ ಮನೆ ಬಾಗಿಲು ನೋಡಿ ಸದ್ದಿಲ್ಲದೆ ಚಪ್ಪಲಿ ತಂದಿಡಬೇಕು, ತಾತಾ ನ್ಯೂಸ್ ನೋಡ್ತಿದ್ದಾಗ ಪುಟ್ಟಿ ಕಾರ್ಟೂನ್ ಬೇಕಂತ ಗಲಾಟೆ ಮಾಡಿದ್ರೆ ಸದ್ದಿಲ್ಲದೆ ಚಾನೆಲ್ ಬದಲಿಸಿ ಯಾರಿಗೂ ಸಿಗದಂಗೆ ರಿಮೋಟ್ ಬಚ್ಚಿಡಬೇಕು, ಪುಟ್ಟಿ ಬರ್ತ್ ಡೇಗೆ ಏನು ಗಿಫ್ಟ್ ಕೊಡಬೇಕು ಅಂತ ಪ್ಲಾನ್ ಮೇಲೆ ಪ್ಲಾನ್ ಮಾಡಿ ಅಥ್ಲೆಟಿಕ್ಸ್ ಫ್ರೆಂಡ್ಸ್ ಜೊತೆಗೆ ಡಿಸ್ಕಸ್ ಮಾಡ್ಬೇಕು, ಹಾಲು ತಂದ ಚಿಲ್ಲರೆಯಲ್ಲಿ ಅಜ್ಜಿಗೆ ಒಂದು ರೂಪಾಯಿ ಕಡಿಮೆ ಕೊಟ್ಟು ಉಳಿದದ್ದು ಪುಟ್ಟಿ ಹುಂಡಿಗೆ ಹಾಕಬೇಕು, ಆಡೋಕೆ ಹೋಗಿದ್ದ ಪುಟ್ಟಿ ತೂಕಡಿಸಲು ಶುರು ಮಾಡಿದ್ರೆ ಎತ್ಕೊಂಡು ಬಂದು ಜೋಲಿ ತೂಗಬೇಕು…
‘ನಮ್ಮಣ್ಣನ ಹೆಸರು ಹೃಷೀಕೇಶ, ಅವನಿಗೆ ತಂಗಿ ಅಂದ್ರೆ ತುಂಬಾ ಇಷ್ಟ’ ಅಂತ ಯಾವಾಗಲಾದ್ರೂ ಮೂಡ್ ಚೆನ್ನಾಗಿದ್ದಾಗ ಪುಟ್ಟಿ ಮುದ್ದುಮುದ್ದು ಮಾಡಿದ್ರೆ ಹಿರಿಹಿರಿ ಹಿಗ್ಗಿ ಹೀರೇಕಾಯಿ ಆಗ್ಬೇಕು.
‘ಅಪ್ಪಾ ಪುಟ್ಟಿಗೆ ನಾನಂದ್ರೆ ತುಂಬಾ ಇಷ್ಟನಂತೆ’ ಅಂತ ಅಪ್ಪನಿಗೆ ವಿಡಿಯೊ ಕಾಲ್ ಮಾಡಿ ಹೇಳಬೇಕು. ( ಫೇಸ್ ಬುಕ್ ಪಿಕ್)