ಉಜ್ಜಜ್ಜಿರಾಜಣ್ಣ
ಅಪ್ಪ ಮಗ ಅದೇನೋ ಚೀಲದಲ್ಲಿ ಇಟ್ಕಂಡು ಪಡು ಮಕನಾಗಿ ಹೋಗುವಾಗ ಬರ್ರಯ್ಯ ಅಂಗೆಯಾ ಟೀ ಕುಡ್ದು ಹೋಗಿ ಎಂದೆ.
ಅತ್ತಲಿಂದ ಬರುವಾಗ ಬತ್ತೀವಿ ಅಂತಾ ಹೋದ ಅಲ್ಲಬಕಾಶ್ ಹಾಗೂ ಅವರ ಮಗ, ಆ ತಹಶಿಲ್ದಾರ್ ಮನೆ ಯಕಡಿ ಬೀದಿ ಅಂತಲೇ ಹೋದವರು ಅವರು ಮನೆಗೆ ಒಂದು ಕೆಜಿ ಕಾಟ್ಲಾ ಇನ್ನೊಂದು ಕೆಜಿ ರಘು ಆಮೇಲೊಂದು ಕೆಜಿ ಕುಚ್ಚು ಮೀನು ಕೊಟ್ಟು ಬಂದು ಕುತ್ಕಂಡಿದ್ದು ಟೀ ಕುಡುದು ಹೋದ್ರು.
ಅವರ ಮೀನು ಯಾಪಾರ ಚನಾಗಿರಂಗೈತೆ. ನನ್ನ ಮಖದ ಮೇಲೆ ಹರಿದ ಗೆರೆಗಳ ನರಿಗೆ ಸುಕ್ಕ ಇಮ್ಮಡಿಯಾಗಿರುವುದ ನೋಡಿ ಅಲ್ಲಾಬಕಾಶ್ರಿಗೆ ಏನೋ ಒಂತರನಂತಾಗಿ, ಅದೆಂತದೋ ಶತಾಯು ಆರ್ಯವೇದ ಕುಡಿ ಮಖುದು ಮ್ಯಾಗುಲು ಸಕ್ಕು ಸರಿಯಾಗಿ Immunity bust up ಆಗುತ್ತೆ ನಿನ್ನ ಮುಖ್ದ ಮೇಲಿನ ಸುಕ್ಕು ಮಾಯವಾಗುತ್ತದೆ ಅದು ಆರ್ಯವೇದ No side effects, first class result, use ಮಾಡು ಸುಕ್ಕಿರಲ್ಲ. ಮಖೆಲ್ಲ ನರಿಗೆನರಿಗೆ ಆಗಿದೆ ಅಂತ ಬ್ಯಾರೆ ಹೇಳಿರು. ಕಾಟ್ಲಾ ರಘು ಮೀನು Fresh ಆಗಿ ಬಂದಿದೆ ಅಂದ್ರು.
ಇಲ್ಲಾ ಕಣಯ್ಯ ಮೃತ್ಯುಂಜಯ ಹೋಮ ಆಗಿದೆ Fifty eight days ಮೀನು ಮಾಂಸ ಮದ್ದು ಮುಟ್ಟಂಗಿಲ್ಲ ಅಂದೆ. ಥೂ ನಿಮ್ಮ ನಿನ್ನ Progressive sensibility ಹಾಳಗಿದೆ Progressive ಗಳೆಲ್ಲಾ ಹಾಳಾಗಿದಿರಾ ಎಂತಲೇ ಸಿಟ್ಟತ್ತಿ ಅಂಗೆಯಾ ಅಪ್ಪಾ ಮಗ ಗಾಡಿ ಹತ್ತೀರು.
ಜೊತೆಯಲ್ಲಿ ಸೇರಿಕೊಂಡು ಪಕ್ಕದಲ್ಲೇ ಕುಳಿತಿದ್ದ ವಾರ್ತಾಭಾರತಿ ದಿನಪತ್ರಿಕೆಯ ವರದಿಗಾರ ಮಂಜುನಾಥ್ ನಗರದ ಕುಮಾರ್ ಹೊನ್ನವಳ್ಳಿ ನಮ್ಮ ತೀಟ್ಗೆ ನೋಡಿ ನಕ್ಕ . ಚಿಕನ್ ಕಬಾಬು, ಬಿರಿಯಾನಿ door delivery ಕೊಟ್ಟು ನಗರದಲ್ಲಿ ಒಳ್ಳೆಯದು ರುಚಿ ಹತ್ತಿಸಿದ್ದರು. ಅದು ಈಗ ನಡಿತಾ ಇಲ್ಲ.
ಕಾಮರೇಡ್ ಅಲ್ಲಾಬಕಾಶ್ ಒಳ್ಳೆಯ ಚಳುವಳಿಗಾರ. ಸಂಘಟಕ. CITU ನಲ್ಲಿ ಕೆಲಸ ಮಾಡಿದಾರೆ. ಭಂಗ ಬಡತನ ಏಗುತ್ತಲೇ ಚಳುವಳಿಗಳ ಸಂಗಾತಿಗಳ ಸಾರ್ವಜನಿಕರ ಜೊತೆಯಲ್ಲಿಯೂ ಏಗುತ್ತಿರುವ ಗೆಳೆಯ.
ಕಳೆದ ನಗರಸಭಾ ಚುನಾವಣೆಯಲ್ಲಿ ನಾವಿಬ್ಬರೂ ಸ್ಪರ್ಧೆಯಲ್ಲಿದ್ದೆವು. ಗಾಂಧಿ ನಗರದ ಬಡವರಿಗೆ ಅಲ್ಲಾಬಕಾಶ್ ಹೆಚ್ಚು ಕೆಲಸ ಮಾಡಿದವರು. ದಮನಿತ ಸಮುದಾಯಗಳನ್ನು ಒಗ್ಗೂಡಿಸಿ ಚಳವಳಿ ಕಟ್ಟುತ್ತಲೇ ಮುಂದುವರಿದವರು.
ಆರ್ಥಿಕವಾಗಿ ಹಿಂದುಳಿದ ಸಮುದಾಯಗಳು ಬದುಕಿನ ಜೊತೆಯಲ್ಲಿ ಏಗುವುದೆಂದರೆ ದಾರಿ ಸಾಗದ ಮಾತು. ಮಗ ಮಗಳು ಒಳ್ಳೆಯವು, ಚನ್ನಾಗಿ ಓದುತ್ತಿದ್ದಾರೆ. ಅಪ್ಪನ ಚಳುವಳಿಯ ಕಷ್ಟದ ಜೊತೆಯಲ್ಲಿ ಅವರೂ ಒಗ್ಗಿಕೊಂಡಿದ್ದಾರೆ.
ಇಬ್ಬರೂ ಮಕ್ಕಳು ಕನ್ನಡದ ಹಾಡುಗಳನ್ನು ಅತಿ ಅಕ್ಕರೆಯಿಂದ ಹಾಡುವ ಸ್ಫೂರ್ತಿ ಮೈಗೂಡಿಸಿಕೊಂಡವರು. ಅಲ್ಲಾಬಕಾಶ್ ಮಗ ಅಮ್ಜದ್ ಬೇಂದ್ರೆಯವರ ಕವಿತೆಗಳನ್ನು ಅಪರೂಪವಾಗಿ ಹಾಡುವನು. ಇಲ್ಲೇ ಕಲ್ಪತರು ಕಾಲೇಜ್ ಬಿಬಿಎಂ ವಿದ್ಯಾರ್ಥಿ. ಅವನ ಹಾಡುಗಳು ಗಮನವಿಟ್ಟು ಕೇಳುವಂತಿರುತ್ತವೆ. ಕವಿ ಎಲ್ ಎನ್ ಮುಕುಂದರಾಜ್ ರಚನೆಯ ನನ್ನ ಪ್ರಿಯವಾದ ಹಾಡು ” ಎಷ್ಟೊಂದು ತಳಮಳವು ಎದೆಯೊಳಗೆ ಗೆಳತಿ ” ಹಾಡಿದ್ದನ್ನು ಕೇಳಿದ್ದ ಅಮ್ಜದ್ ಅದನ್ನು ಬರೆದುಕೊಡುವಂತೆ ಕೇಳಿದ್ದ. ಕನ್ನಡ ಕವಿಗಳ ಇಷ್ಟದ ಹಾಡುಗಳನ್ನು ಕಲಿಯುವ ಅವ್ಯಾಸ ಬೆಳೆಸಿಕೊಂಡಿರುವ ಯುವಕ ಅಮ್ಜದ್, ಹಾಡೊಂದನ್ನು ಕೇಳಿದರೆ ಕೂಡಲೇ ಹಾಡುವನು ತುಸುವೇ ನಕ್ಕು ಕೇಳುಗರ Opinion ಗೆ ತಡವರಿಸುವನು.
ಹಿರಿಯ ಕತೆಗಾರಾದ ಎಸ್ ಗಂಗಾದರಯ್ಯ, ಶ್ರೀಕಾಂತ್, ಮನೋಹರ್ ಪಾಟೇಲ್ ನಾವೆಲ್ಲಾ ಗೆಳೆಯರು ಆಗಾಗ್ಗೆ ಅಲ್ಲಾಬಕಾಶ್ ಮನೆಗೆ ಹೋದಾಗ ಅಮ್ಜದ್ ಬಾಯಲ್ಲಿ ಬೇಂದ್ರೆಯವರ ಹಾಗು ಕನ್ನಡದ ಇತರೆ ಹಾಡುಗಳನ್ನು ಹಾಡಿಸಿ ಕೇಳಂಗಾಗುತ್ತದೆ.