Thursday, November 21, 2024
Google search engine
Homeಜಸ್ಟ್ ನ್ಯೂಸ್ತುಮಕೂರು ಆಸ್ಪತ್ರೆಯಲ್ಲಿ ಸಚಿವ ಅರಗ ಹೇಳಿದ್ದೇನು?

ತುಮಕೂರು ಆಸ್ಪತ್ರೆಯಲ್ಲಿ ಸಚಿವ ಅರಗ ಹೇಳಿದ್ದೇನು?

ತುಮಕೂರು: ಜಿಲ್ಲಾ ಉಸ್ತುವಾರಿ ಸಚಿವರಾದ ಅರಗ ಜ್ಞಾನೇಂದ್ರ ರವರು ಜಿಲ್ಲಾ ಆಸ್ಪತ್ರೆ ತುಮಕೂರು ಇಲ್ಲಿ ಭೇಟಿ ನೀಡಿದ್ದು, ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿಗಳ ನಿರ್ಲಕ್ಷ್ಯತನದಿಂದ ಆಗಿದ್ದ ತಾಯಿ ಮತ್ತು ಅವಳಿ ಜವಳಿ ಶಿಶು ಮರಣದ ಬಗ್ಗೆ ತನಿಖೆ ಮಾಡಲು ಸೂಚಿಸಿದರು.

ಈ ಸಂದರ್ಭದಲ್ಲಿ ತುಮಕೂರು ಜಿಲ್ಲೆಯ ಡಿ.ಹೆಚ್.ಓ ರವರು ಹಾಜರಿದ್ದರು. ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸರು ಕೂಡ ಹಾಜರಿದ್ದರು.

ಈ ಸಂದರ್ಭದಲ್ಲಿ ಉಸ್ತುವಾರಿ ಸಚಿವರು ತಾಯಿ ಮತ್ತು ಶಿಶು ಮರಣದ ಬಗ್ಗೆ ವಿಷಾದ ವ್ಯಕ್ತ ಪಡಿಸಿದರು. ಜಿಲ್ಲಾ ಆಸ್ಪತ್ರೆಯಲ್ಲಿ ಹೊರಗಡೆ ಔಷಧಿ ಬರೆದು ಕೊಡುವುದನ್ನು ಮತ್ತು ಸಿಜರಿನ್ ಮಾಡಲು ಲಂಚ ಕೇಳುವುದನ್ನು ತೀವ್ರವಾಗಿ ಖಂಡಿಸಿದರು. ಆಸ್ಪತ್ರೆ ತುಂಬಾ ಏಜೆಂಟ್ ಗಳು ಹುಟ್ಟಿಕೊಂಡಿದ್ದು, ಏಜೆಂಟ್ ಗಳ ಮೂಲಕ ಲಂಚ ಪಡೆಯುವುವವರನ್ನು ಹಿಡಿಯುವುದು ಕಷ್ಟ ಆಗಿದೆ.

ಆದುದರಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಏಜೆಂಟ್ ಹಾವಳಿ ತಪ್ಪಿಸಬೇಕೆಂದು ಕಟ್ಟುನಿಟ್ಟಾಗಿ ಸೂಚಿಸಿದರು.

ಜಿಲ್ಲಾ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಅನುದಾನ ದುರ್ಬಳಕೆ ಆಗಿದ್ದು, ಇದುವರೆಗೂ ವಸೂಲು ಆಗದೆ ಇರುವ ಬಗ್ಗೆ ಜಿಲ್ಲಾ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಜಿಲ್ಲಾ ಅಧಿಕಾರಿಗಳು ಜಿಲ್ಲಾ ಆಸ್ಪತ್ರೆಯ ಅನೇಕ ಸಿಬ್ಬಂದಿಗಳು ಒಳಗೊಂಡಿದ್ದಾರೆ ಎಂದು ಉತ್ತರ ನೀಡಿದರು. ಅದಕ್ಕೆ ಉಸ್ತುವಾರಿ ಸಚಿವರು ಆರೋಗ್ಯ ರಕ್ಷಾ ಸಮಿತಿಯ ಅಧ್ಯಕ್ಷರಾದ ಜಿಲ್ಲಾಧಿಕಾರಿಗಳೇ ಕ್ರಮತೆಗೆದುಕೊಳ್ಳಬೇಕೆಂದು ಸೂಚಿಸಿದರು.

ಸಾಧ್ಯವಾಗದೇ ಹೋದಲ್ಲಿ ಪೋಲಿಸ್ ಇಲಾಖೆಯ ಸಹಾಯ ಪಡೆದು ಇನ್ನು 02 ದಿನದಲ್ಲಿ ವಸೂಲಾಗಬೇಕೆಂದು ತಿಳಿಸಿದರು. ವಸೂಲು ಮಾಡುವುದಲ್ಲದೆ ಆಡಳಿತ ವೈಫಲ್ಯ ಎಸಗಿದ ಅಧಿಕಾರಿಗಳನ್ನು ವಜಾ ಮಾಡಬೇಕು. ಒಟ್ಟಾರೆ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ತಿಂದಿರುವ ಅಮೇಧ್ಯ ವಸೂಲು ಮಾಡುವುದು ಖಾತ್ರಿ ಎಂಬಂತೆ ಕಂಡು ಬರುತ್ತಿದೆ. ಅನೇಕ ಸಂಘ ಸಂಸ್ಥಗಳು ಈ ಬಗ್ಗೆ ಹೋರಾಟ ಮಾಡುತ್ತ ಬಂದಿದ್ದು, ಕೆಲವು ಅಧಿಕಾರಿಗಳು ಈಗಾಗಲೇ ವರ್ಗಾವಣೆ ಆಗಿರುತ್ತಾರೆ. ಅದೇ ಸಮಯದಲ್ಲಿ ಆರ್.ಎಂ.ಓ ಆಗಿದ್ದ ಆಧಿಕಾರಿಯೇ ಈಗ ಜಿಲ್ಲಾ ಶಸ್ತ್ರ ಚಿಕಿತ್ಸಕರಾಗಿದ್ದು, ಆರೋಗ್ಯ ರಕ್ಷಾ ಸಮಿತಿಯ ದುರ್ಬಳಕೆ ಆಗಿರುವ ಅನುದಾನ ಯಾವ ರೀತಿ ವಸೂಲಾಗುತ್ತದೆ ಎಂದು ಕಾದು ನೋಡಬೇಕಾಗಿದೆ.

ಈ ರೀತಿ ಉಸ್ತುವಾರಿ ಸಚಿವರ ಖಡಕ್ ಕ್ರಮದಿಂದಾದರೂ ಜಿಲ್ಲಾ ಆಸ್ಪತ್ರೆಗೆ ಮುಕ್ತಿ ದೊರೆಯುತ್ತದೆಯೋ ಎಂದು ಕಾದು ನೋಡಬೇಕಾಗಿರುತ್ತದೆ.
ಉಸ್ತುವಾರಿ ಸಚಿವರು ಈ ಬಗ್ಗೆ ಎಷ್ಟು ಬೇಸತ್ತು ಹೋಗಿದ್ದಾರೆ ಎಂದರೆ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತಿ ದಿವಸ ಜಿಲ್ಲಾ ಆಸ್ಪತ್ರೆ ಆದಾಯ ಉಂಟು ಮಾಡುವ ಆರೋಗ್ಯ ರಕ್ಷಾ ಸಮಿತಿಯ ರೋಗಿಗಳು ನೀಡುವ ನಿಗದಿತ ಶುಲ್ಕ ಪ್ರತಿ ದಿನ ತಮಗೆ ಎಸ್.ಎಂ.ಎಸ್ ಬರಬೇಕೆಂದು ಸೂಚಿಸಿದರು.

ಈ ಸಮಯದಲ್ಲಿ ಖಾಲಿ ಹುದ್ದೆಗಳ ಮಾಹಿತಿ ಪಡೆದರು ಹಾಗೂ ಕ್ರಮಮವಹಿಸಲು ಸೂಚಿಸಿದರು. ಆಯುಷ್ಮಾನ್ ಭಾರತ್ ಸ್ಕೀಮ್ ನಲ್ಲಿ ವೈದ್ಯಾಧಿಕಾರಿಗಳಿಗೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ.ವೈದ್ಯಾಧಿಕಾರಿಗಳು ಮಾನವೀಯ ದೃಷ್ಠಿಯಿಂದ ಕರ್ತವ್ಯ ನಿರ್ವಹಿಸಲು ಸೂಚಿಸಿದರು. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ವೈದ್ಯಾಧಿಕಾರಿಗಳಿಗೆ ಒಳ್ಳೆ ಸಂಬಳ ಮತ್ತು ಪ್ರೋತ್ಸಾಹ ಧನ ನೀಡುತ್ತಿದ್ದು, ಸಣ್ಣ ಪುಟ್ಟ ಕಾರಣಗಳನ್ನು ನೀಡದೆ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಲು ಸೂಚಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?