Arecanut : ಕುಸಿತ ಕಂಡಿದ್ದ ಅಡಿಕೆ ಧಾರಣೆ ಮತ್ತೆ 5 ರೂ. ಏರಿಕೆ. ಇನ್ನಷ್ಟು ಏರಿಕೆಯಾಗುವ ನಿರೀಕ್ಷೆ
ದಕ್ಷಿಣ ಕನ್ನಡ ಉಡುಪಿ ಮತ್ತು ಕೆಲವು ಮಲೆನಾಡು ಗಳಲ್ಲಿನ ಪ್ರಮುಖ ವಾಣಿಜ್ಯ ಬೆಳೆ ಅಡಿಕೆ ಧಾರಣೆ ಈ ಹಿಂದೆ ಇಳಿಕೆಯ ಹಾದಿಯಲ್ಲಿ ಸಾಗು ತ್ತಿತ್ತು. ಇಂದು ಅಡಿಕೆ ಧಾರಣೆ ಮತ್ತೆ ಏರಿಕೆಯಾಗಿದ್ದು ಚೇತರಿಸಿಕೊಳ್ಳುತ್ತಿದ್ದು ಇದರಿಂದ ರೈತರಲ್ಲಿ ಸಂತೋಷ ಹೆಚ್ಚಾಗಿದೆ .
ಪ್ರಸ್ತುತ ದಕ್ಷಿಣ ಕನ್ನಡ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ದರ ಕೆಜಿಗೆ 420 ರಿಂದ 425 ವರೆಗೆ ಇದೆ. ಹಾಗೂ ಹಳೆ ಅಡಿಕೆ ಧಾರಣೆ 465 ರಿಂದ 470 ರವರೆಗೆ ಇದ್ದು ನವರಾತ್ರಿ ಬಳಿಕ ಮತ್ತೆ ಏರಿಕೆಯಾಗಬಹುದು ಎಂಬ ಮಾತು ನಿಜವಾಗಿದೆ.
ಕಳೆದ ತಿಂಗಳಲ್ಲಿ ಏರಿಕೆ ಹಾದಿಯಲ್ಲಿದ್ದ ಅಡಿಕೆದರ ಮತ್ತೆ ಕುಸಿತಗೊಂಡಿತ್ತು. ಆದರೆ ಇದೀಗ ಮತ್ತೆ ಏರಿಕೆಯಾಗಿದ್ದು ಪುನ 450ರ ಗಡಿ ತಲುಪಲು ಇನ್ನು ಕೆಲವೇ ದಿನಗಳಿದ್ದು ಮುಂದಿನ ತಿಂಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಂಭವವಿದೆ ಎಂದು ಅಡಿಕೆ ವರ್ತಕರು ಮತ್ತು ಬೆಳೆಗಾರರಲ್ಲಿ ಹಾಗೂ ಕೃಷಿ ವಲಯದಲ್ಲಿ ಮಾತು ಕೇಳಿ ಬರುತ್ತಿದೆ.
ಕರಾವಳಿ ಭಾಗಗಳಲ್ಲಿ ಅತಿ ಹೆಚ್ಚಾಗಿ ಅಡಿಕೆ ಬೆಳೆಯನ್ನೇ ಪ್ರಮುಖ ವಾಣಿಜ್ಯ ಬೆಳೆಯನ್ನಾಗಿಸಿ ರೈತರು ಜೀವನ ನಡೆಸುತ್ತಿದ್ದಾರೆ. ಎಲೆಚುಕ್ಕಿ ರೋಗ ದಿಂದ ಹಲವು ಪ್ರದೇಶಗಳಲ್ಲಿ ಅಡಿಕೆ ಬೆಳೆಗಾರರಿಗೆ ತೊಂದರೆ ಉಂಟಾಗಿತ್ತು ಆದರೆ ಈ ಬಾರಿ ಬೇಸಿಗೆಯಲ್ಲಿ ಹಲವು ಕಡೆ ನೀರಿನ ಅಭಾವದಿಂದ ಅಡಿಕೆ ಗಿಡಗಳು ಬತ್ತಿ ಹೋಗಿವೆ. ಕೆರೆ ಹಾಗೂ ನದಿಗಳನ್ನು ನಂಬಿಕೊಂಡಿದ್ದ ಹಲವು ಜನರಿಗೆ ಸಂಕಷ್ಟ ಉಂಟಾಗಿತ್ತು.
ಕಳೆದ ಮೂರು ವರ್ಷಗಳ ಹಿಂದೆ ಸುಳ್ಯ ಮಡಿಕೇರಿ ಭಾಗಕ್ಕೆ ಎಲಚುಕ್ಕಿ ರೋಗವು ಸಾಕಷ್ಟು ಹಾನಿ ಉಂಟು ಮಾಡಿತ್ತು. ಆದರೆ ಕರಾವಳಿ ಭಾಗಗಳಲ್ಲಿ ಕೀಟನಾಶಕ ಸಿಂಪಡಿಸಿ ಎಲೆ ಚುಕ್ಕಿ ರೋಗದಿಂದ ಪಾರಾಗಿದ್ದರು ಕಳೆದ ಬಾರಿಯೂ ಅಡಿಕೆಗೆ ಬಾರಿ ಬೇಡಿಕೆ ಇದ್ದು 500 ಗಡಿ ತಲುಪಿತ್ತು ಈ ಬಾರಿ ಅಡಿಕೆ ಬೆಳೆಗಾರರು ಉತ್ತಮ ದರದಲ್ಲಿ ನಿರೀಕ್ಷಿದ್ದು ಕ್ವಿಂಟಲ್ ಗೆ 45000 ಗಡಿ ದಾಟುವುದು ಎಂದು ಅಡಿಕೆ ಬೆಳೆಗಾರರಲ್ಲಿ ಮಾತು ಕೇಳಿ ಬರುತ್ತಿದೆ.
ಮುಂದಿನ ದಿನಗಳಲ್ಲಿ ಅಡಿಕೆ ದರ ಇನ್ನೂ 20 ರಿಂದ 30 ಹೆಚ್ಚಾಗುವ ನಿರೀಕ್ಷೆಯು ಇದೆ. ಅಡಿಕೆ ಮಾರುಕಟ್ಟೆ ಗೆ ಬಾರದೆ ಹೋದಲ್ಲಿ 450ರ ಗಡಿ ದಾಟ ಬಹುದು.