ತುಮಕೂರು: ಬಿ.ಬಸವಲಿಂಗಪ್ಪ ಅವರು ಮುಖ್ಯಮಂತ್ರಿಯಾಗಿದ್ದರೆ ದೇವರಾಜ ಅರಸು ಅವರಿಗಿಂತ ಉತ್ತಮ ಆಡಳಿತ ನೀಡುತ್ತಿದ್ದರು ಎನ್ನುವ ಭಯ ಸ್ವತಹಃ ದೇವರಾಜ ಅರಸರಲ್ಲಿತ್ತು, ದೇವರಾಜ ಅರಸು ಉತ್ತಮ ಆಡಳಿತ ನೀಡುತ್ತಿದ್ದರು ಸಹ,ಸಮಾಜ ಸುಧಾರಣೆಗೆ ಇನ್ನಷ್ಟು ಕ್ರಮ ತೆಗೆದುಕೊಳ್ಳಬೇಕೆಂದು ಬಸವಲಿಂಗಪ್ಪ ಒತ್ತಾಯ ಮಾಡುತ್ತಿದ್ದರು ಎಂದು ಚಿಂತಕ ಪ್ರೊ.ಕಾಳೇಗೌಡ ನಾಗವಾರ ಹೇಳಿದರು.
ಕರ್ನಾಟಕ ರಾಜ್ಯ ಸರಕಾರಿ ಎಸ್‍ಸಿ,ಎಸ್‍ಟಿ ನೌಕರರ ಸಮನ್ವಯ ಸಮಿತಿ ಮತ್ತು ಬಂಡಾಯ ಸಾಹಿತ್ಯ ಸಂಘಟನೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಮತ್ತು ಬಿ.ಬಸವಲಿಂಗಪ್ಪ ಸ್ಮರಣ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತಿದ್ದ ಅವರು, ಅಂಬೇಡ್ಕರ್ ಅವರ ಉತ್ತರಾಧಿಕಾರಿ ಎಂದರೆ ಅದು ಬಿ.ಬಸವಲಿಂಗಪ್ಪ ಅವರು ಮಾತ್ರ ಎಂದು ನಾಗವಾರ ಅಭಿಪ್ರಾಯಪಟ್ಟರು.
ಪ್ರಾಸ್ತಾವಿಕವಾಗಿ ಎಸಿ,ಎಸ್ಟಿ,ನೌಕರರ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ವೈ.ಕೆ.ಬಾಲಕೃಷ್ಣಪ್ಪ ಮಾತನಾಡಿದರು,ಚಿಂತಕ ದೊರೈರಾಜು,ಕಲಾಶ್ರೀಡಾ.ಲಕ್ಷ್ಮಣ್‍ದಾಸ್,ಜಿ.ಪಂ.ಮಾಜಿ ಸದಸ್ಯ ಕೆಂಚಮಾರಯ್ಯ,ಕಲಾವಿದ ಹನುಮಂತೇಗೌಡ,ಡಾ.ಬಸವರಾಜು,ನರಸೀಯಪ್ಪ, ಸಿಎಒ ನರಸಿಂಹಮೂರ್ತಿ,ಚಂದ್ರಪ್ಪ,ಡಾ.ಓ.ನಾಗರಾಜು,ವಕೀಲ ಮಂಜುನಾಥ್ ಹೆಚ್.ವಿ. ನಾಗಭೂಷಣ್ ಬಗ್ಗನಡು ಸೇರಿದಂತೆ ಇತರರಿದ್ದರು.