ಇನ್ಮುಂದೆ ಸಣ್ಣಪುಟ್ಟ ವ್ಯಾಪಾರಗಳಿಗೆ ಡಿಜಿಟಲ್ ರೂಪಾಯಿ ಬಳಸಬಹುದಾಗಿದೆ.
ಡಿಸೆಂಬರ್ 1ರಿಂದ ಇಂಥ ರೂಪಾಯಿಗಳಿಗೆ ಆರ್ ಬಿ ಐ ಚಾಲನೆ ನೀಡಲಿದೆ ಎಂದು ಆರ್‌ಬಿಐ ಮಂಗಳವಾರ ಹೇಳಿದೆ. ಸದ್ಯ, ನಾಲ್ಕು ನಗರಗಳಲ್ಲಿ ಇವು ಸಿಗಲಿವೆ. ಇವುಗಳಲ್ಲಿ ಬೆಂಗಳೂರು ಒಂದು.
ಆಯ್ದ ಕೆಲವು ಗ್ರಾಹಕರು ಹಾಗೂ ವ್ಯಾಪಾರಿಗಳ ನಡುವೆ ಮಾತ್ರ ಚಿಲ್ಲರೆ ವಹಿವಾಟುಗಳಿಗೆ ಡಿಜಿಟಲ್ ರೂಪಾಯಿ ಬಳಸಬಹುದಾಗಿದೆ. ಸದ್ಯ, ಎಲ್ಲರೂ ಬಳಸಲು ಸಾಧ್ಯವಿಲ್ಲ.
‘ಡಿಜಿಟಲ್ ರೂಪಾಯಿಯು ಡಿಜಿಟಲ್ ಟೋಕನ್ ರೂಪದಲ್ಲಿ ಇರಲಿದೆ. ಇದು ಕಾನೂನುಬದ್ಧ ಕರೆನ್ಸಿಯಾಗಿರುತ್ತದೆ’ ಎಂದು ಆರ್‌ಬಿಐ ಹೇಳಿದೆ.