ಗುಬ್ಬಿ : ಇತಿಹಾಸ ಪ್ರಸಿದ್ಧ ಶ್ರೀ ಗೋಸಲ ಚನ್ನಬಸವೇಶ್ವರ ಸ್ವಾಮಿಯವರ ರಥೋತ್ಸವ ಬುಧವಾರ ಮಧ್ಯಾಹ್ನ ಸಹಸ್ತಾರು ಭಕ್ತರ ಸಮ್ಮುಖದಲ್ಲಿ ವಿಜೃಂಬಣೆಯಿಂದ ನಡೆಯಿತು.
ರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ವಿಶೇಷ ಅಭಿಷೇಕ, ಸಹಸ್ರ ಬಿಲ್ವಾರ್ಚನೆ, ಆರತಿ ಪೂಜೆಗಳು ನಡೆದು ಗದ್ದುಗೆಗೆ ಹೂವಿನ ಅಲಂಕಾರ ಮಾಡಲಾಗಿತ್ತು.
ಭಕ್ತಾಧಿಗಳು ಭಕ್ತಿಯಿಂದ ರಥವನ್ನು ಎಳೆಯುವ ಮೂಲಕ ಚನ್ನಬಸವೇಶ್ವರಸ್ವಾಮಿಯನ್ನು ನೆನೆದರು. ನಾಡಿನ ನಾನಾ ಭಾಗಗಳಿಂದ ಭಕ್ತಾಗಳ ದಂಡೇ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದರು.
ಸುಡು ಬಿಸಿಲನ್ನೂ ಲೆಕ್ಕಿಸದೆ ರಥೋತ್ಸವದಲ್ಲಿ ಭಾಗವಹಿಸಿ ತಮ್ಮ ಇಷ್ಟಾರ್ಥಸಿದ್ದಿಗಾಗಿ ಮಾಡಿಕೊಂಡಿದ್ದ ಹರಕೆ ತೀರಿಸಲು ರಥಕ್ಕೆ ಹೂ, ನಿಂಬೆಹಣ್ಣು ಹಾಗೂ ಬಾಳೆಹಣ್ಣಿಗೆ ದವನ ಸಿಗಿಸಿಕೊಂಡು ರಥಕ್ಕೆ ಸೂರು ಬಿಟ್ಟು ಭಕ್ತಿ ಸಮರ್ಪಿಸಿದರು.
ಪಾನಕ ಫಲಾರ ವಿತರಣೆ: ಹುರಿ ಬಿಸಿಲಿನಲ್ಲಿ ರಥೋತ್ಸವಕ್ಕೆ ಪಾಲ್ಗೊಂಡಿದ್ದ ಭಕ್ತಾದಿಗಳಿಗೆ ದಾಹ ಮತ್ತು ಹಸಿವನ್ನು ತಣಿಸಲು ನಾನಾ ಸಂಘಟನೆಗಳಾದ ಗೂಡ್ಸ್, ಆಟೋ ಮತ್ತು ಟೆಂಪೋ ಚಾಲಕರು ಮತ್ತು ಮಾಲಿಕರ ಸಂಘ, ತಿಗಳರ ಸಮಾಜ ಗುಬ್ಬಿ, ಚಿಕ್ಕೋನಹಳ್ಳಿ ಗ್ರಾಮಸ್ಥರು, ಗೋಸಲಚನ್ನಬಸವೇಶ್ವರ ಪತ್ತಿನ ಸೌಹಾರ್ಧ ಸಹಾಕಾರಿ ಸಂಘ, ಗೋಸಲ ಚನ್ನಬಸವೇಶ್ವರರ ಸಂಘ, ವೀರಶೈವ ಸಮಾಜ, ಬೃಂದವನ ಪೇಟ್ರೋಲ್ ಬಂಕ್ ಹಾಗೂ ನಾನಾ ಸಂಘ ಸಂಸ್ಥೆಗಳಿಂದ ಮಜ್ಜಿಗೆ, ಪಾನಕ, ಹೆಸರು ಬೆಳೆ, ಬಾಳೆಹಣ್ಣಿನ ರಸಾಯನ, ಉಪಾಹಾರವನ್ನು ವಿತರಿಸಲಾಯಿತು.
ದೇವಾಲಯದ ಆಡಳಿತ ಮಂಡಳಿಯು ಭಕ್ತಾದಿಗಳಿಗೆ ದಾಸೋಹದ ವ್ಯವಸ್ಥೆ, ಕುಡಿಯುವ ನೀರು, ಕೊಬ್ಬರಿ ಮೀಠಾಯಿ, ವಿತರಿಸುವುದರ ಜತೆಗೆ ಪೊಲೀಸ್ ಬಂದೂಬಸ್ತ್, ಆರೋಗ್ಯ ಇಲಾಖೆಯಿಂದ ತುರ್ತು ಚಿಕಿತ್ಸೆ, ಆಗ್ನಿ ಶಾಮಕ ದಳದಿಂದ ಸಿಬ್ಬಂದಿಗಳನ್ನು ವ್ಯವಸ್ಥೆಗೊಳಿಸಿತ್ತು. ಜಾತ್ರೆಯಲ್ಲಿ ರಥೋತ್ಸವ ಮುಗಿದ ನಂತರ ಪಟ್ಟಣ ಪಂಚಾಯಿತಿ ಪೌರಕರ್ಮಿಕರಿಂದ ತ್ವರಿತವಾಗಿ ಸ್ವಚ್ಛತೆ ಮಾಡಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮಗಳು:
ಗದ್ದುಗೆಯಿಂದ ರಥಕ್ಕೆ ದೇವರನ್ನು ಕರೆದುಕೊಂಡು ಹೋಗುವಾಗ ಕರಡಿ ವಾದ್ಯ, ನಾದ ದ್ವಾರ, ನಂದಿಧ್ವಜ, ಗಂದ್ ಬಟ್ಟಲು ಮೆರವಣಿಗೆ, ಪತ್ತಿನ ಮೇರವಣಿಗೆ, ದೊಳ್ಳು ಕುಣಿತ ಇನ್ನೂ ಮುಂತಾದ ಜಾನಪದ ಕಲಾ ತಂಡಗಳಿಂದ ದೇವರನ್ನು ರಥದಲ್ಲಿ ಪ್ರತಿಷ್ಠಾಪಿಸಿ ಮಹಾಮಂಗಳಾರಾತಿ ಮಾಡಿದ ನಂತರ ರಥಕ್ಕೆ ಚಾಲನೀಡಲಾಯಿತು.
ಎಸಿ ಹೋಟೆಲ್ ಶಿವಣ್ಣ, ಮೋಹನ್ ಕುಮಾರ್,
ತಹಸೀಲ್ದಾರ್ ಆರತಿ.ಬಿ ಆರ್ ಐ ರಮೇಶ್, ದೇವಾಲಯದ ತೊರೆಮಠದ ರಾಜಶೇಖರ ಸ್ವಾಮಿಜಿ ಹಾಗೂ ವಿವಿಧ ಸ್ವಾಮೀಜಿಗಳ,ಚುನಾಯಿತ ಪ್ರತಿನಿಧಿಗಳು, ಪಟ್ಟಣದ 18 ಕೋಮಿನ ಮುಖಂಡರುಗಳು ಇದ್ದರು.