ಪಬ್ಲಿಕ್ ಸ್ಟೋರಿ
ಪಾವಗಡ: ಪಟ್ಟಣದಿಂದ ಮದ್ದೂರು ಹಿರಿಯ ಸಿವಿಲ್ ನ್ಯಾಯಾಲಯಕ್ಕೆ ವರ್ಗಾವಣೆಯಾದ ನ್ಯಾಯಾದೀಶರಾದ ಎಂ ಎಸ್ ಹರಿಣಿ ಅವರಿಗೆ ವಕೀಲರ ಸಂಘದ ವತಿಯಿಂದ ಬೀಳ್ಗೊಡುಗೆ ನೀಡಲಾಯಿತು.
ನ್ಯಾಯಾದೀಶರಾದ ಎಂ ಎಸ್ ಹರಿಣಿ ಮಾತನಾಡಿ, ತಾಲ್ಲೂಕಿನಲ್ಲಿ ಕಾರ್ಯ ನಿರ್ವಹಿಸಿರುವುದು ತೃಪ್ತಿ ನೀಡಿದೆ. ನಾನು ಕನ್ನಡದಲ್ಲಿ ತೀರ್ಪುಗಳನ್ನು ಬರೆಯುವುದರಿಂದ ಜನತೆಗೆ ಅನುಕೂಲವಾಗಿದೆ ಎಂಬ ವಿಚಾರ ಕೇಳಿ ಸಂತಸವಾಗಿದೆ ಎಂದರು.
ತಾಲ್ಲೂಕಿನಲ್ಲಿ ಕಾರ್ಯ ನಿರ್ವಹಿಸಿರುವುದನ್ನು ಮರೆಯಲಾಗದು. ಇಲ್ಲಿನ ವಕೀಲರು, ವಕೀಲರ ಸಂಘ, ಸಿಬ್ಬಂದಿ ಸಹಕಾರ ಶ್ಲಾಘನೀಯ ಎಂದರು.
ವಕೀಲರ ಸಂಘದ ಅಧ್ಯಕ್ಷ ಶೇಷಾನಂದನ್ ಮಾತನಾಡಿ, 3 ವರ್ಷಗಳ ಕಾಲ ಪೂರ್ಣಾವಧಿ ತಾಲ್ಲೂಕಿನಲ್ಲಿ ಕಾರ್ಯ ನಿರ್ವಹಿಸಿರುವ ನ್ಯಾಯಾದೀಶರಾದ ಎಂ ಎಸ್ ಹರಿಣಿ ಅವರು ನಿಷ್ಪಕ್ಷಪಾತ, ಪ್ರಾಮಾಣಿಕತೆ, ಶಿಸ್ತಿನಿಂದ ಕಾರ್ಯನಿರ್ವಹಿಸಿದ್ದಾರೆ.
ವಕೀಲರು, ಕಕ್ಷಿದಾರರೊಂದಿಗೆ ಸೌಜನ್ಯದಿಂದ ವರ್ತಿಸುವ ಮೂಲಕ ವೃತ್ತಿಯ ಘನತೆ ಎತ್ತಿ ಹಿಡಿದಿದ್ದಾರೆ. ಇಂತಹ ನ್ಯಾಯಾದೀಶರು ನ್ಯಾಯಾಲಯದಿಂದ ವರ್ಗಾವಣೆಯಾಗುತಿರುವುದು ನೋವಿನ ಸಂಗತಿ ಎಂದರು.
ಕಾರ್ಯದರ್ಶಿ ಎಚ್ ಎ ಪ್ರಭಾಕರ್, ಸದಾ ನಗುಮೊಗದಿಂದ, ಸಂಯಮದಿಂದ ಪ್ರಕರಣಗಳನ್ನು ಇತ್ಯರ್ಥಪಡಿಸುತ್ತಿದ್ದ ನ್ಯಾಯಾದೀಶರು, ಕಿರಿಯ ವಕೀಲರಿಗೂ ಮಾರ್ಗದರ್ಶನ ನೀಡುತ್ತಿದ್ದರು.
ನ್ಯಾಯಾಲಯದ ವಾತಾವರಣವನ್ನು ಶಿಸ್ತುಬದ್ಧವಾಗಿ ನಿರ್ವಹಿಸಿದ್ದರು ಎಂದರು.
ವಕೀಲರಾದ ಎಂ ನಾಗೇಂದ್ರಪ್ಪ, ವೆಂಕಟರಾಮರೆಡ್ಡಿ, ಅಕ್ಕಲಪ್ಪ, ಎನ್ ನಾಗೇಂದ್ರರೆಡ್ಡಿ, ನರಸಿಂಹರೆಡ್ಡಿ, ಆರ್ ಹನುಮಂತರಾಯಪ್ಪ, ಎಸ್ ಶ್ರೀನಿವಾಸರೆಡ್ಡಿ, ಜಯಸಿಂಹ ಕೆ ಆರ್, ದಿವ್ಯ ಮಾತನಾಡಿದರು.
ಎಲ್ಲ ವಕೀಲರು ನ್ಯಾಯಾದೀಶರನ್ನು ಅಭಿನಂದಿಸಿದರು.