ಶಾಸಕರ ಪುತ್ರನ ಮನೆಯಲ್ಲಿ ಸಿಕ್ಕಿದ್ದ ಹಣ
ತುಮಕೂರು: ಲೋಕಾಯುಕ್ತ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗುತ್ತಿದ್ಧ ಚೆನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷ ಪ್ಪ ಕ್ಯಾತ್ಸಂದ್ರ ಟೋಲ್ ಗೇಟ್ ನಲ್ಲಿ ಸಿಕ್ಕಿಬಿದಿದ್ದಾರೆ.
ಕೂಡಲೇ ಶಾಸಕರನ್ನು ಬಂಧಿಸಿದ ಲೋಕಾಯುಕ್ತ ಪೊಲೀಸರು ಬೆಂಗಳೂರಿನತ್ತ ಕರೆದೊಯ್ದರು.
ಲಂಚ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಮೇಲಿದ್ದ ಶಾಸಕರ ಜಾಮೀನು ಅರ್ಜಿಯನ್ನು ಹೈಕೋರ್ಟ್ ಇಂದು ವಜಾ ಮಾಡಿದ ಕೂಡಲೇ ಶಾಸಕರ ಬಂಧನಕ್ಕೆ ಲೋಕಾಯುಕ್ತರು ಬಲೆ ಬೀಸಿದ್ದರು.
ಚನ್ನಗಿರಿಯ ತಮ್ಮ ಮನೆಯಿಂದ ಹೊರಬಿದ್ದ ಶಾಸಕರು ಬೆಂಗಳೂರಿನತ್ತ ಹೊರಟಿದ್ದರು ಎನ್ನಲಾಗಿದೆ