ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ವಾರ್ಷಿಕ ಪ್ರಶಸ್ತಿ ಪ್ರಕಟಿಸಿದ್ದು, ‘ಪ್ರಜಾವಾಣಿ’ ಹಿರಿಯ ವರದಿಗಾರ ಸಿದ್ದು ಆರ್.ಜಿ.ಹಳ್ಳಿ ಅವರಿಗೆ ‘ಅತ್ಯುತ್ತಮ ಸ್ಕೂಪ್ ವರದಿ’ಗೆ ಬಿ.ಎಸ್. ವೆಂಕಟರಾಂ ಪ್ರಶಸ್ತಿ ಲಭಿಸಿದೆ.
ತುಮಕೂರು ನಗರದ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಜ. 18 ಮತ್ತು 19ರಂದು ನಡೆಯಲಿರುವ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಸಿದ್ದು ಅವರು ಮೂಲತಃ ತುಮಕೂರು ತಾಲ್ಲೂಕಿನ ರಾಮಗೊಂಡನಹಳ್ಳಿ ಗ್ರಾಮದವರು. ಆರಂಭದ ದಿನಗಳಲ್ಲಿ ತುಮಕೂರಿನ ‘ಪ್ರಜಾ ಪ್ರಗತಿ’ ಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸಿ, ನಂತರ ‘ಪ್ರಜಾವಾಣಿ’ಯಲ್ಲಿ ಕಳೆದ 15 ವರ್ಷಗಳಿಂದ ಮೈಸೂರು, ಹುಬ್ಬಳ್ಳಿ, ಹಾವೇರಿಯಲ್ಲಿ ಕರ್ತವ್ಯ ನಿರ್ವಹಿಸಿ, ಪ್ರಸ್ತುತ ಮಂಡ್ಯ ಜಿಲ್ಲಾ ವರದಿಗಾರರಾಗಿದ್ದಾರೆ.
ಹಾವೇರಿ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ನಡೆದಿದ್ದ ‘ವಿದ್ಯಾಸಿರಿ’ ಸ್ಕಾಲರ್‌ಶಿಪ್ ಹಗರಣ ಕುರಿತ ಸರಣಿ ವರದಿಗೆ ಪತ್ರಕರ್ತರ ಸಂಘದಿಂದ ‘ಅತ್ಯುತ್ತಮ ತನಿಖಾ ವರದಿ’ಗೆ ಕೊಡುವ ಟಿ.ಕೆ. ಮಲಗೊಂಡ ರಾಜ್ಯ ಪ್ರಶಸ್ತಿಯೂ ಇವರಿಗೆ ದೊರೆತಿದೆ.