ತುರುವೇಕೆರೆ:
ತಾಲ್ಲೂಕಿನ ಎಲ್ಲ ಇಲಾಖೆಗಳ ಸರ್ಕಾರಿ ನೌಕರರು, ಅನುದಾನಿತ ಹಾಗು ಅನುದಾನ ರಹಿತ ಶಾಲೆಗಳ ನೌಕರರು ಮಾರ್ಚ್ 1 ರಂದು ತಮ್ಮ ಮನೆಯಲ್ಲಿಯೇ ಇದ್ದು ಕರ್ತವ್ಯಕ್ಕೆ ಗೈರು ಹಾಜರಿ ಆಗುವ ಮೂಲಕ ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸಾಥ್ ನೀಡ ಬೇಕೆಂದು ಸಕರ್ಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ನಂರಾಜು ಮುನಿಯೂರು ನೌಕರರಿಗೆ ಮನವಿ ಮಾಡಿದರು.
ಪಟ್ಟಣದ ಮಾಯಸಂದ್ರ ರಸ್ತೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಾಚ್ 1 ರ ಸರ್ಕಾರಿ ನೌಕರರ ಅನಿರ್ದಿಷ್ಟಾವಧಿ ಮುಷ್ಕರದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಫೆ.21ರಂದು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿಯವರ ಅಧ್ಯಕ್ಷತೆಯ ಕಾರ್ಯಕಾರಣಿ ಸಭೆಯಲ್ಲಿ ಸರ್ವರ ಅಭಿಪ್ರಾಯ ತೆಗೆದುಕೊಂಡು ಎರಡು ನ್ಯಾಯುತ ಎರಡು ಬೇಡಿಕೆಗಳನ್ನು ಮಾತ್ರ ಸರ್ಕಾರದ ಮುಂದೆ ಇಡಲಿ ತೀರ್ಮಾನಿಸಲಾಯಿತು.
ಅವುಗಳಲ್ಲಿ ಒಂದು 7ನೇ ವೇತನ ಆಯೋಗದಿಂದ ಮಧ್ಯಂತರ ವರದಿಯನ್ನು ಪಡೆದು ಶೇ.40ರಷ್ಟು ವೇತನ ಹೆಚ್ಚಳ ಮಾಡುವ ಆದೇಶ ಹೊರಡಿಸಬೇಕು. ಆಗೆಯೇ ಪಂಚಾಬ್, ರಾಜಾಸ್ಥಾನ, ಜಾರ್ಖಂಡ್, ಹಿಮಾಚಲ ಪ್ರದೇಶ, ಛತೀಸ್ಗಡ, ರಾಜ್ಯಗಳ ಮಾದರಿಯಲ್ಲಿ ಎನ್ಪಿಎಸ್ ರದ್ದುಪಡಿಸಿ ಹಳೆಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು.
ಇವುಗಳಲ್ಲಿ ಯಾವುದಾರು ಒಂದು ಬೇಡಿಕೆ ಕೈಬಿಟ್ಟರೂ ಸಹ ಹೋರಾಟ ನಿಲ್ಲುವುದಿಲ್ಲ. ಹಾಗಾಗಿ ಎಲ್ಲ ಇಲಾಖೆಗಳ ನೌಕರರು ಈ ಎರಡು ಬೇಡಿಕೆಗಳು ಈಡೇರುವ ಹೊರೆವಿಗೂ ಬಿಡದೆ ಸಂಘದ ಶಕ್ತಿಯನ್ನು ಪ್ರದರ್ಶಿಸಿ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಬೇಕಿದೆ.
ಪ್ರತಿಯೊಬ್ಬ ಅಧಿಕಾರಿ, ನೌಕರರು ಬುಧವಾರ ಯಾವುದೇ ಪ್ರತಿಭಟನೆ, ಘೋಷಣೆ ಕೂಗುವಹಾಗಿಲ್ಲ, ಯಾರ ವಿರುದ್ದವೂ ಮಾತನಾಡದೇ ಕೇವಲ ಮನೆಯಲ್ಲಿಯೇ ಇದ್ದು ತಮ್ಮ ಭವಿಷ್ಯದ ಬದುಕಿಗಾಗಿ ಹೋರಾಟ ತೀವ್ರಗೊಳಿಸೋಣ ಎಂದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯದಶರ್ಿ ನಟೇಶ್, ಉಪಾಧ್ಯಕ್ಷರಾದ ಚಂದ್ರಹಾಸು, ವೀರಪ್ರಸನ್ನ, ಬಾಲಾಜಿ, ರಾಜ್ಯಪರಿಷತ್ ಸದಸ್ಯ ಗಿಡ್ಡೇಗೌಡ, ಶಿಕ್ಷಕರ ಸಂಘದ ಅಧ್ಯಕ್ಷ ಬಸವಾರಾಜು, ಕಂದಾಯ ನೌಕರರ ಸಂಘದ ಅಧ್ಯಕ್ಷ ಸುನಿಲ್ ಕುಮಾರ್, ಗ್ರಾಮಲೆಕ್ಕಿಗರ ಸಂಘದ ಅಧ್ಯಕ್ಷ ಜಗದೀಶ್, ಜಿಲ್ಲಾ ಖಜಾಂಚಿ ಷಣ್ಮಖಪ್ಪ, ತಾಲ್ಲೂಕಿನ ಎಲ್ಲಾ ಇಲಾಖೆಗಳ ನಿರ್ದೇಶಕರು, ಎನ್ಪಿಎಸ್, ಒಪಿಎಸ್ ನೌಕರರು, ನಿಗಮ ಮಂಡಳಿಗಳ ಅಧ್ಯಕ್ಷರು ಇನ್ನಿತರರು ಭಾಗವಹಿಸಿದ್ದರು.