ಪಾವಗಡ: .ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ ನಾನು ತಿನ್ನಲ್ಲ ತಿನ್ನಲು ಬಿಡಲ್ಲ ಎಂದು ಅದರೆ ೪೦/ ಕಮಿಷನ್ ಹಗರಣ ಗಳ ಸರ್ಕಾರ ವೇ ಬಿಜೆಪಿ ,ವಿಧಾನಸೌಧದ ಪ್ರತಿ ಗೋಡೆಯು ಲಂಚ ಲಂಚ ಅಂತ ಪಿಸುಗುಟ್ಟುತ್ತಿವೆ ಎಂದು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಅವರು ಇಂದು ಪಾವಗಡ ಪಟ್ಟಣದ ಹೊರವಲಯದಲ್ಲಿ ನಡೆದ ಬೃಹತ್ ಕಾಂಗ್ರೆಸ್ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ನರೇಂದ್ರ ಮೋದಿಯ ಅಚ್ಚೇದಿನ ಎಲ್ಲಿಗೆ ಬಂತು. ಗ್ಯಾಸ್ ,ಗೊಬ್ಬರ,ಆಡುಗೆ ಎಣ್ಣೆ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯು ಸೇರಿದಂತೆ ಇಂದು ಪ್ರತಿವಸ್ತುವಿನ ಬೆಲೆಯು ಏರಿದೆ ಎಂದ ಸಿದ್ಧರಾಮಯ್ಯ ಮಿಸ್ಟರ್ ನರೇಂದ್ರ ಮೋದಿ ಕರ್ನಾಟಕದ ಬಿಜೆಪಿ ಸರ್ಕಾರ ದಿನ ಲೂಟಿ ಮಾಡುತ್ತಿದ್ದರು ನೀವು ಯಾಕೆ ಕಣ್ಣು ಮುಚ್ಚಿಕುಳಿತುಕೊಂಡಿದ್ದೀರಿ ಎಂದು ಛೇಡಿಸಿದರು.
ಸ್ವಿಸ್ ಬ್ಯಾಂಕ್ ನಿಂದ ಹಣ ತಂದು ಎಲ್ಲರ ಅಕೌಂಟ್ ಗಳಿಗೆ ೧೫ ಲಕ್ಷ ಹಾಕಿಲಿಲ್ಲ ಏಕೆ ಎಂದು ಪ್ರಶ್ನಿಸಿದರು.
ನಾನು ಮಾಡಿದ ಹಲವು ಯೋಜನೆಗಳನ್ನು ಬಿಜೆಪಿ ಸರ್ಕಾರದವರು ರದ್ದು ಮಾಡಿದರು. ಬಿಜೆಪಿ ಜನರ ಆಶೀರ್ವಾದ ದಿಂದ ಆಯ್ಕೆ ಯಾದ ಸರ್ಕಾರವಲ್ಲ ಅನೈತಿಕ ಮಾರ್ಗದಿಂದ . ಶಾಸಕರನ್ನು ಖರೀದಿ ಮಾಡಿ ಸರ್ಕಾರ ಮಾಡಿದರು, ಅಧಿಕಾರಕ್ಕೆ ಬಂದಾದ ಮೇಲೆ ಬರಿ ಲೂಟಿಗೆ ಇಳಿದರು ಎಂದು ತರಾಟೆಗೆ ತೆಗೆದುಕೊಂಡರು.
ಜೆಡಿಎಸ್ ನಿಂದ ಹೋಮ ಹವನ :
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಈ ಬಾರಿಯು ಯಾವ ಪಕ್ಷಕ್ಕೂ ಬಹುಮತಬರಬಾರದು ಎಂದು ಹೋಮ ಹವನ ಮಂತ್ರ ತಂತ್ರ ಕ್ಕೆ ಮೊರೆ ಹೋಗಿದ್ದಾರೆ ಕಾಂಗ್ರೆಸ್ ನವರಿಗೆ ಜಾಸ್ತಿ ಸೀಟು ಬಂದರೆ ಕಾಂಗ್ರೆಸ್ ನವರ ಜೊತೆ ಬಿಜೆಪಿ ಗೆ ಜಾಸ್ತಿ ಬಂದರೆ ಬಿಜೆಪಿ ಯವರ ಜೊತೆ ಜೆಡಿಎಸ್ ನವರು ಹೋಗತ್ತಾರೆ.ಇವರಿಗೆ 25 ಸೀಟು ಬಂದರೆ ಹೆಚ್ಚು ಎಂದರು.
ಪಾವಗಡ ಅಭಿವೃದ್ಧಿ ಕಾಂಗ್ರೆಸ್ ನಿಂದ ಮಾತ್ರ.
ಪಾವಗಡಕ್ಕೆಕುಡಿಯುವ ನೀರು ಇರಲಿಲ್ಲ ವೆಂಕಟರಮಣಪ್ಪ ಅಂದು ಮಾಜಿ ಶಾಸಕರಾಗಿದ್ದರು.ನನ್ನ ಮೇಲೆ ಒತ್ತಾಯ ಮಾಡಿದ್ದರ ಫಲ ಇಂದು ತುಂಗಭದ್ರಾ ಹಿನ್ನೀರಿ ನಿಂದ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗುತ್ತಿದೆ.ಈ ಯೋಜನೆ ಜಾರಿಮಾಡಿದ್ದು ನಾವು ತಿಮ್ಮರಾಯಪ್ಪ ಕುಮಾರಸ್ವಾಮಿ ಅಲ್ಲ ಎಂದರು.
ಸೋಲಾರ್ ಎನರ್ಜಿ ಪ್ರಾಜೆಕ್ಟ್ ನಿಂದ ೨೦೦೦ ಮೇಗವ್ಯಾಟ್ ವಿದ್ಯುತ್ ಉತ್ಪಾದನೆ ಘಟಕ ಮಾಡಿದ್ದೇವೆ. ಇದು ಏಷ್ಯಾದಲ್ಲೇ ಪ್ರಥಮ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತ್ತು ಎಂದರು.
ಪಾವಗಡ ಮಲೆನಾಡು ಆಗುತ್ತದೆ. ಎತ್ತಿನ ಹೊಳೆಯಿಂದಲ್ಲೂ ಪಾವಗಡಕ್ಕೆ ನೀರು ಬರುತ್ತದೆ ಎಂದರು.
ಪಾವಗಡಕ್ಕೆ ಶಿಘ್ರವೇ ನೀರು ಬೇಕು ಎಂದರೆ ಕಾಂಗ್ರೆಸ್ ಅಭ್ಯರ್ಥಿ ಹೆಚ್ ವಿ ವೆಂಕಟೇಶ ರನ್ನು ಗೆಲ್ಲಿಸಿ ವಿಧಾನ ಸೌಧಕ್ಕೆ ಕಳುಹಿಸಿ ,ಪಾವಗಡಕ್ಕೆ ಎನ್ನುಬೇಕು ಎಂದು ವೆಂಕಟೇಶ್ ಕೇಳುತ್ತಾರೋ ಅವೆಲ್ಲಾ ಕೆಲಸ ಮಾಡಿಕೋಡುತ್ತೇವೆ ಎಂದು ಭರವಸೆ ನೀಡಿದರು.
ಕರ್ನಾಟಕದ 224 ಕ್ಷೇತ್ರದ ಯಾವೊಂದು ಕ್ಷೇತ್ರಕ್ಕೂ 14/ಇರುವ ಮುಸ್ಲಿಂ ರಿಗೆ ,2/ ಇರುವ ಕ್ರಿಶ್ಚಿಯನ್ ರಿಗೆ ಬಿಜೆಪಿ ಟಿಕೇಟ್ ನೀಡಿಲ್ಲ ,ಮುಸ್ಲಿಂರಿಗೆ ಸ್ವಾಭಿಮಾನ ವಿದರೆ ಬಿಜೆಪಿ ಹಾಗೂ ಜೆಡಿಎಸ್ ಗೆ ವೋಟ್ ಹಾಕಬಾರದು ಎಂದು ಹೇಳಿದ ಸಿದ್ದರಾಮಯ್ಯ
ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಲಿರುವ ಗೃಹ ಜ್ಯೋತಿ ಗೃಹ ಲಕ್ಷ್ಮೀ, ಅನ್ನ ಭಾಗ್ಯ ,ನಿರುದ್ಯೋಗ ಪದವಿದರರಿಗೆ ಎರಡು ವರ್ಷಗಳ ಕಾಲ ೩೦೦೦ ರೂ ಡಿಪ್ಲೊಮಾ ಪದವಿದರರಿಗೆ ೧೫೦೦ ಮಹಿಳೆಯರಿಗೆ ಉಚಿತ ಬಸ್ ಪಾಸ್ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಮಾಜಿ ಸಚಿವ ವೆಂಕಟರಮಣಪ್ಪ,ಎ ಪಿ ಪಿ ಸಿ ಸಿ ಮಾಜಿ ಅಧ್ಯಕ್ಷ ರಘುವೀರ್ ರೆಡ್ಡಿ, ಕಾಂಗ್ರೆಸ್ ಅಭ್ಯರ್ಥಿ ಹೆಚ್ ವಿ ವೆಂಕಟೇಶ್ ಮಾತನಾಡಿದರು.
ಈ ವೇಳೆಯಲ್ಲಿ ಜಿಲ್ಲಾ ಅಧ್ಯಕ್ಷ ಚಂದ್ರಶೇಖರಗೌಡ. ಸುದೇಶ್ ಬಾಬು. ಹೆಚ್ ವಿ ಕುಮಾರಸ್ವಾಮಿ ಮಾನಂ ವೆಂಕಟಸ್ವಾಮಿ. ರಾಮಾಂಜಿನಪ್ಪ. ಶಂಕರ್ ರೆಡ್ಡಿ. ರವಿ, ರಾಜೇಶ್ ,ಅನಿಲ್, ಮುಗಾದಳ ಬೆಟ್ಟ ನರಸಿಂಹಯ್ಯ. ಕುರುಬರ ಸಂಘದ ಜಿಲ್ಲಾ ಅಧ್ಯಕ್ಷ ಮೈಲಪ್ಪ. ಬತ್ತಿನೇನಿ ನಾನಿ. ಮಂಜಣ್ಣ. ಶ್ರೀ ರಾಮ್. ಉಮೇಶ್. ಭಗವಂತಪ್ಪ. ಪರಿಟಾಲ ಭರತ್. ಆನಂದಪ್ಪ. ರವಿ. ರೇವಣ್ಣ. ಬಸವರಾಜು.ಮಾರಪ್ಪ,ದಿವಾಕರ್,ಶ್ರೀನಿವಾಸ ಮತ್ತಿತರರು ಹಾಜರಿದ್ದರು.