Publicstory/prajayoga
ಬೆಂಗಳೂರು: ಆ.1ರಿಂದ 15ರ ವೆರೆಗೆ ಪ್ರತೀ ಮನೆಗಳಲ್ಲಿ ರಷ್ಟ್ರ ಧ್ವಜ ಹಾರಿಸುವ ಉದ್ದೇಶದಿಂದ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ರಾಜ್ಯ ಸರ್ಕಾರ 1.08 ಕೋಟಿ ಧ್ವಜವನ್ನು ವಿತರಿಸಿದೆ ಎಂದು ಮುಖ್ಯಂಮತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡದ ಅವರು, ಹಲವು ಸಂಘ ಸಂಸ್ಥೆಗಳು ಸೇರಿದಂತೆ, ಪ್ರತೀ ಗ್ರಾಮ ಪಂಚಾಯ್ತಿಗೆ 400-500 ಬಾವುಟಗಳನ್ನು ನೀಡಲಾಗಿದೆ. ಇಲ್ಲೀವರೆಗೆ ಸುಮಾರು 1.20ಕೋಟಿ ಅಧಿಕ ಬಾವುಟಗಳನ್ನು ವಿತರಿಸಲಾಗಿದೆ. ಎರಡು ಮೂರು ದಿನಗಳಿಂದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆಗೆ ತಯಾರಿ ನಡೆದಿದೆ. ಯುವಜನರು ಧ್ವಜಗಳನ್ನು ಹಿಡಿದು ಮೆರವಣಿಗೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ ಎಂದರು.
ಆ.15ನ್ನು ಎಲ್ಲರೂ ಸಂಭ್ರಮದಿಂದ ಆಚರಿಸಬೇಕು ಹಾಗೂ ರಾಷ್ಟ್ರ ವನ್ನು ಮತ್ತೊಷ್ಟು ಶಕ್ತಿಶಾಲಿಯಾಗಿ ಮಾಡಲು ಸಂಕಲ್ಪ ತೊಡಬೇಕಿದೆ. ಸ್ವಾತಂತ್ರ್ಯೋತ್ಸವ ಆಚರಣೆ ಮೂಲಕ ನಾವೆಲ್ಲಾ ಒಂದೇ ಎಂಬ ಸಂದೇಶವನ್ನು ಸಾರಬೇಕಿದೆ ಎಂದು ತಿಳಿಸಿದರು.