Publicstory/prajayoga
ಶಿರಾ: ಮಾನವನು ಜೀವನವನ್ನು ಹೇಗೆ ಸನ್ಮಾರ್ಗದಲ್ಲಿ ನಡೆಸಿಕೊಂಡು ಹೋಗಬೇಕು ಎಂದು ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ನೀಡಿರುವ ಸಂದೇಶ ಇಡೀ ಪ್ರಪಂಚಕ್ಕೆ ಮಾದರಿಯಾಗಿದೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.
ಅವರು ನಗರದ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಭಗವದ್ಗೀತೆಯಲ್ಲಿ ನಾವು ಮಾಡುವ ಕೆಲಸಗಳಲ್ಲಿ ನಿಷ್ಠೆಯಿಂದ ಶ್ರದ್ಧೆಯಿಂದ ಮಾಡಿ. ಪಲಾಪೇಕ್ಷೆಗಳನ್ನು ದೇವರಿಗೆ ಬಿಡಿ. ಪ್ರಯತ್ನಗಳನ್ನು ಕಡಿಮೆ ಮಾಡಿ ಫಲವನ್ನು ಬೇಡಿದರೆ ಸಾಧ್ಯವಾಗುವುದಿಲ್ಲ ಎಂದು ಶ್ರೀಕೃಷ್ಣ ಪರಮಾತ್ಮನು ನುಡಿದಿದ್ದಾನೆ. ಜಗತ್ತಿನಲ್ಲಿ ಯುದ್ಧವನ್ನು ಗೆದ್ದವನಿಂದ ಒಂದು ಇತಿಹಾಸ ನಿರ್ಮಾಣವಾದರೆ, ಸೋತವನಿಂದಲೂ ಒಂದು ಇತಿಹಾಸ ನಿರ್ಮಾಣವಾಗುತ್ತದೆ. ಆದರೆ ಇದನ್ನು ಹೀಯಾಳಿಸುವವರಿಗೆ ಏನು ದೊರಕುವುದಿಲ್ಲ. ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಮನಸ್ಸನ್ನು ಸ್ಥಿರವಾಗಿ ಶಾಂತಿಯುತವಾಗಿ ನಡೆಯಬೇಕು ಎಂದು ಶ್ರೀಕೃಷ್ಣನು ನುಡಿದಿದ್ದಾರೆ. ಆದ್ದರಿಂದ ನಾವೆಲ್ಲರೂ ಶ್ರೀಕೃಷ್ಣನ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಚಂಗಾವರ ಮಾರಣ್ಣ, ಶಿರಾ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹೆಚ್.ಮಾರುತೀಶ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ತರೂರು ಬಸವರಾಜ್,
ಮುಖಂಡರಾದ ಮುದಿಮಡು ಮಂಜುನಾಥ್, ಬಿಜೆಪಿ ಮಹಿಳಾ ಘಟಕದ ಕಾರ್ಯದರ್ಶಿ ಲತಾ ಕೃಷ್ಣ, ಬಿಜೆಪಿ ಯುವ ಘಟಕದ ಅಧ್ಯಕ್ಷ ಮದು ಯಾದವ್, ಗೌಡಪ್ಪ, ಈರಣ್ಣ, ರಾಜಣ್ಣ, ಮಂಜುನಾಥ್, ತಿಮ್ಮರಾಜ್, ಮೂಡಲಗಿರಿಯಪ್ಪ, ನಾಗಣ್ಣ, ರಾಮು, ನಾಗರಾಜ್, ಬಾಬು, ನರೇಂದ್ರ, ಸಂತೋಷ್ ಸೇರಿದಂತೆ ಹಲವರು ಹಾಜರಿದ್ದರು.