Publicstory/prajayoga
ಸಿದ್ದು ಬಿ ಎಸ್, ಸೂರನಹಳ್ಳಿ
ರಾಜ್ಯದ ಜನರಿಗೆ ಭಾಗ್ಯಗಳ ಸುರಿಮಳೆಯನ್ನೇ ಸುರಿಸಿದ ಭಾಗ್ಯಗಳ ಸರದಾರ ಸಿದ್ದರಾಮಯ್ಯ ಅವರು ಇದೀಗ 75 ವರ್ಷದ ಅಮೃತ ಘಳಿಗೆಗೆ ಕಾಲಿಟ್ಟಿದ್ದಾರೆ. ಅವರ ರಾಜಕೀಯ ಜೀವನದ ಹತ್ತು ಹಲವು ಯೋಜನೆಗಳನ್ನು ರಾಜ್ಯ ಕಟ್ಟಕಡೆಯ ಪ್ರಜೆಗೂ ತಲುಪಿ ಜನತೆ ಸುಭೀಕ್ಷದಿಂದ ಜೀವಿಸುವಂತಾಗಿದೆ. ಹಾಗೆಯೇ ಅವರು ಜಾರಿಗೆ ತಂದ ಯೋಜನೆಗಳನ್ನು ನಾವು ನೋಡುತ್ತಾ ಹೋದಂತೆ.
ಗ್ರಾಮಕ್ಕೊಂದು ಆಟದ ಮೈದಾನ, ಪ್ರತಿ ಗ್ರಾಮದಲ್ಲೂ ಶುದ್ಧ ಕುಡಿಯುವ ನೀರಿನ ಘಟಕ, ರುದ್ರಭೂಮಿ ನಿರ್ಮಾಣ, ಕುರಿ-ದನದ ದೊಡ್ಡಿ, ಧಾನ್ಯಗಳ ಒಕ್ಕಲು ಕಣ, ಬಯಲು ರಂಗಮಂದಿರ ಸ್ವಯಂ ಉದ್ಯೋಗ, ಕೌಶಲ್ಯ ತರಬೇತಿ, ನಮ್ಮ ಹಳ್ಳಿ – ನಮ್ಮ ನೀರು, ನಮ್ಮ ಹೊಲ – ನಮ್ಮ ದಾರಿ, ನಮ್ಮೂರ ಕೆರೆ, ರಸ್ತೆ ನಿರ್ಮಾಣ, ನಾಗರಿಕ ಸೇವಾ ಕೇಂದ್ರ, ಸಾರ್ವಜನಿಕ ಗ್ರಂಥಾಲಯ, ಮನೆಗೊಂದು ಶೌಚಾಲಯ ಹೀಗೆ ಅನೇಕ 156 ಜನಪರ ಕಾರ್ಯಕ್ರಮಗಳನ್ನು ತಮ್ಮ ಮುಖ್ಯಮಂತ್ರಿ ಅವಧಿಯಲ್ಲಿ ಮುಂಚೂಣಿಯಲ್ಲಿರುವಂತೆ ಮಾಡಿದರು.
1. ಅನ್ನಭಾಗ್ಯ:-
ಈ ಮೂಲಕ ಭಾರತ ಸರ್ಕಾರದ 3 ಪ್ರಶಸ್ತಿಗಳನ್ನು ರಾಜ್ಯ ಪಡೆಯುವಂತೆ ಮಾಡಿದರು. ಮುಖ್ಯಮಂತ್ರಿ ಗ್ರಾಮ ವಿಕಾಸ ಎಂಬ ಹೊಸ ಯೋಜನೆ ಮೂಲಕ ಒಂದು ಗ್ರಾಮಕ್ಕೆ ಒಂದು ಕೋಟಿ ರೂ. ಗಳಂತೆ ಒಂದು ಸಾವಿರ ಗ್ರಾಮಗಳಿಗೆ ಹಣ ನೀಡಿದರು.
ಈ ಯೋಜನೆ ಸಿದ್ದರಾಮಯ್ಯನವರ ಜೀವನ ಅನುಭವದಿಂದ ಮೂಡಿದ ಅಗಾಧ ಅರಿವಿನ ಚಿಂತನೆಯ ಯೋಜನೆ. ಹಸಿವು ಮುಕ್ತಗೊಳಿಸುವ ಬಿರುಸಿನ ಹೆಜ್ಜೆ ಇದು. ಆದ್ದರಿಂದಲೇ ಬಸವ ಜಯಂತಿ ದಿನ ಸಿದ್ದರಾಮಯ್ಯನವರು ಪ್ರಮಾಣವಚನ ಸ್ವೀಕರಿಸಿದ ಕೇವಲ ಅರ್ಧಗಂಟೆಯಲ್ಲಿ ಎಲ್ಲ ಜಾತಿ ಜನಾಂಗದ ಬಡವರಿಗೆ 10 ಕೆಜಿಯಂತೆ ಪ್ರತಿ ಕುಟುಂಬಕ್ಕೆ 30 ಕೆ.ಜಿ ಅಕ್ಕಿ ಸಿಗುವ ನಿಟ್ಟಿನಲ್ಲಿ ಯೋಜನೆ ಜಾರಿಗೆ ತಂದರು.
2. ಇಂದಿರಾ ಕ್ಯಾಂಟೀನ್:-
ಅನ್ನಭಾಗ್ಯದ ಜೊತೆಗೆ ಬಡವರಿಗೆ ಆಹಾರ ಭಾಗ್ಯವನ್ನು ನೀಡಲಿಕ್ಕಾಗಿ ತಂದ ಮಹತ್ವಾಕಾಂಕ್ಷಿ ಯೋಜನೆ. 2017- 18ನೇ ಸಾಲಿನ ಬಜೆಟ್ ನಲ್ಲಿ ಶ್ರೀಸಾಮಾನ್ಯ ಜನರಿಗೆ ಕಡಿಮೆ ದರದಲ್ಲಿ ಅಂದರೆ ಕೇವಲ 5 ರೂ. ಗೆ ತಿಂಡಿ. 10 ರೂ. ಗೆ ಮಧ್ಯಾಹ್ನ ಮತ್ತು ರಾತ್ರಿ ಊಟದ ಕಾರ್ಯಕ್ರಮ ಘೋಷಣೆ.
3. ಕ್ಷೀರಭಾಗ್ಯ ಯೋಜನೆ :-
ಯೋಜನೆಯನ್ನು ರಾಜ್ಯದಲ್ಲಿ ಚಾಲನೆಗೆ ತಂದಿರುವ ಹಿಂದೆ ಬಹುದೊಡ್ಡ ಉದ್ದೇಶವಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವುದನ್ನು ಕಂಡು, ಮಧ್ಯಾಹ್ನದ ವೇಳೆಯಲ್ಲಿ ಅಂಗನವಾಡಿ ಮತ್ತು ಸರ್ಕಾರಿ ಶಾಲೆಯ ಮಕ್ಕಳಿಗೆ ವಾರದಲ್ಲಿ ಐದು ದಿನ ಕೆನೆಭರಿತ 150 ಎಂ.ಎಲ್ ಹಾಲಿನ ಪೂರೈಕೆ 2013 ರಿಂದ ಜಾರಿಗೊಳಿಸಿದರು.
4. ವಿದ್ಯಾಸಿರಿ :-
ಕೆಳವರ್ಗಗಳಿಗೆ ಎಟುಕಲಾರದ ಸಂಪತ್ತಾಗಿದ್ದ ಉನ್ನತ ಶಿಕ್ಷಣವು ಸರ್ವರಿಗೂ ಸಮಾನವಾಗಿ ದೊರಕುವಂತೆ ಮಾಡುವ ಸದುದ್ದೇಶದಿಂದ ವಿದ್ಯಾಸಿರಿ ಯೋಜನೆಯನ್ನು ಜಾರಿಗೊಳಿಸಲಾಯಿತು. ಅಲ್ಪಸಂಖ್ಯಾತ ಬಡ ವಿದ್ಯಾರ್ಥಿಗಳಿಗೆ ಸರ್ಕಾರಿ ಹಾಸ್ಟೆಲ್ ಗಳಲ್ಲಿ ಪ್ರವೇಶ ಸಿಗದೇ ಹೋದರೆ ಅಂತಹ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ರೂ. 1500 ಅಂತೆ 10 ತಿಂಗಳಿಗೆ ಭೋಜನ ವೆಚ್ಚವನ್ನು ಸರ್ಕಾರ ಭರಿಸುವ ಕಾರ್ಯಕ್ರಮ.
5. ಋಣಮುಕ್ತ ಭಾಗ್ಯ :-
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ 1978 ರಿಂದ ಹಿಂದುಳಿದ ವರ್ಗಗಳಿಗೆ ಮಂಜೂರು ಮಾಡಿದ್ದ ಸಾಲ ಮತ್ತು ಬಡ್ಡಿ ಮರುಪಾವತಿ ಮಾಡದೇ ಹಿಂದುಳಿದ ವರ್ಗಗಳು ತೊಂದರೆಯಲ್ಲಿ ಇದ್ದುದರಿಂದ ಸಿದ್ದರಾಮಯ್ಯನವರು ಅಸಲು ಬಡ್ಡಿ ಬಾಕಿ ಇದ್ದರೂ 514 ಕೋಟಿಗಳ ಸಾಲ ಮನ್ನಾ ಮಾಡಿ 4.98 ಲಕ್ಷ ಹಿಂದುಳಿದ ವರ್ಗಗಳ ಫಲಾನುಭವಿಗಳನ್ನು ಸಾಲದಿಂದ ಋಣ ಮುಕ್ತರನ್ನಾಗಿಸಿ, ನೆಮ್ಮದಿಯಿಂದ ಜೀವನ ನಡೆಸಲು ದಾರಿ ಮಾಡಿಕೊಟ್ಟರು.
6. ಕೃಷಿ ಭಾಗ್ಯ ಯೋಜನೆ :-
ರೈತರಿಗೆ ಸಕಾಲದಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಣೆ, ಮಣ್ಣಿನ ಆರೋಗ್ಯ ಕಾಪಾಡಲು ಮಣ್ಣು ಆರೋಗ್ಯ ಚೀಟಿ ವಿತರಣೆ, ಸಾವಯವ ಕೃಷಿಗೆ ಉತ್ತೇಜನ, ಮಳೆಯಾಶ್ರಿತ ರೈತರಿಗೆ ಕೃಷಿ ಭಾಗ್ಯ ಯೋಜನೆಯಲ್ಲಿ ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಮತ್ತು ಕೃಷಿ ಯಾಂತ್ರೀಕರಣಕ್ಕೆ ಆದ್ಯತೆ ನೀಡಲಾಯಿತು.
7. ರೈತ ಬೆಳಕು :-
ರೈತ ಬೆಳಕು ಎಂಬ ಹೊಸ ಕಾರ್ಯಕ್ರಮವನ್ನು 2018 – 19ರ ಬಜೆಟ್ ನಲ್ಲಿ ಘೋಷಿಸಲಾಯಿತು. ಯೋಜನೆಯಿಂದ ರಣಭೂಮಿಯಲ್ಲಿ ಬೆಳೆ ಬೆಳೆಯುವ ರೈತರಿಗೆ ಒಂದು ಎಕರೆಗೆ ರೂ 5 ಸಾವಿರ, ಗರಿಷ್ಠ ರೂ 10 ಸಾವಿರ ರೂ. ಗಳ ಸಹಾಯಧನವನ್ನು ರೈತರ ಖಾತೆಗೆ ಜಮಾ ಮಾಡುವ ವ್ಯವಸ್ಥೆ ಆಯಿತು.
8. ಬಯಲು ಬಹಿರ್ದೆಸೆ ಮುಕ್ತ ರಾಜ್ಯ:-
ಕರ್ನಾಟಕವನ್ನು ಬಯಲು ಬಹಿರ್ದೆಸೆ ಮುಕ್ತ ರಾಜ್ಯವಾಗಿಸಬೇಕೆಂಬ ಸಂಕಲ್ಪದಡಿಯಲ್ಲಿನ ಯೋಜನೆ ಕರ್ನಾಟಕವನ್ನು ರಾಷ್ಟ್ರಮಟ್ಟದಲ್ಲಿ ಮುಂಚೂಣಿಯಲ್ಲಿರಿಸಿದೆ. 2018-19 ನೆ ಸಾಲಿನ ಅಂತ್ಯಕ್ಕೆ 37.63 ಲಕ್ಷ ಶೌಚಾಲಯಗಳನ್ನು ನಿರ್ಮಿಸಿ ಶೇ. 87% ರಷ್ಟು ಸಾಧನೆ ಮಾಡಿ ಈ ಬಯಲು ಬಹಿರ್ದೆಸೆ ಮುಕ್ತ ರಾಜ್ಯ ಕಾರ್ಯಕ್ರಮದ ಸಾಧನೆಗಾಗಿ ಭಾರತ ಸರ್ಕಾರವು ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.
9. ಗ್ರಾಮ ವಿಕಾಸ ಯೋಜನೆ:-
ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಜನರಿಗೂ ನಗರ ಪ್ರದೇಶದ ಜನರಿಗೆ ಒದಗಿಸಿರುವ ಸೌಕರ್ಯವನ್ನು ಒದಗಿಸಲು ಪ್ರತಿ ಗ್ರಾಮಕ್ಕೆ ಒಂದು ಕೋಟಿಯಂತೆ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ ಎಂಬ ಹೊಸ ಯೋಜನೆಯನ್ನು ಜಾರಿಗೊಳಿಸಲಾಯಿತು.
10. ನಮ್ಮ ಗ್ರಾಮ ನಮ್ಮ ರಸ್ತೆ:-
ಗ್ರಾಮೀಣ ಪ್ರದೇಶದ ರಸ್ತೆಗಳು ಎಷ್ಟು ಸುರಕ್ಷಿತ ವಾಗಿವೆ. ಅಭಿವೃದ್ಧಿ ಮಾನದಂಡವನ್ನು ಗುರುತಿಸುವಾಗ ರಸ್ತೆ ನಿರ್ಮಾಣದ ಪ್ರಗತಿಯನ್ನು ಪರಿಗಣಿಸಬೇಕೆಂದು ಗ್ರಾಮೀಣ ಪ್ರದೇಶಗಳಿಗೆ ಸರ್ವ ಋತು ರಸ್ತೆಗಳ ಸಂಪರ್ಕವನ್ನು ಕಲ್ಪಿಸುವುದರ ಜೊತೆಗೆ ರಸ್ತೆಗಳ ನಿರ್ವಹಣೆ ಅಭಿವೃದ್ಧಿಗಾಗಿ, ಸಿದ್ದರಾಮಯ್ಯರ ಅವಧಿಯಲ್ಲಿ ರೂ 4.832 ಕೋಟಿ ಹಣ ಬಿಡುಗಡೆ ಮಾಡಲಾಯಿತು ಮತ್ತು 9,983 ಕಿ.ಮೀ ರಸ್ತೆ ಅಭಿವೃದ್ಧಿಯಾಯಿತು.
11. ವಸತಿ ಭಾಗ್ಯ ಯೋಜನೆ:-
ಕರ್ನಾಟಕದಲ್ಲಿ ಗುಡಿಸಲು ಮುಕ್ತ ರಾಜ್ಯವನ್ನಾಗಿಸುವ ಉದ್ದೇಶದಿಂದ ಸೂರಿಗಾಗಿ ಕನಸು ಕಂಡು ಮಣ್ಣಾಗಿ ಹೋದವರ ಕನಸು ನನಸಾಗಲೆಂದು ವಸತಿ ಭಾಗ್ಯ ಯೋಜನೆಯನ್ನು ಮತ್ತಷ್ಟು ಪುನಶ್ಚೇತನಗೊಳಿಸಲು ಸಿದ್ದರಾಮಯ್ಯನವರು ಪಣ ತೊಟ್ಟರು. ಇವರ ಅವಧಿಯಲ್ಲಿ 13.95 ಲಕ್ಷ ಮನೆಗಳನ್ನು ನಿರ್ಮಿಸಿ ದಾಖಲೆ ಮಾಡಿತು. ವಸತಿ ಕಾರ್ಯಕ್ರಮಕ್ಕೆ 15.391 ಕೋಟಿ ಹಣವನ್ನು ವೆಚ್ಚ ಮಾಡಲಾಯಿತು.
12. ಪಶು ಭಾಗ್ಯ ಯೋಜನೆ :-
ಪಶುಸಂಗೋಪನೆಗೆ ಉತ್ತೇಜನ ನೀಡಿ ಬಡವರ ನಿರಂತರ ಆದಾಯ ಒಂದು ಸಲುವಾಗಿ ಹೈನುಗಾರಿಕೆ ಕೋಳಿ ಸಾಕಾಣಿಕೆ ಕುರಿ ಸಾಕಾಣಿಕೆ ಮುಂತಾದ ಕೃಷಿ ಸಂಬಂಧಿ ಚಟುವಟಿಕೆಗಳನ್ನು ನಡೆಸಲು ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇಕಡ 50% ರಷ್ಟು ಸಹಾಯಧನ ಸೇರಿದಂತೆ ರೂ 60,000 ಮತ್ತು ಸಾಮಾನ್ಯ ವರ್ಗದವರಿಗೆ ಶೇಕಡ 25% ರಷ್ಟು ಸಹಾಯಧನ ಸೇರಿದಂತೆ 40,000 ರೂ ಘಟಕ ವೆಚ್ಚದಲ್ಲಿ ಸಹಾಯ ನೀಡಲಾಯಿತು.
13.ಕುರಿಗಾಹಿ ಯೋಜನೆ :-
ಅಲೆಮಾರಿ ಕುರಿಗಾರರ ಮಂದೆಯಲ್ಲಿ ಕನಿಷ್ಠ 500 ರಿಂದ 1000 ದವರಗೆ ಕುರಿ ಗಳಿರುತ್ತವೆ. ಈ ಕುರಿಗಾರರು ಒಂದು ಬಾರಿ ಗ್ರಾಮ ಬಿಟ್ಟರೆ ಪುನಹ ಅವರ ಗ್ರಾಮದ ಹಟ್ಟಿಯನ್ನು ಸೇರುವುದು ಒಂದು ವರ್ಷದ ನಂತರವೇ. ಇಂತಹವರನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಕುರಿಗಾಹಿ ಯೋಜನೆಯನ್ನು ಜಾರಿಗೆ ತಂದರು. ಆಕಸ್ಮಿಕವಾಗಿ ಸಿಡಿಲು ಬಡಿದು ಕುರಿಗಳು ಸತ್ತರೆ, ರೋಗಕ್ಕೆ ತುತ್ತಾದರೆ, ಪ್ರವಾಹದಲ್ಲಿ ಸಿಕ್ಕಿ ಮೃತಪಟ್ಟರೆ, ಅಪಘಾತದಲ್ಲಿ ಸತ್ತರೆ ಪ್ರತಿ ಕುರಿಗೆ 5 ಸಾವಿರ ಪರಿಹಾರ ನೀಡುವುದೇ ಈ ಯೋಜನೆಯ ಉದ್ದೇಶವಾಗಿದೆ.
14. ಪಡಸಾಲೆ ಯೋಜನೆ :-
ಕಂದಾಯ ಇಲಾಖೆಯಿಂದ ಸಾರ್ವಜನಿಕರಿಗೆ ನೀಡಲಾಗುವ ಪಡಿತರ ಚೀಟಿ ಕಂದಾಯ ಮತ್ತು ಸರ್ವೆ ದಾಖಲೆಗಳ ದೃಢೀಕರಣದ ನಕಲು, ಪಹಣಿ ಪತ್ರ ಹಕ್ಕು ಬದಲಾವಣೆ ಹಾಗೂ ವಿವಿಧ ಪ್ರಮಾಣಪತ್ರಗಳ ಸೇವೆಗಳನ್ನು ತಾಲೂಕು ಕಚೇರಿಯಲ್ಲಿ ಒಂದೇ ಸೂರಿನಡಿಯಲ್ಲಿ ನೀಡುವ ಉದ್ದೇಶದಿಂದ ರಾಜ್ಯದ ಎಲ್ಲ ತಾಲೂಕುಗಳಲ್ಲಿ ಪಡಸಾಲೆ ಯೋಜನೆ ಜಾರಿ ತರಲಾಯಿತು
15. ಮಾತೃಪೂರ್ಣ ಯೋಜನೆ:-
ಆರೋಗ್ಯವಂತ ಮಕ್ಕಳ ಪೋಷಣೆಗೆ ತಾಯಂದಿರ ಆರೋಗ್ಯ ಅಷ್ಟೇ ಮುಖ್ಯ ಅರಿವಿನ ಬೆಳಕಿನಲ್ಲಿ ರೂಪಿಸಿದ್ದೇ ಹುಟ್ಟುವ ಮಕ್ಕಳು ಆರೋಗ್ಯವಂತರಾಗಿರಲು, ಗರ್ಭಿಣಿ ಮತ್ತು ಬಾಣಂತಿಯರಿಗೆ ಪೋಷಕಾಂಶಗಳನ್ನು ಒದಗಿಸುವ ಯೋಜನೆ ಮಾತೃಪೂರ್ಣ ಯೋಜನೆ ಜಾರಿಗೆ ತಂದರು.
16. ಮನಸ್ವಿನಿ ಯೋಜನೆ :-
ಮಹಿಳೆಯರ ಸಬಲೀಕರಣವನ್ನು ಪುಷ್ಟಿಗೊಳಿಸುವ ಯೋಜನೆಯಾಗಿದೆ. ಬಡತನ ರೇಖೆಗಿಂತ ಕೆಳಗಿರುವ 40 ವರ್ಷ ದಾಟಿದ ಹೆಣ್ಣುಮಕ್ಕಳು ಮದುವೆಯಾಗದೆ ಮನೆಯಲ್ಲಿಯೇ ಉಳಿದವುಗಳ ಬಗ್ಗೆ ಚಿಂತೆ ಮಾಡುತ್ತಾರೆ. ಮದುವೆಯಾಗದೆ ಉಳಿದಿರುವಂತ ಮಹಿಳೆಯರಿಗೆ ರೂ 500 ಮಾಸಾಶನ ನೀಡುವ ಯೋಜನೆಯಾಗಿದೆ ಇದಾಗಿದೆ.
17. ಮೈತ್ರಿ :-
ತೃತೀಯ ಲಿಂಗಿಗಳಿಗೆ ಮೈತ್ರಿ ಎಂಬ ಹೊಸ ಯೋಜನೆ ಜಾರಿಗೆ ತಂದು, ಉದ್ಯೋಗವಕಾಶಗಳಿಂದ ವಂಚಿತರಾಗಿ ಸಮಾಜದ ಅವಕೃಪೆಗೆ ಒಳಗಾಗಿರುವ ಲೈಂಗಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ರೂ. 500 ಶಾಸನ ಜಾರಿಗೆ ತರಲಾಗಿದೆ.
18. ಹರೀಶ್ ಸಾಂತ್ವನ ಯೋಜನೆ:-
ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಜೀವ ಉಳಿಸಲು ಹಣ ಇಲ್ಲ ಎಂಬುದು ಅಡ್ಡಿಯಾಗಬಾರದು ಎಂದು, ಬಡವ-ಬಲ್ಲಿದ ಯಾರೇ ಆಗಲಿ ಅಪಘಾತದಂತಹ ತುರ್ತು ಗಳಿಗೆಯಲ್ಲಿ ಸೂಕ್ತ ಚಿಕಿತ್ಸೆ ದೊರಕಿಸಿ ಜೀವ ಉಳಿಸಬೇಕು. ಇಂತಹದೊಂದು ಜೀವ ಕಾಳಜಿಯುಳ್ಳ ಆದೇಶ ದೇಶದಲ್ಲಿ ಮೊದಲು ಎನ್ನಬಹುದಾದ ಮಹತ್ವಕಾಂಕ್ಷೆಯ ಹರೀಶ್ ಸಾಂತ್ವನ ಯೋಜನೆಯನ್ನು ಜಾರಿಗೆ ತರಲಾಗಿದೆ.
19. ಇನ್ ವೆಸ್ಟ್ ಕರ್ನಾಟಕ :-
ಕರ್ನಾಟಕ ಹೂಡಿಕೆದಾರರ ನೆಚ್ಚಿನ ತಾಣ. ರಾಜ್ಯದ ಕೈಗಾರಿಕಾ ಸ್ನೇಹಿ ಕಾನೂನುಗಳು ಬಂಡವಾಳ ಹೂಡಿಕೆ ಉತ್ತೇಜನ. 2016 ರಲ್ಲಿ ಈ ಯೋಜನೆ ಜಾರಿ.
21. ಮೂಢ ನಂಬಿಕೆ ವಿರೋಧಿ ಕಾಯ್ದೆ:-
ಸಮಾಜದಲ್ಲಿನ ಮೂಢನಂಬಿಕೆಗಳು, ಅಮಾನವೀಯ ದೃಷ್ಟ ಪದ್ಧತಿಗಳು ಹಾಗೂ ವಾಮಾಚಾರಗಳನ್ನು ಕಣ್ಣಾರೆ ಕಂಡ ಸಿದ್ದರಾಮಯ್ಯ ಅವರು, ಇವುಗಳ ನಿರ್ಮೂಲನೆ ವಿಧೇಯಕ-2017 ಕಾಯ್ದೆಯನ್ನು ಜಾರಿಗೆ ಅನುವು ಮಾಡಿದ್ದು ಮತ್ತೊಂದು ಪ್ರಗತಿಪರ ನಿಲುವಿನ ಯೋಜನೆಯಾಗಿದೆ.
23. ಭಾಗ್ಯಜ್ಯೋತಿ:-
ಸಿದ್ದರಾಮಯ್ಯನವರು ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಭಾಗ್ಯಜ್ಯೋತಿ ಯೋಜನೆಯಲ್ಲಿ ವಿದ್ಯುತ್ ಹಾಗೂ ಹಣ ಪಾವತಿಸದ ವಿದ್ಯುತ್ ಸಂಪರ್ಕ ಕಡಿತ ಒಳಗಾಗಿದ್ದ ರಾಜ್ಯ ಸುಮಾರು 20 ಲಕ್ಷ ಫಲಾನುಭವಿಗಳಿಗಾಗಿ ಬಡವರ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದರು.
24. ಕೆರೆ ಸಂಜೀವಿನಿ :-
ಕೆರೆಕಟ್ಟೆಗಳನ್ನು ಜೀರ್ಣೋದ್ಧಾರ ಮಾಡಿ ನಿಸರ್ಗವನ್ನು ತಣಿಸುವುದು. ಆ ಮೂಲಕ ಜೀವ ಸಂಕುಲಕ್ಕೆ ತಂಪೆರೆಯುವ ಇಂದಿನ ದಿನಮಾನದಲ್ಲಿ ತುರ್ತಿನ ಕೆಲಸವಾಗಿದೆ. ಈ ಕೆರೆ ಸಂಜೀವಿನಿ ಹೊಸ ಕಾರ್ಯಕ್ರಮ ಇದೊಂದು ಪ್ರಗತಿದಾಯಕ ದಾರಿ.
ಹೀಗೆ ಪ್ರತೀ ಹೆಜ್ಜೆಯಲ್ಲೂ ಮಾದರಿ ನಡೆಯನ್ನು ಅನುಸರಿಸುತ್ತಾ ಬಂದಿರುವ ಮತ್ತು ಜನರ ಸಂಕಷ್ಟಗಳಿಗೆ ಮಿಡಿಯುವ ಗುಣ ಹೊಂದಿರುವ ಇವರು ರಾಜ್ಯದ ಮತದಾರರ ಮನಸ್ಸಿನಲ್ಲಿ ಶಾಶ್ವತ ಮುಖ್ಯಂಮತ್ರಿಯಾಗಿ ನೆಲೆಸಿದ್ದಾರೆ.