Publicstory
ತುಮಕೂರು: ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಜಿಲ್ಲೆಯಲ್ಲಿ ಪರೀಕ್ಷೆ ತೆಗೆದುಕೊಂಡ ಗಂಡು ಮಕ್ಕಳಲ್ಲಿ ಅರ್ಧಕರ್ಧ ಹುಡುಗರು ಫೇಲಾಗಿದ್ದಾರೆ.
ಒಟ್ಟಾರೆ ಫಲಿತಾಂಶ ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆಯಾಗಿದೆ. ರಾಜ್ಯದಲ್ಲಿ 23ನೇ ಸ್ಥಾನಕ್ಕೆ ಕುಸಿದಿದೆ.
ಶೈಕ್ಷಣಿಕ ಹೆಮ್ಮೆಯ ಜಿಲ್ಲೆಯ ಈ ಫಲಿತಾಂಶ ಕಳಪೆ ಎಂದೇ ಹೇಳಬೇಕು. ಶಿಕ್ಷಣ ಇಲಾಖೆ,ಇಲ್ಲಿಯ ಶಾಸಕರೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.
ಕಲಾ ವಿಭಾಗದ ಫಲಿತಾಂಶ ಶೋಚನೀಯವಾಗಿದೆ. ಇಲ್ಲಿ ಪರೀಕ್ಷೆ ತೆಗೆದುಕೊಂಡರವಲ್ಲಿ ಅರ್ಧಕ್ಕಿಂತಲೂ ಕಡಿಮೆ ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಅಂದರೆ ನೂರು ವಿದ್ಯಾರ್ಥಿಗಳಲ್ಲಿ 61 ವಿದ್ಯಾರ್ಥಿಗಳು ಫೇಲಾಗಿದ್ದಾರೆ. ಇದು ಉನ್ನತ ಶಿಕ್ಷಣದ ಬೆಳವಣಿಗೆ ಮೇಲು ಪರಿಣಾಮ ಬೀರಲಿದೆ. ಇದರಿಂದಾಗಿ ಹೆಚ್ಚು ಮಕ್ಕಳು ಕಳಪೆ ಕೆಲಸ ಹುಡುಕುವಂತಾಗಲಿದೆ.
ಇನ್ನೂ ವಿಜ್ಞಾನದ ವಿಭಾಗದಲ್ಲಿ ಶೇ 77 ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ 64.5 ರಷ್ಟು ಫಲಿತಾಂಶ ಬಂದಿದ್ದು, ಇದು ಸಹ ಕಡಿಮೆಯಾಗಿದೆ.
ಈ ಸಲ ಫಲಿತಾಂಶವನ್ನು ನೇರವಾಗಿ ಮಕ್ಕಳ ಪೋಷಕರ ಮೊಬೈಲ್ ನಂಬರುಗಳಿಗೆ ಕಳುಸಿರುವುದರಿಂದ ಅತಿ ಹೆಚ್ಚು ಅಂಕ ಯಾರು ಪಡೆದಿದ್ದಾರೆಂದು ತಕ್ಷಣಕ್ಕೆ ಹೇಳಲು ಸಾಧ್ಯವಾಗುತ್ತಿಲ್ಲ.
ಫಲಿತಾಂಶ ಕಡಿಮೆ ಬರಲು ಕೊರೊನಾ ಗೊಂದಲ, ವಿದ್ಯಾರ್ಥಿಗಳಲ್ಲಿ ಹೆಚ್ಚಿದ ಭಯ ಕಾರಣ ಎಂದು ಮೇಲ್ನೋಟಕ್ಕೆ ವಿಶ್ಲೇಷಣೆ ಮಾಡಲಾಗುತ್ತಿದೆ.