Thursday, November 21, 2024
Google search engine
HomeUncategorizedಶಿಕ್ಷಕರ ಪಾತ್ರ ಹಿರಿದು: ವೀಣಾ

ಶಿಕ್ಷಕರ ಪಾತ್ರ ಹಿರಿದು: ವೀಣಾ

ತುರುವೇಕೆರೆ: ಮಕ್ಕಳಿಗೆ ಓದು, ಬರಹ ಮತ್ತು ಸ್ಪಷ್ಟವಾಗಿ ಮಾತನಾಡುವ ಕೌಶಲವನ್ನು ಕಲಿಸಿ, ಬೆಳೆಸುವ ನಿಟ್ಟಿನಲ್ಲಿ ಕನ್ನಡ ಶಿಕ್ಷಕರ ಪಾತ್ರ ಮಹತ್ವಪೂರ್ಣವಾದದು ಎಂದು ಕ್ಷೇತ್ರ ಸಮನ್ವಯಧಿಕಾರಿ ವೀಣಾ ಹೇಳಿದರು.

ಪಟ್ಟಣದ ಜಿಜೆಸಿ ಪ್ರೌಢ ಶಾಲಾ ಆವರಣದಲ್ಲಿ ಕ್ಷೇತ್ರ ಶಿಕ್ಷಣಾ ಇಲಾಖೆ ಹಾಗು ತಾಲ್ಲೂಕು ಕನ್ನಡ ಭಾಷಾ ಬೋಧಕರ ಸಂಘದಿಂದ ಹಮ್ಮಿಕೊಂಡಿದ್ದ ಪುನಶ್ಚೇತನ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದರು.

ಕನ್ನಡ ಭಾಷೆಯ ವೈಜ್ಞಾನಿಕ ಕಲಿಕೆಯನ್ನು ಕ್ರಮಬದ್ಧವಾಗಿ ಕಲಿತರೆ ಇತರ ಭಾಷಾ ವಿಷಯಗಳನ್ನು ಕೂಡ ಅರ್ಥೈಯಿಸಿಕೊಳ್ಳುವ ಜ್ಞಾನ ಮಕ್ಕಳಲ್ಲಿ ಬೆಳೆಯುತ್ತದೆ. ಆದ್ದರಿಂದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಹಂತದಲ್ಲಿ ಸ್ವಷ್ಟ ಓದು, ಆಲಿಸುವ, ಬರಹ ಮತ್ತು ಸರಳ ಲೆಕ್ಕಾಚಾರವನ್ನು ಕಲಿಸುವ ಕೆಲಸ ಶಿಕ್ಷಕರದ್ದಾಗಬೇಕು. ಕನ್ನಡ ಭಾಷೆಯಲ್ಲಿ ಪ್ರತಿಯೊಂದು ಮಗುವೂ ಉತ್ತೀರ್ಣವಾಗುವಂತೆ ಕಲಿಕಾ ತಾಲೀಮು ನಡೆಸಬೇಕು ಎಂದು ಶಿಕ್ಷಕರಿಗೆ ಕಿವಿ ಮಾತು ಹೇಳಿದರು.

ಕನ್ನಡ ಭಾಷಾ ಬೋಧಕರ ಸಂಘದ ತಾಲ್ಲೂಕು ಅಧ್ಯಕ್ಷ ರಂಗಸ್ವಾಮಿ ಎಚ್.ಎಂ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಬದಲಾಗುತ್ತಿರುವ ಕಾಲಘಟ್ಟಕ್ಕೆ ಅನುಗುಣವಾಗಿ ಶಿಕ್ಷಕರು ತಮ್ಮ ಬೋಧನೆಯಲ್ಲಿ ಹೊಸ ಹೊಸ ತಂತ್ರಗಳು, ವಿನ್ಯಾಸಗಳು, ಮಾದರಿಗಳನ್ನು ರೂಢಿಸಿಕೊಂಡು ಪರಿಣಾಮಕಾರಿ ಬೋಧನೆ ಮಾಡುವ ಮೂಲಕ ಮಕ್ಕಳ ಗುಣಾತ್ಮಕ ಕಲಿಕೆಗೆ ಹೆಚ್ಚು ಒತ್ತು ಕೊಡಬೇಕು. ಜಿಲ್ಲೆಯಲ್ಲೇ ತುರುವೇಕೆರೆ ಕನ್ನಡ ಭಾಷಾ ಬೋಧಕರ ಸಂಘ ಎಲ್ಲ ಆಯಾಮಗಳಿಂದ ಸದೃಢವಾಗಿದ್ದು ಶಿಕ್ಷಕರಿಗೆ, ಮಕ್ಕಳಿಗೆ ಪೂರಕವಾದ ಸೃಜನಶೀಲ ಚಟುವಟಿಕೆಗಳನ್ನು ಮಾಡಿಕೊಂಡು ಬರುತ್ತಿದ್ದೆ ಎಂದರು.

ನಂತರ ಸೇತು ಬಂಧ, 8, 9 ಮತ್ತು ಹತ್ತನೇ ತರಗತಿಯ ಪಠ್ಯದಲ್ಲಿರುವ ಕಿಷ್ಟಾಂಶಗಳ ಬಗ್ಗೆ ವಿಷಯ ಸಂಪನ್ಮೂಲ ವ್ಯಕ್ತಿಗಳಿಂದ ಚರ್ಚೆ ನಡೆಸಿದರು. ಮತ್ತು ಸೇತುಬಂಧ ಪ್ರಶ್ನೆ ಪತ್ರಿಕೆ ಮಾದರಿಗಳನ್ನು ಸಿದ್ದಪಡಿಸಲಾಯಿತು.

ಈ ಸಂದರ್ಭದಲ್ಲಿ ನೋಡಲ್ ಅಧಿಕಾರಿ ಸಿದ್ದಪ್ಪ ಪಿ, ಜಿಜೆಸಿ ಕಾಲೇಜಿನ ಉಪ ಪ್ರಾಂಶುಪಾಲ ವೆಂಕಟೇಶ್, ಸಂಘದ ಕಾರ್ಯದರ್ಶಿ ಸಂಪತ್ತು, ಸಂಪನ್ಮೂಲ ವ್ಯಕ್ತಿಗಳಾದ ಅಜ್ಜನಹಳ್ಳಿ ಶಾಲೆಯ ಶಿವಣ್ಣ, ಮುದ್ದನಹಳ್ಳಿ ಶಾಲೆಯ ಹೇಮಲತಾ ದೇವಿ, ಕೌಸಲ್ಯ, ಮುಖ್ಯ ಶಿಕ್ಷಕರಾದ ಮಾಯಿಗಯ್ಯ, ವಿ.ಟಿ.ಸೋಮಶೇಖರ ರಾಜ್ ಮಳಲಿ ಮತ್ತು ಶಿಕ್ಷಕರು ಭಾಗವಹಿಸಿದ್ದರು. ಸಾವಿತ್ರಮ್ಮ ಸ್ವಾಗತಿಸಿ, ಕುಮಾರ್ ನಿರೂಪಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?