Thursday, December 12, 2024
Google search engine
HomeUncategorizedಗ್ರಾಮಾಂತರದಲ್ಲಿ ಬಿಜೆಪಿ ಗೆಲುವು: ಎಸ್ ಪಿಎಂ

ಗ್ರಾಮಾಂತರದಲ್ಲಿ ಬಿಜೆಪಿ ಗೆಲುವು: ಎಸ್ ಪಿಎಂ

ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಸುರೇಶಗೌಡರು ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಸಂಸದ ಎಸ್ .ಪಿ. ಮುದ್ದಹನುಮೇಗೌಡ ವಿಸ್ವಾಸ ವ್ಯಕ್ತಪಡಿಸಿದರು.

ಊರ್ಡಿಗೆರೆ ಯಲ್ಲಿ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.


2008ರಿಂದ 2018ರವರೆಗೆ ಅವರು ಮಾಡಿರುವ ಅಭಿವೃದ್ದಿ ಕೆಲಸಗಳು, ಮತದಾರರ ಮನದಲ್ಲಿ ಇರುವಂತೆ ಮಾಡಿವೆ.ಇಂತಹವರು ಮತ್ತೊಮ್ಮೆ ಶಾಸಕರಾಗಬೇಕು.‌ ಈ ನಿಟ್ಟಿನಲ್ಲಿ ಮತದಾರರು ಮುಂದಾಗುವಂತೆ ಕರೆ ನೀಡಿದರು.

ಸುರೇಶಗೌಡರಂಥ ಕೆಲಸಗಾರರನ್ನು ನಾನು ನೋಡಿಯೇ ಇಲ್ಲ. ಕ್ಷೇತ್ರದ ಅಭಿವೃದ್ಧಿಗಾಗಿ ಅವರು ಜಗಳವಾಡಲೂ ಸಿದ್ಧ. ಈ ಸಲ ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಸಚಿವ ಅರಗ ಜ್ಞಾನೇಂದ್ರ ಮಾತನಾಡಿ, ವಿರೋಧ ಪಕ್ಷಗಳು ಏನಾದ್ರು ಮಾತಾಡಲಿ. ಗ್ರಾಮಾಂತರದಲ್ಲಿ ಬಿಜೆಪಿಯ ಅಲೆ ಇದೆ. ಈ ಸಲ ಸುರೇಶಗೌಡ ರ ಗೆಲುವು ಖಚಿತ. ಇದೇ ಉತ್ಸಾಹವನ್ನು ಕಾರ್ಯಕರ್ತರು ಉಳಿಸಿಕೊಳ್ಳಬೇಕು ಎಂದರು.

ಭರ್ಜರಿ ಬಾಡೂಟ ಮಾಡಲಾಗಿತ್ತು. ಸುಮಾರು ಹನ್ನೆರಡು ಸಾವಿರ ಜನರು ಊಟ ಮಾಡಿದರು.

ಊಟ ತುಂಬಾ ಚೆನ್ನಾಗಿತ್ತು. ಸುರೇಶಗೌಡರು ಇದ್ದರೆ ನಮ್ಮ ಕ್ಷೇತ್ರ ಅಭಿವೃದ್ಧಿಯಾಗಲಿದೆ. ಊರೂರು ಪ್ರಚಾರ ಮಾಡುತ್ತಿದ್ದು, ಇವರು ಹೋದಲೆಲ್ಲ ಯುವಕರು, ಯುವತಿಯರು, ವಿದ್ಯಾವಂತರು ಹೆಚ್ಚು ಸೇರುತ್ತಿದ್ದಾರೆ. ಸುರೇಶಗೌಡರು ಈ ಸಲ ಗೆದ್ದರೆ ಊರ್ಡಿಗೆರೆಗೆ ಅಭಿವೃದ್ಧಿಯ ಹೊಳೆಯೇ ಹರಿಯಲಿದೆ ಎಂದು ಬಿಜೆಪಿ ಕಾರ್ಯಕರ್ತ ನಾಗೇಶ್ ತಿಳಿಸಿದರು.


ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ ಮಾತನಾಡಿ,ಉರ್ಡಿಗೆರೆ ಗ್ರಾಮವನ್ನು ಕೇಂದ್ರ ಸ್ಥಾನವಾಗಿಟ್ಟು ಕೊಂಡು ಸುರೇಶಗೌಡ ಅವರು ಎಲ್ಲಾ ಕಡೆಗೂ ಉತ್ತಮ ಸಂಪರ್ಕ ರಸ್ತೆಗಳನ್ನು ಮಾಡಿಸಿದ್ದಾರೆ. ಅವರು ಮಾಡಿರುವ ರಸ್ತೆಗಳು ಹತ್ತಾರು ವರ್ಷ ಕಳೆದರೂ ಒಂದು ಗುಂಡಿ ಬಿದ್ದಿಲ್ಲ.ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಉರ್ಡಿಗೆರೆ ಹೋಬಳಿಗೆ 19639 ಟಿ.ಸಿ, ದೇವಾಲಯ ಗಳು, 18 ಸಾವಿರ ಆಶ್ರಯ ಮನೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ.ಇಂತಹ ವ್ಯಕ್ತಿ ಮತ್ತೊಮ್ಮೆ ಶಾಸಕರಾಗಬೇಕೆಂಬುದು ಕ್ಷೇತ್ರದ ಜನರ ಬಯಕೆಯಾಗಿದೆ ಎಂದರು.

ಮಾಜಿ ಶಾಸಕ ಬಿ.ಸುರೇಶಗೌಡ ಮಾತನಾಡಿ, ರೈತರಿಗೆ ನೆರವಾಗುವುದೇ ನಿಜವಾದ ಅಭಿವೃದ್ದಿ,ಶಾಲಾ, ಕಾಲೇಜು, ರಸ್ತೆಗಳು,ವಿದ್ಯುತ್ ಸಂಪರ್ಕ,ಆಸ್ಪತ್ರೆಗಳು ಹೀಗೆ ಹತ್ತು ಹಲವು ಅಭಿವೃದ್ದಿ ಕಾರ್ಯಗಳನ್ನು ನನ್ನ 10 ವರ್ಷದ ಶಾಸಕನ ಅವಧಿಯಲ್ಲಿ ಮಾಡಲಾಗಿದೆ.ಬಡ ಮಕ್ಕಳು ಓದುವ ಸರಕಾರಿ ಶಾಲೆಗಳಿಗೆ ಹೈಟೆಕ್ ಸ್ಪರ್ಷ ನೀಡಿ, ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡಲಾಗಿದೆ.ಸುವರ್ಣ ಗ್ರಾಮದ ಮೂಲ ಹಲವಾರು ಗ್ರಾಮಗಳಿಗೆ ರಸ್ತೆ, ಚರಂಡಿ, ಕುಡಿಯುವ ನೀರು ಇನ್ನಿತರ ಸೌಲಭ್ಯಗಳನ್ನು ಒದಗಿಸಲಾಗಿದೆ. ನನ್ನ ಕಾಲದಲ್ಲಿ ಅಭಿವೃದ್ದಿಗೆ ಮುಂದಾಗಿದ್ದ ಬಯಲು ಆಂಜನೇಯ ಸ್ವಾಮಿ ಇಂದಿಗೂ ನೆನೆಗುದಿಗೆ ಬಿದ್ದಿದೆ.ಭವಿಷ್ಯ ನಾನೇ ಶಾಸಕನಾಗಿ ಅಭಿವೃದ್ದಿ ಪಡಿಸಲಿ ಎಂಬುದು ಭಗವಂತನ ಇಚ್ಚೆಯಾಗಿರಬೇಕು.ನಿಮೆಲ್ಲರ ಪ್ರೋತ್ಸಾಹ, ಆಶೀರ್ವಾದ ಇದೇ ರೀತಿ ಇದ್ದರೆ, ನಾನು ಶಾಸಕನಾಗುವುದನ್ನು ಯಾರು ತಡೆಯಲು ಸಾಧ್ಯವಿಲ್ಲ ಎಂದರು.


ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ಶಂಕರಣ್ಣ, ರಘುನಾಥ ವಹಿಸಿದ್ದರು.ವೇದಿಕೆಯಲ್ಲಿ ನರಸಿಂಹಮೂರ್ತಿ,ವೈ.ಟಿ.ನಾಗರಾಜು, ರಾಜುಗೌಡ, ಓಂ ನಮೋ ನಾರಾಯಣ, ರಂಗುನಾಥಪ್ಪ, ಸುಮಿತ್ರಾ ದೇವಿ, ಕೋಡಿಹಳ್ಳಿ ಆಂದಾನಪ್ಪ, ಶಾಂತಕುಮಾರ್,ಗಂಗಾಂಜನೇಯ್ಯ, ಕೆಂಪಸಿದ್ದಯ್ಯ ಸೇರಿದಂತೆ ಎಲ್ಲಾ ಜಿ.ಪಂ, ತಾ.ಪಂ ಮಾಜಿ ಸದಸ್ಯರು, ಗ್ರಾಅವಪಂಚಾಯಿತಿಗಳ ಸದಸ್ಯರುಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?