ತುಮಕೂರು: ಇದೇ 27 ರಿಂದ 31ರವರೆಗೆ ಕಲ್ಬುರ್ಗಿ ವಿಶ್ವವಿದ್ಯಾಲಯದಲ್ಲಿ ನಡೆಯುವ 25 ವಿಶ್ವವಿದ್ಯಾಲಯಗಳ ದಕ್ಷಿಣ ಪೂರ್ವ ವಲಯದ ಐದು ದಿನಗಳ ಸಾಂಸ್ಕೃತಿಕ ಯುವ ಜನ ಉತ್ಸವಕ್ಕೆ ತುಮಕೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ.
ವಿ.ವಿ.ಯ ಸಂಸ್ಕೃತಿಕ ಘಟಕದ ಸಂಚಾಲಕರಾದ ಪ್ರೊ.ಬಿ ರಮೇಶ್ ನಿಶಾನೆ ತೋರಿಸುವುದರ ಮೂಲಕ ಶುಭ ಕೋರಿ ಮಾತನಾಡಿದ ಅವರು ತುಮಕೂರು ವಿಶ್ವವಿದ್ಯಾಲಯ ಘನತೆ ಮತ್ತಷ್ಟು ಹೆಚ್ಚಿಸುವಂತೆ ಆರೋಗ್ಯ ಪೂರ್ಣ ಸ್ಪರ್ದೆಯನ್ನು ಮಾಡಬೇಕು. ವಿದ್ಯಾರ್ಥಿಗಳ ಜೀವನದಲ್ಲಿ ಸಾಂಸ್ಕೃತಿಕ ಸಮಾರಂಭ ಗಳು ಮತ್ತು ಸ್ಪರ್ಧೆಗಳು ಬದುಕಿನ ದಿಕ್ಕನ್ನು ಬದಲಿಸಿ ಸಾದಕರನ್ನಾಗಿ ಮಾಡುತ್ತವೆ ಎಂದರು.
ಬಹಳ ಶ್ರದ್ಧೆಯಿಂದ ಸ್ಪರ್ಧಿಸಿ ಕೀರ್ತಿ ಗಳಿಸಬೇಕು. ವಿಶ್ವವಿದ್ಯಾಲಯ ಕುಲಪತಿಗಳ ಆಶಯವನ್ನು ಎತ್ತಿ ಹಿಡಿಯಬೇಕು ಎಂದು ತಿಳಿಸಿದರು .
ಸಂಗೀತ ಕ್ಷೇತ್ರದ ಸ್ಪರ್ಧೆಗಳಲ್ಲಿ ಶಾಲಂಕೃಪ ಮತ್ತು ತಂಡ ಶಾಸ್ತ್ರೀಯ ಸಂಗೀತ – ಕೋಮಲ ,ಜನಪದ ನೃತ್ಯ – ಪೂಜಶ್ರೀ ಮತ್ತು ತಂಡ ,ಕಿರುನಾಟಕ- ಲಾವಣ್ಯ ಮತ್ತು ತಂಡ ,ಮೂಖಾಭಿನಯ- ಲೇಖನ ಮತ್ತು ತಂಡ , ಚರ್ಚಾಸ್ಪರ್ದೆ- ರಮ್ಯ , ರಸಪ್ರಶ್ನೆ-ಜಯಂತ್ ಮತ್ತು ತಂಡ, ಚಿತ್ರಕಲೆ-ಬಿಂದುಶ್ರೀ ಆರ್ ರಂಗೋಲಿ- ಅಮೃತವರ್ಷಿಣಿ ಛಾಯಾಚಿತ್ರ – ನಂದೀಶ್ ದೀಪಕ್ ಮುಂತಾದವರನ್ನು ವಿಶ್ವವಿದ್ಯಾಲಯ ವಿವಿದ ಕಾಲೇಜ್ ಗಳಿಂದ ಆಯ್ಕೆ ಮಾಡಿ ತರಬೇತಿ ನೀಡಿ ಸ್ಪರ್ಧೆಸಲು ಸಿದ್ದತೆ ಮಾಡಿ ಕಳುಹಿಸಿದೆ. ಇವರಿಗೆ ತುಮಕೂರು ವಿಶ್ವವಿದ್ಯಾಲಯ ಕುಲಪತಿಗಳು ,ಕುಲಸಚಿವರು , ಪ್ರಾಧ್ಯಾಪಕರು ಶುಭಕೋರಿದ್ದಾರೆ. ಈ ಸಂದರ್ಭದಲ್ಲಿ ಡಾ. ಸಚಿನ್ ಅರಾಧನಾ ,ಸಿದ್ದೇಶ್ ಸಿ ,ಅನಂತಾಲಕ್ಷ್ಮೀ ,ಮಹಾಲಕ್ಷ್ಮಿ ಡೈಸನ್ ಹಾಗೂ ರಾಜಣ್ಣ ಮುಂತಾವರು ಇದ್ದರು.