Publicstory. In
ತುಮಕುರು: ಪ್ರಧಾನಮಂತ್ರಿ ನರೇಂದ್ರಮೋದಿ ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜನಸಂದಣಿ ಮತ್ತು ವಾಹನಗಳ ಸಂಚಾರ ದಟ್ಟಣೆಯಾಗುವುದರಿಂದ ಜ. 2ರ ಮಧ್ಯಾಹ್ನ 12 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕೆಎಸ್‍ಆರ್‍ಟಿಸಿ ಬಸ್‍ಗಳ ಸಂಚಾರದ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರ ಕುಮಾರ್ ತಿಳಿಸಿದ್ದಾರೆ.
ಬೆಂಗಳೂರು ಕಡೆಯಿಂದ ಆಗಮಿಸುವ ವಾಹನಗಳು
ಕ್ಯಾತ್ಸಂದ್ರ-ಬೈಪಾಸ್-ಹನುಮಂತಪುರ-ಕೋತಿತೋಪು-ಅಮಾನಿಕೆರೆ-ಕೋಡಿಸರ್ಕಲ್ (ಪ್ರಮಾಣಿಕರು ಹತ್ತುವ/ ಇಳಿಯುವ ಸ್ಥಳ)ಗಾರ್ಡನ್ ರಸ್ತೆ-ಗುಬ್ಬಿ ಗೇಟ್ ಮುಖಾಂತರ ಶಿವಮೊಗ್ಗ ಕಡೆ ಚಲಿಸುವುದು.
ಬೆಂಗಳೂರು ಕಡೆಯಿಂದ ಆಗಮಿಸಿ ಶಿರಾ ಕಡೆ ತೆರಳುವ ವಾಹನಗಳು
ಕ್ಯಾತ್ಸಂದ್ರ-ಬೈಪಾಸ್-ಹನುಮಂತಪುರ-ಕೋತಿತೋಪು-ಅಮಾನಿಕೆರೆ-ಕೋಡಿಸರ್ಕಲ್(ಪ್ರಮಾಣಿಕರು ಹತ್ತುವ/ಇಳಿಯುವ ಸ್ಥಳ) ರಸ್ತೆ-ಶಿರಾ ಗೇಟ್ ಮೂಲಕ ಎನ್‍ಎಚ್-48ಗೆ ಚಲಿಸುವುದು.
ಶಿವಮೊಗ್ಗ ಕಡೆಯಿಂದ ಬೆಂಗಳೂರು ಕಡೆಗೆ ಹೋಗುವ ವಾಹನಗಳು ಗುಬ್ಬಿ ಗೇಟ್-ಕಾಲ್‍ಟೆಕ್ಸ್-ಬಸ್‍ನಿಲ್ದಾಣ-ಕೋತಿತೋಪು-ಹನುಮಂತಪುರ ಬೈಪಾಸ್ ಮುಖಾಂತರ ಎನ್‍ಎಚ್-48ರಲ್ಲಿ ಬೆಂಗಳೂರು ಕಡೆಗೆ ಚಲಿಸುವುದು.
ಶಿರಾ ಕಡೆಯಿಂದ ಬೆಂಗಳೂರು ಕಡೆಗೆ ಹೋಗುವ ವಾಹನಗಳು
ಶಿರಾ ಗೇಟ್-ಕೋಡಿ ಸರ್ಕಲ್-ಅಮಾನಿಕೆರೆ (ಪ್ರಮಾಣಿಕರು ಹತ್ತುವ/ಇಳಿಯುವ ಸ್ಥಳ)-ಕೋತಿತೋಪು-ಹನುಮಂತಪುರ ಬೈಪಾಸ್ ಮುಖಾಂತರ ಎನ್‍ಎಚ್-48ರಲ್ಲಿ ಬೆಂಗಳೂರು ಕಡೆಗೆ ಚಲಿಸುವುದು.
ಕುಣಿಗಲ್ ರಸ್ತೆ ಮೂಲಕ ಆಗಮಿಸುವ ವಾಹನಗಳು ಕುಣಿಗಲ್ ಸರ್ಕಲ್-ಬಸ್‍ನಿಲ್ದಾಣ-ಕಾಲ್‍ಟೆಕ್ಸ್- ಕುಣಿಗಲ್ ಸರ್ಕಲ್ ಮೂಲಕ ಕುಣಿಗಲ್ ಕಡೆಗೆ ಚಲಿಸುವುದು.
ತುಮಕೂರು-ಬೆಂಗಳೂರು ವಾಹನಗಳು ತುಮಕೂರು ಬಸ್ ನಿಲ್ದಾಣದಿಂದ ಚರ್ಚ್ ಸರ್ಕಲ್-ಅಮಾನಿಕೆರೆ-ಹನುಮಂತಪುರ ಬೈಪಾಸ್ ಮುಖಾಂತರ ಎನ್‍ಎಚ್-48ರಲ್ಲಿ ಬೆಂಗಳೂರು ಕಡೆಗೆ ಚಲಿಸುವುದು.
ಸದರಿ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತುಮಕೂರು ವಿಭಾಗದ ವತಿಯಿಂದ ಒಟ್ಟು 400 ಬಸ್‍ಗಳನ್ನು ನಿಯೋಜಿಸಿರುವುದರಿಂದ ಸದರಿ ದಿನದಂದು ಸಾರಿಗೆಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯವಾಗುವ ಸಂಭವವಿದೆ. ಸಾರ್ವಜನಿಕ ಪ್ರಯಾಣಿಕರು ಲಭ್ಯವಿರುವ ಸಾರಿಗೆಗಳನ್ನು ಉಪಯೋಗಿಸಿಕೊಂಡು ಪ್ರಯಾಣಿಸಿ ಸಹಕರಿಸಬೇಕೆಂದು ಪ್ರಕಟಣೆ ಮನವಿ ಮಾಡಿದೆ.