Publicstory
ತುಮಕೂರು: ಸಣ್ಣ ಮಕ್ಕಳು, ಮಹಿಳೆಯರ ಮೇಲಿನ ಹಲ್ಲೆ ತಪ್ಪಿಸುವಲ್ಲಿ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಯಶಸ್ವಿಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಆರ್.ಜಿ. ಪವಿತ್ರಾ ತಿಳಿಸಿದರು.
ನಗರದ ಸುಫಿಯಾ ಕಾನೂನು ಕಾಲೇಜಿನಲ್ಲಿ ನಡೆದ ಮಹಿಳಾ ಸಬಲೀಕರಣ ಕುರಿತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಲತಾಯಿ ಒಬ್ಬರು ಇಬ್ಬರು ಮಕ್ಕಳಿಗೆ ಹಿಂಸೆ ನೀಡುತ್ತಿದ್ದ ದೂರು ಬಂದಿತು. ಪ್ರಕರಣ ಗಂಭೀರವಾಗಿ ತೆಗೆದುಕೊಂಡೆವು. ಈಗ ಮಲತಾಯಿ ಜೈಲಿಗೆ ಹೋಗಿದ್ದಾರೆ. ತಂದೆ ಜತೆಗೆ ಹೋಗದ ಇಬ್ಬರು ಮಕ್ಕಳನ್ನು ಇಲಾಖೆಯೇ ನೋಡಿಕೊಳ್ಳುತ್ತಿದೆ. ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಾರೆ ಎಂದರು.
ನೊಂದ ಮಹಿಳೆಯರು ಧೈರ್ಯವಾಗಿ ಇಲಾಖೆಯ ಸಹಾಯ ಪಡೆಯಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಎಸ್.ರಮೇಶ್ ಮಾತನಾಡಿ, ಮನೆಯಲ್ಲಿ ಮಹಿಳೆಯರಿಗೆ ಗೌರವ ಕೊಡಬೇಕು. ಮಹಿಳೆಯ ಸಬಲೀಕರಣಕ್ಕಾಗಿ ಹಲವು ಕಾನೂನುಗಳಿವೆ. ಅವುಗಳನ್ನು ಹೆಚ್ಚು ಜನಪ್ರಿಯಗೊಳಿಸಬೇಕಾಗಿದೆ. ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದರು.
ಸಾಂತ್ವನ ಕೇಂದ್ರದ ಪಾರ್ವತ್ತಮ್ಮ ರಾಜ್ ಕುಮಾರ್ ಮಾತನಾಡಿ, ಮಹಿಳೆಯರು ಪುರುಷರ ನಡುವೆ ತಾರತಮ್ಯ ಅಗಾಧವಿದೆ. ಇದನ್ನು ಹೋಗಲಾಡಿಸಲು ಎಲ್ಲರೂ ಕೆಲಸ ಮಾಡಬೇಕು ಎಂದರು.
ಮಹಿಳೆಯರು ಕಿರುಕುಳ, ವರದಕ್ಷಿಣಿ, ಗೃಹ ಹಿಂಸೆ, ವರದಕ್ಷಿಣೆ ಮುಂತಾದ ಪ್ರಕರಣಗಳಲ್ಲಿ ಸಾಂತ್ವ ಕೇಂದ್ರ ಹೇಗೆ ನೆರವಾಗುತ್ತಿದೆ ಎಂಬುದನ್ನು ವಿವರಿಸಿದರು.
ಇನ್ಸ್ಪೆಕ್ಟರ್ ಸುರೇಶ್ ಮಾತನಾಡಿ ನಾ ಕಂಡಂತೆ ಇತ್ತೀಚೆಗೆ ಪ್ರಕರಣಗಳು ಹೆಚ್ಚು ನಡೆಯುತ್ತಿರುವುದು ಮೊಬೈಲ್ ದುರ್ಬಳಕೆಯಿಂದ ಹಾಗಾಗಿ ಮಕ್ಕಳಿಗೆ ಒಂದು ಎಚ್ಚರಿಕೆ ಮೊಬೈಲನ್ನು ಸದುದ್ದೇಶಕ್ಕಾಗಿ ಬಳಸಿ ಎಂದು ಕಿವಿ ಮಾತು ಹೇಳಿದರು.
ಕಾನೂನು ಸಲಹೆಗಾರರಾದ ಸುಧಾರಾಣಿ ಮಾತನಾಡಿದರು. ಉಪ ಪ್ರಾಂಶುಪಾಲ ಓಬಣ್ಣ, ಕಾಲೇಜಿನ ಅಧೀಕ್ಷಕರಾದ ಜಗದೀಶ್, ಗ್ರಂಥಪಾಲಕ ಸುಬ್ರಹ್ಮಣ್ಯ ಇತರರು ಇದ್ದರು.