ತುಮಕೂರು ಲೈವ್

ಅಂಕಿ ಅಂಶ ಕೇಳಿದರೆ ತಡಬಡಾಯಿಸುತ್ತೀರಾ….

ತುಮಕೂರು: ಕೋವಿಡ್-19 ಹರಡುವ ಹಿನ್ನೆಲೆಯಲ್ಲಿ ದೇಶ ವ್ಯಾಪ್ತಿ ಲಾಕ್ ಡೌನ್ ಇರುವ ಕಾರಣ ಕ್ಷೇತ್ರದಲ್ಲಿ ಯಾರೂ ಊಟ ವಿಲ್ಲದೆ ನರಳಬಾರದು. ಅಧಿಕಾರಿಗಳು ಈ ಸಂದರ್ಭದಲ್ಲಿ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು. ಇಲ್ಲವಾದಲ್ಲಿ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಹಾಲಿ ಕೊರಟಗೆರೆ ಕ್ಷೇತ್ರದ ಶಾಸಕ ಡಾ. ಜಿ. ಪರಮೇಶ್ವರ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.


ಕಾರ್ಟೂನ್ ಕಾರ್ನರ್: ಮುಸ್ತಾಫ ಕೆ.ಎಂ., ರಿಪ್ಪನ್ ಪೇಟೆ


ಲಾಕ್ ಡೌನ್ ಹಿನ್ನೆಲೆ ಕೊರಟಗೆರೆ ಕ್ಷೇತ್ರದಾದ್ಯಂತ ಪ್ರವಾಸ ಕೈಗೊಂಡ ಅವರು ಕೇತ್ರದ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಗಳು 5 ಸಾವಿರ ಮಾಸ್ಕ್ ವಿತರಣೆ ಮಾಡಿ ಕೊರೊನಾ ಹರಡದಂತೆ ಮುಂಜಾಗೃತಾ ಕ್ರಮ ವಹಿಸುವಂತೆ ಅಧಿಕಾರಿಗಳಿ ಸೂಚನೆ ನೀಡಿದರು.

ಇಲ್ಲಿವರೆಗೂ ತಾಲ್ಲೂಕಿಗೆ ಹೊರಗಿನಿಂದ ಯಾರ್ಯಾರು ಬಂದಿದ್ದಾರೆ ಎಂಬ ಅಂಕಿಅಂಶ ನೀಡಲು ತಡವರಿಸಿದ ತಹಶೀಲ್ದಾರ್ ಹಾಗೂ ತಾಲ್ಲೂಕು ವೈದ್ಯಾಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಅವರು ಬೇಜವಾಬ್ದಾರಿಯನ್ನು ಸಹಿಸುವುದಿಲ್ಲ. ಇಲ್ಲಿವರೆಗೆ 9 ಸಾವಿರ ಜನ ತಾಲ್ಲೂಕಿಗೆ ಬಂದಿದ್ದಾರೆ ಎಂದು ಮಾತ್ರ ಹೇಳುತ್ತಿದ್ದೀರಾ ಆದರೆ ಅವರ ಸಂಪೂರ್ಣ ಮಾಹಿತಿ ಕೇಳಿದರೆ ತಡಬಡಾಯಿಸುತ್ತೀರಾ ಯೂಸ್ ಲೆಸ್ ಫೆಲೋ ಎಂದು ತರಾಟೆಗೆ ತೆಗೆದುಕೊಂಡರು.

ಲಾಕ್ ಡೌನ್ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಯಾರೂ ಕೂಡ ಊಟ ವಿಲ್ಲದೆ ಹಸಿವಿನಿಂದ ನರಳಬಾರದು. ಅಂತವರು ಕಂಡು ಬಂದರೆ ತಕ್ಷಣ ಅವರಿಗೆ ಊಟದ ವ್ಯವಸ್ಥೆ ಕಲ್ಪಿಸಬೇಕು.ಸ್ಥಳೀಯ ಫ್ರೆಂಡ್ಸ್ ಗ್ರೂಪ್ ವತಿಯಿಂದ ದಿನ ನಿತ್ಯ ನಿರ್ಗತಿಕರಿಗೆ ಊಟ ನೀಡುತ್ತಿರುವುದನ್ನು ಶ್ಲಾಘಿಸಿದ ಅವರು ಊಟ ಕೊಡುವುದನ್ನು ನಿಲ್ಲಿಸುವಂತೆ ಕಟ್ಟಪ್ಪಣೆ ಮಾಡಿದ್ದ ತಹಶೀಲ್ದಾರ್ ಬಿ.ಎಂ ಗೋವಿಂದರಾಜು ಅವರನ್ನು ಯಾರೋ ಊಟ ಕೊಟ್ಟರೆ ನೀವು ಏಕೆ ಕೊಡಬೇಡಿ ಅಂತೀರಾ? ಎಂದು ತರಾಟೆಗೆ ತೆಗೆದುಕೊಂಡರು.

ನಿರ್ಗತಿಕರ ಪಟ್ಟಿ ತಯಾರಿಸಿ ಕೂಡಲೇ ಅವರಿಗೆ ದವಸ, ಧಾನ್ಯದ ವ್ಯವಸ್ಥೆ ಮಾಡಿ. ಖಾಸಗಿಯವರು ಮಾನವೀಯತೆಯಿಂದ ನಿರ್ಗತಿಕರಿಗೆ ಊಟ ನೀಡುವ ಕೆಲಸ ಮಾಡುತ್ತಿರುವುದನ್ನು ತಡೆಯಬಾರದು. ಅವರಿಗೆ ತಮ್ಮ ಸಹಕಾರ ನೀಡುವಂತೆ ತಹಶೀಲ್ದಾರ್ ಗೆ ಸೂಚಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಬಿ.ಎಂ.ಗೋವಿಂದರಾಜು, ಕೊರಟಗೆರೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲಕ್ಷ್ಣಣಕುಮಾರ, ಆರೋಗ್ಯ ನಿರೀಕ್ಷಕ ರೈಸ್ ಅಹಮದ್, ಟಿಎಚ್ಓ ಡಾ. ವಿಜಯಕುಮಾರ್, ಸಿಪಿಐ ಎಫ್.ಕೆ. ನದಾಪ್, ಪಿಎಸೈ ಎಚ್.ಮುತ್ತರಾಜು, ಪಟ್ಟಣ ಪಂಚಾಯಿತಿ ಸದ್ಯರಾದ ಕೆ.ಆರ್.ಓಬಳರಾಜು, ಎ.ಡಿ.ಬಲರಾಮಯ್ಯ, ನರಸಿಂಹಪ್ಪ, ಪುಟ್ಟನರಸಪ್ಪ, ಲಕ್ಷ್ಮಿನಾರಾಯಣ್, ನಟರಾಜು, ಮುಖಂಡರಾದ ಮೆಡಿಕಲ್ ಅಶ್ವತ್ಥ್, ಅರಕೆರೆ ಶಂಕರ್, ಕರಿಚಿಕ್ಕನಹಳ್ಳಿ ಆನಂದ್, ಕೆ.ವಿ.ಮಂಜುನಾಥ್, ರಮೇಶ್, ಗಣೇಶ್, ಕಲೀಂ, ತುಂಗಾ ಮಂಜುನಾಥ ಇತರರು ಇದ್ದರು.

Comment here