ತುಮಕೂರು ಲೈವ್

“ಅಂಬ್ಯುಲೆನ್ಸ್ ನಿರ್ವಹಣೆಯಲ್ಲಿ ಸರ್ಕಾರವನ್ನೇ ನಾಚಿಸಿದ ಶಾಸಕ ಡಿ.ಸಿ ಗೌರಿಶಂಕರ್”

ಹೆತ್ತೇನಹಳ್ಳಿ ಮಂಜುನಾಥ್


ತುಮಕೂರು; ಅಂಬ್ಯುಲೆನ್ಸ್ ನಿರ್ವಹಣೆಯಲ್ಲಿ ಸರ್ಕಾರಗಳೇ ವಿಫಲವಾಗಿರುವ ಅನೇಕ ಉದಾಹರಣೆಗಳಿರುವಾಗ ಅಂತಹ ಹತ್ತು ಹಲವಾರು ಸವಾಲುಗಳನ್ನು ಸ್ವ-ಇಚ್ಛೆ ಯಿಂದ ಸ್ವೀಕರಿಸಿ ಅಂಬ್ಯುಲೆನ್ಸ್ ನಿರ್ವಹಣೆ ಮಾಡುತ್ತಿರುವವರು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಡಿ.ಸಿ ಗೌರಿಶಂಕರ್.

ಸರ್ಕಾರ ನಿರ್ವಹಣೆ ಮಾಡುವ ಅಂಬ್ಯುಲೆನ್ಸ್ ನಲ್ಲಿ ಕಡ್ಡಾಯವಾಗಿ, ಆಕ್ಸಿಜನ್, ಡ್ರೈವರ್ ಗಳು, ಅರೆ ಸಿಬ್ಬಂದಿಗಳು, ಇಂಧನ, ಅಂಬ್ಯುಲೆನ್ಸ್ ನ ನೈರ್ಮಲ್ಯ ಕಾಪಾಡಲು ನಿರಂತರ ಸ್ಯಾನಿಟೈಸೇಷನ್ ಅವಶ್ಯಕವಾಗಿದೆ. ಆದಾಗ್ಯೂ ಇಷ್ಟೆಲ್ಲಾ ನಿಭಾಯಿಸಲು ಸರ್ಕಾರವೇ ಸಾಮಾನ್ಯ ಕಾಲದಲ್ಲೂ ವಿಫಲವಾಗಿ ಕೈಕಟ್ಟಿ ಕುಳಿತ ಎಷ್ಟೊ ಘಟನೆ ಕಣ್ಣ ಮುಂದಿವೆ. ಅದರಲ್ಲೂ ಇಂತಹ ಕೊರೋನಾ ಸಂಧರ್ಭದಲ್ಲಿ ಸರ್ಕಾರಕ್ಕೆ ಅಂಬ್ಯುಲೆನ್ಸ್ ನಿರ್ವಹಣೆ ಸವಾಲೇ ಸರಿ & ಅಂತಹ ಸವಾಲನ್ನು ನಿರ್ವವಹಿಸುವಲ್ಲಿ ಇಂದಿಗೂ ಸರ್ಕಾರದಲ್ಲಿ ಹತ್ತು ಹಲವಾರು ಲೋಪಗಳಿವೆ.

ಇಂತಹ ಹತ್ತು ಹಲವು ಸಮಸ್ಯೆಗಳ ಆಗರವೇ ಆದ ಅಂಬ್ಯುಲೆನ್ಸ್ ನಿರ್ವಹಣೆಯ ಸಂಪೂರ್ಣ ಹೊಣೆ ಹೊತ್ತುಕೊಂಡು ನಿರ್ವಹಿಸುತ್ತಿರುವುದು ಮತ್ಯಾರೂ ಅಲ್ಲಾ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕರಾದ ಡಿ. ಸಿ ಗೌರಿಶಂಕರ್ ರವರು.

ಕೊರೋನಾ ಸಂಧರ್ಭದಂತಹ ಗಂಭೀರ ವಿಷಮ ಸ್ಥಿತಿಯಲ್ಲಿ ಅಂಬ್ಯುಲೆನ್ಸ್ ನಿರ್ವಹಣೆಗೆ ಶಾಸಕರು ಸರಳವಾದ ಮಾರ್ಗಗಳನ್ನು ಹುಡುಕಿಕೊಂಡಿದ್ದಾರೆ. ಅದ್ಯಾವ್ದು ಅಂತಾ ಕೇಳ್ತೀರಾ..? ಇಲ್ಲಿದೆ ನೋಡಿ ಆ ಮಾರ್ಗಗಳು..

> ಪ್ರತಿ ಅಂಬ್ಯುಲೆನ್ಸ್ ನಲ್ಲಿ ಆಕ್ಸಿಜನ್ ನಿರ್ವಹಣೆಗಾಗಿ ಗ್ಯಾಸ್ ಏಜೆನ್ಸಿ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ.

> ಪ್ರತಿ ಅಂಬ್ಯುಲೆನ್ಸ್ ದಿನದ 24 ಗಂಟೆ ಸಾರ್ವಜನಿಕ ಸೇವೆಗಾಗಿ ಇಬ್ಬರು ಚಾಲಕರನ್ನು ನೇಮಿಸಿದ್ದಾರೆ.

> ಚಾಲಕರ ಜೊತೆ ರೋಗಿಯ ಸಹಾಯಕ್ಕಾಗಿ ಕ್ಷೇತ್ರದಲ್ಲಿ ಪ್ರತಿ ಜಿಲ್ಲಾ ಪಂಚಾಯ್ತಿಗೆ ತಲಾ ಐದು ಜನರಂತೆ ಕ್ಷೇತ್ರದಲ್ಲಿ 40 ಜನರ ಸ್ವಯಂ-ಸೇವಕರ ಕೊರೋನಾ ವಾರಿಯರ್ಸ್ ತಂಡವನ್ನೇ ಕಟ್ಟಿದ್ದಾರೆ.

> ಚಾಲಕರು & ಕೊರೋನಾ ವಾರಿಯರ್ಸ್ ಗಳಿಗೆ ಯಾವುದೇ ಸೋಂಕು ಹರಡದಂತೆ ಒಂದು ರೋಗಿ ಅಂಬ್ಯುಲೆನ್ಸ್ ನಲ್ಲಿ ಪ್ರಯಾಣ ಬೆಳೆಸಿದರೇ ಸಂಪೂರ್ಣ ಸ್ಯಾನಿಟೈಸ್ ಮಾಡೋ ವ್ಯವಸ್ಥೆ ಮಾಡಿದ್ದಾರೆ.

> ಚಾಲಕರು & ಕೊರೋನಾ ವಾರಿಯರ್ಸ್ ಗಳಿಗೆ PPE ಕಿಟ್, ಮಾಸ್ಕ್, ಗ್ಲೌಸ್ ಗಳ ಜೊತೆ ನಿರಂತರವಾದ ನೈರ್ಮಲ್ಯ ಕಾಪಾಡಲು ಸ್ಯಾನಿಟೈಸರ್ ನೀಡಲಾಗುತ್ತಿದೆ.

> ಅಂಬ್ಯುಲೆನ್ಸ್ ನಲ್ಲಿ ಇಂಧನ ನಿರ್ವಹಣೆಗೆ ಪೆಟ್ರೊಲ್ ಬಂಕ್ ಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ.


ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಅಂಬುಲೆನ್ಸ್, ರೋಗಿಗಳಿಗೆ ಆಕ್ಸಿಜನ್ ಒದಗಿಸುವ ಶಾಸಕರ ಯೋಜನೆ ಕಂಡು ಕ್ಷಣ ಅವಕ್ಕಾದೆ. ಮೂರಾರ್ಜಿ ಶಾಲೆಯನ್ನೇ ತಮ್ಮ ಸ್ಚಂತ ಹಣದಲ್ಲಿ ಕೋವಿಡ್ ಆಸ್ಪತ್ರೆಯಾಗಿಸಲು ಹೊರಟಿದ್ದಾರೆ. ಇದು ಶ್ಲಾಘನೀಯ ಕೆಲಸ.

ಮಹಾನ್ ನಾಯಕ ಧಾರವಾಹಿ ಕೋ ಆರ್ಡಿನೇಟರ್ ಹುಣಸೂರು ರಾಜನ್


ಇಷ್ಟೆಲ್ಲ ನಿರ್ವಹಣೆಗೆ ಪ್ರತಿ ತಿಂಗಳು 70,000-75,000 ರೂಪಾಯಿಗಳ ಖರ್ಚು ತಗುಲಲಿದ್ದು. ಆ ಎಲ್ಲಾ ವೆಚ್ಚವನ್ನು ವೈಯಕ್ತಿಕವಾಗಿ ಶಾಸಕರು, ಪಕ್ಷದ ಮುಖಂಡರು & ಕಾರ್ಯಕರ್ತರೇ ನಿರ್ವಹಿಸುತ್ತಿರುವುದು ಸರ್ಕಾರವೇ ನಾಚಿಸುವ ಮಟ್ಟಿಗಿದೆ ಎಂದರೇ ಹೆಮ್ಮೆಯ ವಿಷಯವೆ ಹೌದು. ಒಬ್ಬ ಶಾಸಕ ಈ ಪರಿಯ ಕೆಲಸ ಮಾಡಿ ಒಂದು ಕ್ಷೇತ್ರವನ್ನು ನಿರ್ವಹಿಸುವುದಾದರೇ ಉಳಿದ ಶಾಸಕರ ಜಾಣಮೌನ ತನವನ್ನು ಜನಸಾಮಾನ್ಯರು ಪ್ರಶ್ನಿಸುವ ಕಾಲ ಸನ್ನಿಹಿತವಾಗುತ್ತಿದೆ.

ಶಾಸಕರಾದ ಡಿ.ಸಿ ಗೌರಿಶಂಕರ್ ರವರ ಕಾರ್ಯ ಇತರ ಶಾಸಕರಿಗೆ ಸ್ಪೂರ್ತಿಯಾದರೇ ಜಿಲ್ಲೆಯಲ್ಲಿ ಕೊರೊನಾ ಸಾವುಗಳು ಕಡಿಮೆಯಾಗಲಿವೆ. ಸೋಂಕಿತರಿಗೆ ಹೊಸ ವಿಶ್ವಾಸ, ನೆರವು ಸಿಕ್ಕಂತಾಗುತ್ತದೆ.

Comment here