ತುಮಕೂರ್ ಲೈವ್

ಅಕ್ರಮ ಮರಳು ಶೇಖರಣೆ ಮೇಲೆ ತಹಶೀಲ್ದಾರ್ ದಾಳಿ

ತುಮಕೂರು:
ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳು ಶೇಖರಣೆ ಮಾಡಿದ್ದ ಅಡ್ಡೆಯ ಮೇಲೆ ತಹಶೀಲ್ದಾರ್ ಬಿ.ಎಂ.ಗೋವಿಂದರಾಜು ನೇತೃತ್ವದ ತಂಡ ದಾಳಿ ನಡೆಸಿ ನಾಲ್ಕು ಟ್ರಾಕ್ಟರ್ ಲೋಡು ಮರಳನ್ನು ವಶಪಡಿಸಿಕೊಂಡಿದ್ದಾರೆ.
ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಬೋಮ್ಮಲದೇವಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆದಿತಿಮ್ಮಪ್ಪ ಸ್ವಾಮಿ ದೇವಸ್ಥಾನದ ಸಮೀಪ ದೂರದ ಅರಣ್ಯ ಪ್ರದೇಶದ ಸರ್ಕಾರಿ ಗೋಮಾಳದಲ್ಲಿ ಅಕ್ರಮವಾಗಿ ಶೇಖರಣೆ ಮಾಡಲಾಗಿದೆ ಎಂಬ ಮಾಹಿತಿ ಅರಿತ ತಹಶೀಲ್ದಾರ್ ಹಾಗೂ ಸಿಬ್ಬಂಧಿ ದಿಢೀರ್ ದಾಳಿ ನಡೆಸಿ 4 ಟ್ರಾಕ್ಟರ್ ಲೋಡ್ ನಷ್ಟು ಮರಳನ್ನು ವಶಪಡಿಸಿಕೊಂಡಿದ್ದಾರೆ. ಹೊಳವನಹಳ್ಳಿ ಬಳಿ ಹರಿಯುವ ಜಯಮಂಗಲಿ ನದಿಯಿಂದ ಪ್ರತಿನಿತ್ಯ ಟ್ರಾಕ್ಟರ್ ಮೂಲಕ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡಿ ಅರಣ್ಯ ಪ್ರದೇಶದಲ್ಲಿ ಶೇಖರಣೆ ಮಾಡಲಾಗುತ್ತಿತ್ತು. ಮಧ್ಯ ರಾತ್ರಿ 12 ಗಂಟೆ ನಂತರ ಶೇಖರಣೆ ಮಾಡಿದ ಮರಳನ್ನು ಲಾರಿಗೆ ತುಂಬಿ ಬೆಂಗಳೂರು ನಗರಕ್ಕೆ ಸಾಗಾಣಿಕೆ ಮಾಡಲಾಗುತ್ತಿತ್ತು ಎನ್ನಲಾಗಿದೆ.
ಪ್ರತಿದಿನ ರಾತ್ರಿ ತಾಲ್ಲೂಕಿನ ಗಡಿಭಾಗ ಬೊಮ್ಮಲದೇವಿಪುರ, ಅಕ್ಕಾಜಿಹಳ್ಳಿ ಮೂಲಕ ಬೆಂಗಳೂರಿಗೆ ಅಕ್ರಮವಾಗಿ ಮರಳು ರಾತ್ರಿ ವೇಳೆ ದಂದೇಕೋರರು ಸಾಗಾಣಿಕೆ ಮಾಡುತ್ತಿದ್ದರು. ಈ ಬಗ್ಗೆ ಸ್ಥಳಿಯ ಜನರು ಪ್ರಶ್ನೆ ಮಾಡಿದರೆ ಜೀವ ಬೆದರಿಕೆ ಹಾಕುತ್ತಿದ್ದರು ಎಂದು ಸ್ಥಳೀಯರು ದೂರಿದ್ದಾರೆ.

 

Comment here