ತುಮಕೂರು ಲೈವ್

ಆಂಧ್ರಪ್ರದೇಶದಿಂದ ವೈ.ಎನ್.ಹೊಸಕೋಟೆಗೆ ಜನ: ಆತಂಕದಲ್ಲಿ ಗ್ರಾಮಸ್ಥರು

Publicstory. in


ವೈಎನ್ ಹೊಸಕೋಟೆ: ಆಂಧ್ರಪ್ರದೇಶದ ಜನತೆ ಅಗತ್ಯ ವಸ್ತುಗಳು ಮತ್ತು ಇನ್ನಿತರ ವ್ಯವಹಾರಕ್ಕಾಗಿ ಹೋಬಳಿ ಕೇಂದ್ರಕ್ಕೆ ಪ್ರತಿನಿತ್ಯ ಆಗಮಿಸುತ್ತಿದ್ದು, ಇವರಿಂದ ಕೊರೊನಾ ಹರಡುವ ಸಾಧ್ಯತೆ ಇದೆ ಎಂದು ವಿವಿಧ ಗ್ರಾಮಗಳ ಸಾರ್ವಜನಿಕರು ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

https://youtu.be/1uRGWhpvUys
ವೈ.ಎನ್.ಹೊಸಕೋಟೆ ಹೋಬಳಿಯು ಸುತ್ತಲೂ ಆಂದ್ರಪ್ರದೇಶದ ಗಡಿಯನ್ನು ಹೊಂದಿದೆ. ಹೋಬಳಿ ಕೇಂದ್ರದಿಂದ 35 ಕಿಲೋಮೀಟರ್ ದೂರದಲ್ಲಿರುವ ಆಂಧ್ರಪ್ರದೇಶದ ಕಲ್ಯಾಣದುರ್ಗದಲ್ಲಿ ಈಗಾಗಲೇ ಕರೊನಾ ವೈರಸ್ ಸೋಂಕು ದೃಢಪಟ್ಟಿದೆ.


ಕಾರ್ಟೂನ್ ಕಾರ್ನರ್: ಕೆ.ಎಂ.ಮುಸ್ತಾಫ, ರಿಪ್ಪನ್ ಪೇಟೆ


ಅದರಂತೆ 8 ಕಿಲೋಮೀಟರ್ ದೂರದ ಕಂಬದೂರು ಮತ್ತು ಬೆಸ್ತರಹಳ್ಳಿ ಗ್ರಾಮಗಳಲ್ಲಿ ತಲಾ ಒಬ್ಬರನ್ನು ಸೋಂಕಿತರು ಎಂಬ ಅನುಮಾನದೊಂದಿದೆ ಕ್ವಾರಂಟೈನ್ ಮಾಡಲಾಗಿದೆ. ಸೋಂಕು ಪೀಡಿತ ಹಿಂದೂಪುರಕ್ಕೆ ಇಲ್ಲಿಂದ ಹಲವರು ವ್ಯವಹಾರಕ್ಕಾಗಿ ಹೋಗಿ ಬಂದಿರುವ ಉದಾಹರಣೆಗಳಿವೆ. ಇಂತಹ ಸ್ಥಿತಿಯಲ್ಲಿ ಹೋಬಳಿಯ ಸುತ್ತಮುತ್ತಲಿನ ಆಂಧ್ರಪ್ರದೇಶದ ಹಳ್ಳಿಗಳ ಜನತೆ ದಿನಂಪ್ರತಿ ವಿವಿದ ಉದ್ದೇಶಗಳಿಗಾಗಿ ಆಗಮಿಸುತ್ತಿದ್ದಾರೆ. ಒಂದು ವೇಳೆ ಸೋಂಕು ಹೊಂದಿರುವವರು ಈ ರೀತಿ ಹೋಬಳಿ ಕೇಂದ್ರಕ್ಕೆ ಆಗಮಿಸಿದರೆ ಅಪಾಯ ತಪ್ಪಿದ್ದಲ್ಲ ಎನ್ನುತ್ತಾರೆ.


ಕೇಂದ್ರಕ್ಕೆ ಮೂರು ಕಡೆಯಿಂದ ಆಂಧ್ರಪ್ರದೇಶದ ಸಂಪರ್ಕ ಹೊಂದಿಸುವ ರಸ್ತೆಗಳಿವೆ. ದೊಡ್ಡಹಳ್ಳಿ ಮತ್ತು ಸಿದ್ದಾಪುರದ ಬಳಿ ಚೆಕ್ ಪೋಸ್ಟ್ ನಿರ್ಮಿಸಿ ಆಂದ್ರಪ್ರದೇಶದವರು ರಾಜ್ಯಕ್ಕೆ ಬಾರದಂತೆ ತಡೆಯಲಾಗುತ್ತಿದೆ.

ಗಡಿಭಾಗದ ಕಚ್ಚಾರಸ್ತೆಗಳಲ್ಲಿ ಕಂದಕಗಳನ್ನು ತೆಗೆದು ಬೇಲಿಯನ್ನು ಹಾಕಿ ಸಂಚಾರ ಬಂದ್ ಮಾಡಲಾಗಿದೆ. ಗಡಿ ಭಾಗದ ಹಳ್ಳಿಗಳಲ್ಲಿ ಪೋಲಿಸ್ ಕಾವಲು ವ್ಯವಸ್ಥೆ ಮಾಡಲಾಗಿದೆ.

ಆದಾಗ್ಯೂ ಆಂಧ್ರದ ಜನತೆ ಇವೆಲ್ಲವನ್ನು ತಪ್ಪಿಸಿ ದ್ವಿಚಕ್ರ ವಾಹನಗಳಲ್ಲಿ ಕಳ್ಳ ದಾರಿಗಳ ಮೂಲಕ ಹೋಬಳಿ ಕೇಂದ್ರಕ್ಕೆ ಬಂದು ಹೋಗುತ್ತಿದ್ದು, ಇದರಿಂದ ವೈರಸ್ ಹರಡುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ಮುಂಜಾನ 4-5 ಗಂಟೆಯಿಂದಲೇ ಗಡಿಗ್ರಾಮಗಳಲ್ಲಿ ವಾಹನಗಳ ಓಡಾಟ ಪ್ರಾರಂಭವಾಗುತ್ತಿದೆ. ಹೋಬಳಿಯ ಭೀಮನಕುಂಟೆ, ದಳವಾಯಿಹಳ್ಳಿ, ಗೌಡತಿಮ್ಮನಹಳ್ಳಿ, ಜಾಲೋಡು, ಮಾರಮ್ಮನಹಳ್ಳಿ ಮತ್ತು ಕುಣಿಹಳ್ಳಿಗಳ ಮೂಲಕ ಆಂದ್ರಿಗರು ಬಂದು ಹೋಗುತ್ತಿದ್ದಾರೆ. ಪೋಲೀಸ್ ವ್ಯವಸ್ಥೆ ಎಷ್ಟೇ ಕಟ್ಟುನಿಟ್ಟಾಗಿ ಕಾವಲಿದ್ದರೂ ಅವರನ್ನು ತಪ್ಪಿಸಿ ಹೋಬಳಿ ಕೇಂದ್ರದ ಮೂಲಕ ವಿವಿಧ ಪ್ರದೇಶಗಳಿಗೆ ಪ್ರಯಾಣಿಸುತ್ತಿರುವುದು ಸಾಮಾನ್ಯ ವಿಷಯವಾಗಿ ಪರಿಣಮಿಸಿದೆ. ಇದು ಹೀಗೆ ಇದು ಮುಂದುವರೆದರೆ ವೈ.ಎನ್.ಹೊಸಕೋಟೆ ಹೋಬಳಿಗೂ ಕರೋನ ವೈರಸ್ ಸೋಂಕುವ ದಿನಗಳು ದೂರ ಇಲ್ಲ ಎನಿಸುತ್ತದೆ.

ಈಗಲಾದರೂ ಸಂಬಂಧಿಸಿದವರು ಈ ಓಡಾಟವನ್ನು ತಡೆಯುವಲ್ಲಿ ಕಟ್ಟುನಿಟ್ಟಿನ ಕ್ರಮ ಅನುಸರಿಸಬೇಕು. ವಿಶೇಷ ಪೋಲೀಸ್ ದಳದ ಸರ್ಪಗಾವಲು ಹಾಕಬೇಕು ಎಂದು ಹಲವು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Comment here