ತುಮಕೂರ್ ಲೈವ್

ಆರ್ ಸಿಇಪಿ ವಿರುದ್ಧ ಮಕ್ಕಳ ಆಕ್ರೋಶ

ಭಾರತ ಕೃಷಿ ಆಧಾರಿತ ದೇಶ, ಇಲ್ಲಿ ರೈತರೇ ದೇಶದ ಬೆನ್ನೆಲುಬು. ಇಂಥ ರೈತರು ಈಗ ಸಂಕಷ್ಟಕ್ಕೆ ಗುರಿಯಾಗಬೇಕಾಗಿ ಬಂದಿದೆ. ಏನಂದ್ರೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದರೆ ದೇಶದ ರೈತರ ಬದುಕಿಗೆ ಧಕ್ಕೆಯಾಗುತ್ತದೆ ಎಂದು ಶಿರಾ ತಾಲೂಕಿನ ಹೊಂಬಾಳೆ ಯುವಜಆರ್ ಸಿಇಪಿ ಕೃಷಿ ಸರಕುಗಳನ ಸಂಘ ಆತಂಕ ವ್ಯಕ್ತಪಡಿಸಿದೆ.

ಸಿರಾ ತಾಲೂಕಿನ ಗುಳಿಗೇನಹಳ್ಳಿಯಲ್ಲಿ ಹೊಂಬಾಳೆ ಯುವಜನ ಸಂಘ ಆಯೋಜಿಸಿದ್ದ ಆರ್‌ಸಿಇಪಿ ಬೇಡ ನಿಲ್ಸಿ ಅಭಿಯಾನದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಮಂಜುನಾಥ್‌ ಆರ್ ಸಿಇಪಿ ಕೃಷಿ ಸರಕುಗಳ ಮೇಲಿನ ಆಮದು ಸುಂಕವನ್ನು ಶಾಶ್ವತವಾಗಿ ಶೂನ್ಯಕ್ಕೆ ತರುತ್ತದೆ, ಕೃಷಿ ಮತ್ತ ಹೈನುಗಾರಿಕೆ ಕ್ಷೇತ್ರಕ್ಕೆ ಭಾರಿ ಹೊಡೆತ ಬೀಳುತ್ತದೆ ಎಂದರು.

ಅನನ್ಯ ಯುವಜನ ಸಂಘದ ಅಧ್ಯಕ್ಷ ಕೆಂಪರಾಜು, ಆರ್‌ಸಿಇಪಿ ಒಪ್ಪಂದದಿಂದ ಅನೇಕ ದೇಶಗಳು ತಮ್ಮ ಕೃಷಿ ಉತ್ಪನ್ನಗಳನ್ನು ಭಾರತದಲ್ಲಿ ಮಾರಾಟ ಮಾಡಲು ನೋಡುತ್ತಿವೆ, ವಿದೇಶಿ ನಿಗಮಗಳು ರಾಷ್ಟ್ರೀಯ ನ್ಯಾಯಾಲಯಗಳಲ್ಲಿ ನಮ್ಮ ಸ್ವಂತ ರೈತರಿಗೆ ಮತ್ತು ಕಾರ್ಮಿಕರಿಗೆ ಸಹಾಯಮಾಡಿದಲ್ಲಿ ಸರಕಾರದ ವಿರುದ್ಧ ಮೊಕದ್ದಮೆ ಹೂಡಬಹುದು. ಹಾಗಾಗಿ ಈ ಒಪ್ಪಂದವು ದೇಶಕ್ಕೆ ಮತ್ತು ರೈತರಿಗೆ ಮುಳುವಾಗಲಿದೆ. ಇದನ್ನು ವಿರೋಧಿಸಬೇಕು ಎಂದು ಹೇಳಿದರು.

ಅಭಿಯಾನದಲ್ಲಿ ಹೊಂಬಾಳೆ ಯುವಜನ ಸಂಘದ ಉಪಾಧ್ಯಕ್ಷೆ ಶಾರದಾ, ಕಾರ್ಯದರ್ಶಿ ಮೇಘ ರಾಮದಾಸ್‌, ಅನನ್ಯ ಯುವಜನ ಸಂಘದ ಸದಸ್ಯ ಶರೀಫ್‌, ನವಚಿಗುರು ಟೀನೇಜರ್ಸ್‌ ಕ್ಲಬ್‌ ಸದಸ್ಯರು, ನವವಿಕಾಸ ಟೀನೇಜರ್ಸ್‌ ಕ್ಲಬ್‌ ಸದಸ್ಯರು, ಅದರ್ಶ ಯುವತಿ ಮಂಡಳಿಯ ಸದಸ್ಯೆ ಸಹನ, ಮಾತೃಭೂಮಿ ಯುವಜನ ಸಂಘದ ಸದಸ್ಯ ನಾಗರಾಜು, ಭವ್ಯ ಮತ್ತು ಕ್ರಾಂತಿ ಮಕ್ಕಳ ಸಂಘದ ಸದಸ್ಯರು ಭಾಗವಹಿಸಿದ್ದರು.

Comment here