ತುಮಕೂರು ಲೈವ್

ಇಬ್ಬರು ತಬ್ಲಿಘಿಗಳ ಸ್ಥಳಾಂತರ ಹೆಚ್ಚಿದ ಆತಂಕ

ತುಮಕೂರು ಜಿಲ್ಲೆ ಪಾವಗಡದಲ್ಲಿ ಕ್ವಾರಂಟೈನ್ ಮಾಡಲಾಗಿದ್ದ ತಬ್ಲಿಘಿಗಳಲ್ಲಿ ಇಬ್ಬರನ್ನು ಶುಕ್ರವಾರ ರಾತ್ರಿ ತುಮಕೂರಿನ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಗುಜರಾತ್ ನಿಂದ ಬಂದಿದ್ದ 13 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿತ್ತು ಅವರಲ್ಲಿ ಇಬ್ಬರನ್ನು ತುಮಕೂರಿಗೆ ಕಳುಹಿಸಿರುವುದು ತಾಲ್ಲೂಕಿನ ಜನತೆಯಲ್ಲಿ ಆತಂಕ ಮೂಡಿಸಿದೆ.

ಕ್ವಾರಂಟೈನ್ ಮಾಡಲಾದ ಕುರುಬರಹಳ್ಳಿ ಗೇಟ್ ಪ್ರದೇಶದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಈ ಭಾಗದ ಗ್ರಾಮಗಳ ಜನತೆ ಓಡಾಡದಂತೆ ಬ್ಯಾರಿಕೇಡ್ ಅಳವಡಿಸಲಾಗಿದೆ.

Comment here