ತುಮಕೂರು ಲೈವ್

ಈ ಬಾವಿಗೆ ಸೋಮವಾರ ಸಿಗಲಿದೆಯೇ ಮುಕ್ತಿ!

Publicstory. in


ತುಮಕೂರು: ಎಲ್ಲರೂ ಕೊರೊನಾ ಕಾರಣದಿಂದ ಮನೆಯೊಳಗೆ ಸೇರಿದ್ದಾರೆ. ಲಾಕ್ ಡೌನ್ ನಡುವೆಯೂ ತುಮಕೂರು ನಗರದ ಈ ಬಾವಿಗೆ ಸೋಮವಾರ ಮುಕ್ತಿ ಸಿಗಲಿದೆಯೇ ಎಂಬ ಕುತೂಹಲ ಗರಿಗೆದರಿದೆ.

ನೂರಾರು ಜನರ ಹಸಿವು, ಬಾಯಾರಿಕೆಯನ್ನು ಈ ಬಾವಿ ನೀಗಿಸಿದೆ. ಬಾವಿಯನ್ನು ಯಾರು ಕಟ್ಟಸಿದರು ಎಂಬುದು ಯಾರಿಗೂ ಗೊತ್ತಿಲ್ಲ. ಬೇಸಿಗೆಯಲ್ಲೂ ಬತ್ತದ ಬಾವಿ ಈಗ ಕುತೂಹಲದ ಕೇಂದ್ರಬಿಂದುವಾಗಿದೆ.


ಕಾರ್ಟೂನ್ ಕಾರ್ನರ್; ಮುಸ್ತಫಾ ಕೆ.ಎಂ. ರಿಪ್ಪನ್ ಪೇಟೆ


ಸುರಂಗದಂತೆ ಕಾಣುವ ಈ ಕಲ್ಲುಬಾವಿಯನ್ನು ನೋಡುವುದೇ ಒಂದು ಚೆಂದ. ಅಂದ ಹಾಗೆ ಈ ಭಾವಿ ತುಮಕೂರು ನಗರದ ಬೆಳಗುಂಬದಲ್ಲಿದೆ. ತನ್ನ ಒಡಲಲ್ಲಿ ನೀರು ಇಟ್ಟುಕೊಂಡಿದೆ. ಸಮುದ್ರದ ಜತೆ ನಂಟು ಉಪ್ಪಿಗೆ ಬಡತನ ಎಂಬ ಗಾದೆಯಂತೆ ಮನೆ ಬುಡದಲ್ಲೇ ಬಾವಿಇದ್ದರೂ ಈ ಬಡಾವಣೆಯ ಜನರು ಕುಡಿಯುವ ನೀರಿಗಾಗಿ ಹಾತೊರೆಯುತ್ತಿದ್ದಾರೆ.

ಬೆಳಗುಂಬ ವೆಂಕಟೇಶ್

ಕಾರಣ; ಬಾವಿ ಇದ್ದರೂ ಅದನ್ನು ಸ್ಚಚ್ಛ ಮಾಡಿ ನೀರು ಬಳಸಿಕೊಳ್ಳದ ಆಡಳಿತದ ಕುರುಡತನ.
ಈಗ ಈ ಬಾವಿ ಜೆಡಿಎಸ್ ಮುಖಂಡ ಬೆಳಗುಂಬ ವೆಂಕಟೇಶ್ ಅವರ ಕಣ್ಣಿಗೆ ಬಿದ್ದಿದೆ.

ದಿನಾಲೂ ಒಬ್ಬರಲ್ಲ ಒಬ್ಬರು ನೀರಿನ ಸಮಸ್ಯೆ ಹೇಳುತ್ತಲೇ ಇರುತ್ತಾರೆ. ಈಚೆಗೆ ಈ ಭಾವಿ ನನ್ನನ್ನು ಸೆಳೆಯುತ್ತಲೇ ಇತ್ತು. ಹಲವು ನಗರಗಳಲ್ಲಿ ಈಚೆಗೆ ಹಳೆ ಬಾವಿಗಳನ್ನು ಸ್ಚಚ್ಛ ಮಾಡಿ ಕುಡಿಯುವ ನೀರು ಕೊಟ್ಟ ಬಗ್ಗೆ ಓದಿದ್ದೇನೆ. ಅದನ್ನು ಇಲ್ಲಿ ಏಕೆ ಜಾರಿಗೊಳಿಸಬಾರದು ಎಂದು ಹೊಳೆಯಿತು. ಹೀಗಾಗಿ ಸೋಮವಾರ (ಏ.20) ಬಾವಿ ಸ್ಚಚ್ಛತೆಗೆ ಕೆಲಸ ಹಮ್ಮಿಕೊಳ್ಳಲಾಗಿದೆ ಎಂದರು.

ಹುಡುಗರೆಲ್ಲ ಸೇರಿಕೊಂಡು ಬಾವಿಯ ಹೂಳು, ಗಿಡಗಂಟೆ ತೆಗೆದು ಸರಿಪಡಿಸುತ್ತೇವೆ. ನಂತರ ಇದೇ ನೀರನ್ನು ಬಡಾವಣೆಗೆ ನೀಡಲು ಕಾರ್ಯಯೋಜನೆ ಹಾಕಿಕೊಂಡಿದ್ದೇವೆ ಎಂದರು.

ಲಾಕ್ ಡೌನ್ ನಡುವೆ ಬಾವಿಗೆ ಕಾಯಕಲ್ಪ ಸಿಗುತ್ತಿರುವುದು ಈ ಬಡಾವಣೆಯ ಜನರಲ್ಲಿ ಸಂಭ್ರಮ ತರಿಸಿದೆ. ಬಾವಿಗೆ ಹೋಗಲು ಇದ್ದ ಕಿರಿದು ರಸ್ತೆಯ ಒತ್ತುವರಿಯು ಆಗಿದೆ. ಅದನ್ನು ಸಹ ಈ ತಂಡ ತೆರವುಗೊಳಿಸಲಿದೆ.

ಬಾಯಾರಿಕೆಯ ಹಸಿವು ನೀಗಿಸುವ ಕೆಲಸಕ್ಕಿಂತ ದೊಡ್ಡ ಧರ್ಮದ ಕೆಲಸ ಬೇರೇನಿದೆ ಎನ್ನುತ್ತಾರೆ ಇಲ್ಲಿನ ಜನರು.

Comment here