ತುಮಕೂರು ಲೈವ್

ಊರುಕೆರೆಯಲ್ಲಿ ರೌಡಿಗಳ ಆರ್ಭಟ

Tumukuru: ಪ್ರಶ್ನಿಸಿದನೆಂಬ ಕ್ಷುಲ್ಲಕ ಕಾರಣಕ್ಕೆ ರೌಡಿಗಳ ಗುಂಪೊಂದು ಮೂವರು ನಾಗರಿಕರ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿರುವ ಘಟನೆ ತುಮಕೂರು ಹೊರವಲಯದ ಊರುಕೆರೆ ಗ್ರಾಮದಲ್ಲಿ ನಡೆದಿದೆ.

ಊರುಕೆರೆ ಗ್ರಾಮದಲ್ಲಿ ಕೃಷ್ಣಪ್ಪ ಕಾರು ಹಿಂದಕ್ಕೆ ತೆಗೆಯುತ್ತಿದ್ದಾಗ ರಾಜಣ್ಣನವರಿಗೆ ತಗುಲಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ಕೃಷ್ಣಪ್ಪ ಮತ್ತು ಆತನ ಬೆಂಬಲಿಗರು ಹಾಡಹಗಲೇ ಲಾಂಗು, ಮಚ್ಚುಗಳನ್ನು ಹಿಡಿದು ಊರಲ್ಲೆಲ್ಲ ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿದರು ಎಂದು ತಿಳಿದುಬಂದಿದೆ.

ಕೃಷ್ಣಪ್ಪ, ಮಂಜುನಾಥ್, ಜಗದೀಶ್, ಅಕ್ಷಯ್, ಪುರುಷೋತ್ತಮ್ ಮತ್ತು ರಘು ತಮ್ಮ ಕೈಗಳಲ್ಲಿ ಮಚ್ಚು ಲಾಂಗುಗಳನ್ನು ಹಿಡಿದು ರಾಜಣ್ಣನೂ ಸೇರಿ ಜೊತೆಯಲ್ಲಿದ್ದವರನ್ನು ಮನಬಂದಂತೆ ಲಾಂಗುಗಳಿಂದ ಕೊಚ್ಚಿದ್ದಾರೆ ಎನ್ನಲಾಗಿದೆ.

ದಾಳಿಯಲ್ಲಿ ಸುನಿಲ್, ಪುಟ್ಟನರಸಮ್ಮ, ರಂಗಣ್ಣ ತೀವ್ರ ಗಾಯಗೊಂಡಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಅಟ್ಟಹಾಸದಿಂದ ಇಡೀ ಗ್ರಾಮ ಭೀತಗೊಂಡಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.

Comment here