ತುಮಕೂರು: ನಗರದ ಬಟವಾಡಿಯ 80 ಅಡಿ ರಸ್ತೆಯ ಎಂಟನೇಯ ತಿರುವಿನ ರಸ್ತೆ ಬದಿ ತಳ್ಳುವ ಗಾಡಿಯ ಮೇಲೆ 2000 ಮುಖ ಬೆಲೆಯ ಚಿತ್ರ ಇರುವ ನೋಟಿನ ಪರ್ಸ್ ಇಟ್ಟಿದ್ದು ದಾರಿ ಹೋಕರು, ಈ ಭಾಗದ ಮನೆ ಮಾಲೀಕರು, ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಐದಾರು ಮಂದಿಯ ಗುಂಪೊಂದು ಈ ಕೃತ್ಯ ಎಸಗುತ್ತಿದೆ.ಜನರು ಹಣವೆಂದು ತಪ್ಪಾಗಿ ಭಾವಿಸಿ ಪರ್ಸ್ ಮುಟ್ಟುತ್ತಾರೆ. ಕೊರೊನಾ ಸೋಂಕಿನ ಪರ್ಸ್ ಇರಬಹುದೇ ಎಂದು ಭಯ ಬೀಳುತ್ತಾರೆ.
ಇದೇ ಹುಡುಗರ ತಂಡವೇ ರಸ್ತೆ ಬದಿಯಲ್ಲೂ ಇಂತ ಪರ್ಸ್ ಗಳನ್ನು ಎಸೆದು ಕುಕೃತ್ಯ ಎಸಗುತ್ತಿದೆ. ಇದು ಜನರಿಗೆ ಭಯವನ್ನು ತರಿಸಿದೆ.
ಜನರಲ್ಲಿ ಭಯ ಉಂಟಾಗುತ್ತಿದೆ.ಇಂತ ಕಿಡಿಗೇಡಿ ಕೃತ್ಯಗಳು ನಡೆಯಬಾರದು ಎಂದು ಬಟವಾಡಿ ರಂಗನಾಥ ಪಬ್ಲಿಕ್ ಸ್ಟೋರಿ.ಇನ್ ಗೆ ತಿಳಿಸಿದರು.
Comment here