ತುಮಕೂರು ಲೈವ್

ಒಂದೇ ದಿನ 5 ಟನ್ ತರಕಾರಿ, 3‌ ಟನ್ ಬಾಳೇಕಾಯಿ ವಿತರಿಸಿದ ಸುರೇಶಗೌಡ

Publicstory. in


Tumkuru: ತುಮಕೂರು‌ ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಬಿ.ಸುರೇಶಗೌಡ ಅವರು ಕ್ಷೇತ್ರದ ಬಡವರಿಗೆ ಗುರುವಾರ ಒಂದೇ ದಿನ ಸುಮಾರು 5 ಟನ್ ತರಕಾರಿ ಹಾಗೂ 3 ಟನ್ ಬಾಳೇಕಾಯಿಯನ್ನು ವಿತರಿಸಿದರು.

ತರಕಾರಿ, ಬಾಳೇಕಾಯಿ ಬೆಳೆದು ಸಂಕಷ್ಟದಲ್ಲಿರುವ ರೈತರಿಗೆ ಸಹಾಯ ಮಾಡಲು ಈ ಯೋಜನೆ ಹಾಕಿಕೊಂಡಿದ್ದಾರೆ.

ಕ್ಷೇತ್ರದಲ್ಲಿ ತರಕಾರಿ, ಬಾಳೆ ಬೆಳೆದಿರುವ ಸಾವಿರಾರು ರೈತರು ಕರೊನಾ, ಲಾಕ್ ಡೌನ್ ಕಾರಣ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಧ್ಯವಾಗದೇ ಸಂಕಷ್ಟದಲ್ಲಿದ್ದಾರೆ. ಇನ್ನೊಂದಡೆ, ಜನರಿಗೆ ತರಕಾರಿ ಕೊಳ್ಳಲು ಸಾಧ್ಯವಾಗದೇ ಸಮಸ್ಯೆಯಲ್ಲಿದ್ದಾರೆ. ಹೀಗಾಗಿ ಇಬ್ಬರನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಯೋಜನೆ ರೂಪಿಸಲಾಗಿದೆ. ಮೇ 3 ರವರೆಗೂ ಇದು ಮುಂದುವರೆಯಲಿದೆ.

ಓದಿ: http://publicstory.in/ತುಮಕೂರು-ಗ್ರಾಮಾಂತರದಲ್ಲಿ-ಸ/

ಕಾರ್ಯಕ್ರಮಕ್ಕೆ ಚಾಲ‌ನೆ ನೀಡಿದ ಸಂಸದೆ ಶೋಭಾ ಕರದ್ಲಾಂಜೆ, ಬಡವರಿಗೆ,‌ರೈತರಿಗೆ ಸಹಾಯ ಮಾಡುವುದು ಧರ್ಮದ ಕೆಲಸವಾಗಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರಮೋದಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಹ ಇದನ್ನೇ ಹೇಳಿದ್ದಾರೆ. ಜನರಿಗೆ ಸಹಾಯ ಹಸ್ತ ಚಾಚುವ ಕೆಲಸವನ್ನು ಪಕ್ಷದ ಮುಖಂಡರು, ಕಾರ್ಯಕರ್ತರು ಮಾಡಬೇಕು ಎಂದರು.

ಜ್ಯೋತಿ ಗಣೇಶ್, ಮಾಜಿ ಶಾಸಕ ಬಿ.ಸುರೇಶಗೌಡ, ತುಮಕೂರು ವಿ.ವಿ.ಸಿಂಡಿಕೇಟ್ ಸದಸ್ಯೆ ಐಶ್ವರ್ಯ ಸುರೇಶಗೌಡ‌ ಸೇರಿದಂತೆ ಪಕ್ಷದ ಹಲವಾರು ಮುಖಂಡರು ಇದ್ದರು.

ಟೊಮೆಟೊ, ಗೆಣಸು ಮತ್ತಿತರ ತರಕಾರಿಗಳನ್ನು ಪ್ಯಾಕ್ ಮಾಡಿ ನೀಡಲಾಯಿತು. ಪಡಿತರ ಕಾರ್ಡ್ ಇಲ್ಲದವರಿಗೆ ಅಕ್ಕಿ, ಅಡುಗೆ ಎಣ್ಣೆ, ಈರುಳ್ಳಿ ವಿತರಿಸಲಾಯಿತು. ಹೊನ್ನುಡಿಕೆ, ಹೆಬ್ಬೂರು ಸುತ್ತಮುತ್ತಲಿನ ಅನೇಕ ಗ್ರಾಮಗಳಿಗೆ ನೀಡಲಾಯಿತು.

Comment here