Thursday, March 28, 2024
Google search engine
Homeಜನಮನಕಡತ ವಿಲೇವಾರಿಗೆ ರಾಜ್ಯಕ್ಕೆ ಮಾದರಿಯಾದ ಚಿಕ್ಕಮಗಳೂರು ಎಸಿ

ಕಡತ ವಿಲೇವಾರಿಗೆ ರಾಜ್ಯಕ್ಕೆ ಮಾದರಿಯಾದ ಚಿಕ್ಕಮಗಳೂರು ಎಸಿ

🖋 ಲಕ್ಷ್ಮೀಕಾಂತರಾಜು ಎಂ.ಜಿ


ಕಂದಾಯ ಇಲಾಖೆಯಲ್ಲಿ ಕಡತ ವಿಲೇವಾರಿ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಂಡರೂ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಕಚೇರಿಗಳಲ್ಲಿ ರೈತರ ವ್ಯಾಜ್ಯಗಳ ಕಡತಗಳು ಧೂಳು ಹಿಡಿಯುತ್ತಿರುವ ಸಂದರ್ಭದಲ್ಲಿ ಉಪವಿಭಾಗಾಧಿಕಾರಿಯೋರ್ವರ ಸ್ವಯಂ ಆಸಕ್ತಿಯಿಂದ ಅವರ ಕಚೇರಿಯಲ್ಲಿನ ರೈತರ ಪ್ರಕರಣಗಳೆಲ್ಲಾ ಬಗೆ ಹರಿಯುತ್ತಿವೆ.


ಕಾರ್ಟೂನ್ ಕಾರ್ನರ್: ಮುಸ್ತಾಫ್ ಕೆ.ಎಂ. ರಿಪ್ಪನ್ ಪೇಟೆ


ಹೌದು. ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು ವಿಭಾಗದ ಉಪವಿಭಾಗಾಧಿಕಾರಿಯಾದ ಡಾ. ಎಚ್ ಎಲ್ ನಾಗರಾಜು ಅವರಿಗೆ ರಾಜ್ಯದಲ್ಲೇ ಅತಿ ಹೆಚ್ಚು ಪ್ರಕರಣಗಳ ಬಗೆಹರಿಸಿದ ಕೀರ್ತಿ ಸಲ್ಲುತ್ತದೆ.

ತಾವು ಕರ್ತವ್ಯ ನಿರ್ವಹಿಸಿದ ಕಡೆಯಲ್ಲೆಲ್ಲ ಸಾಮಾಜಿಕ ನ್ಯಾಯ ಹಾಗೂ ಸರ್ಕಾರಿ ಶಾಲೆಗಳ ಉಳಿವಿಗೆ ಕೆಲಸ ಮಾಡಿರುವ ಇವರು ಚಿಕ್ಕಮಗಳೂರು ವಿಭಾಗಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು ಕೇವಲ ಮೂರು ತಿಂಗಳ ಅವಧಿಯೊಳಗೆ ಅವರ ಕೆಲಸದ ವೇಗವನ್ನು ಉಪವಿಭಾಗಾಧಿಕಾರಿ ನ್ಯಾಯಾಲಯದ ಅಂಕಿ ಅಂಶಗಳೇ ದೃಢೀಕರಿಸುತ್ತವೆ.

ಡಾ. ಎಚ್‌.ಎಲ್ .ನಾಗರಾಜು ಅವರು ಚಿಕ್ಕಮಗಳೂರು ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದ್ದ 1628 ವ್ಯಾಜ್ಯ RA ಪ್ರಕರಣಗಳಲ್ಲಿ 423 ಪ್ರಕರಣಗಳನ್ನ ಬಗೆಹರಿಸಿ 45 ಪ್ರಕರಣಗಳನ್ನ ವಜಾಗೊಳಿಸುವ ಮೂಲಕ 468 ಪ್ರಕರಣಗಳಿಗೆ ಇತೀಶ್ರೀ ಹಾಡಿ ರೈತರ ಪ್ರಕರಣಗಳಿಗೆ ಮುಕ್ತಿ ನೀಡಿದ್ದಾರೆ.

ಇದರ ಜೊತೆಗೆ ಪಹಣಿ ತಿದ್ದುಪಡಿ ಪ್ರಕರಣಗಳಲ್ಲಿ 135 ಪ್ರಕರಣಗಳನ್ನ ಬಗೆಹರಿಸುವುದರ ಮೂಲಕ ಒಟ್ಟು 603 ಪ್ರಕರಣಗಳನ್ನ ಬಗೆ ಹರಿಸಿ ಹೆಚ್ಚು ಪ್ರಕರಣಗಳನ್ನ ವಿಚಾರಣೆ ನಡೆಸಿ ತೀರ್ಪು ನೀಡಿ ರಾಜ್ಯದ ಮೊದಲ ಸ್ಥಾನದಲ್ಲಿ ಚಿಕ್ಕಮಗಳೂರು ಉಪವಿಭಾಗಾಧಿಕಾರಿಯವರ ನ್ಯಾಯಾಲಯ ಮುಂಚೂಣಿಯಲ್ಲಿದೆ.

ಅರೆ ನ್ಯಾಯಿಕ ಮಂಡಳಿಗಳಾದ ತಹಸೀಲ್ದಾರ್ ,ಎಸಿ,ಡಿಸಿ ಕೋರ್ಟ್ ಗಳಲ್ಲಿ ವಿಚಾರಣೆ ಇದ್ದು ಪೀಠಾಸನಾಧಿಕಾರಿಗಳು ವಿಚಾರಣೆಗೆ ಸಿಗದೆ ರೈತರು ನ್ಯಾಯಾಲಯಗಳಿಗೆ ವರ್ಷಗಳ ಕಾಲ ಅಲೆದರೂ ಪ್ರಕರಗಳು ಮಾತ್ರ ಬಗೆ ಹರಿದಿರುವುದಿಲ್ಲ. ಇಂಥಹ ಸಂದರ್ಭದಲ್ಲಿ ಚಿಕ್ಕಮಗಳೂರು ವಿಭಾಗಾಧಿಕಾರಿಯವರು ಸ್ವಯಂ ಮುತುವರ್ಜಿಯ ಮೂಲಕ ರೈತರ ಭೂ ವಿವಾದ ಬಗೆಹರಿಸಿ ರೈತರುಗಳ ಅಭಿನಂದನೆಗೆ ಪಾತ್ರರಾಗಿದ್ದಾರೆ.

ಚಿಕಮಗಳೂರು ಉಪ ವಿಭಾಗೀಯ ಕಚೇರಿಯಲ್ಲಿ ರೈತರ ಸಮಸ್ಯೆಗಳ‌ ಬಗೆಹರಿಸುತ್ತಿರುವ ಬಗ್ಗೆ ಅಲ್ಲಿನ ಅನೇಕ ರೈತರು ನನ್ನೊಂದಿಗೆ ಸಾಕಷ್ಟು ಸಲ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲಿನ ಮಾದರಿಯನ್ನು ರಾಜ್ಯದ ಎಲ್ಲ ಉಪ ವಿಭಾಗಾಧಿಕಾರಿ ಕಚೇರಿಗಳಲ್ಲೂ ಜಾರಿಗೆ ತರಲು ಸರ್ಕಾರ ಆಸಕ್ತಿ ವಹಿಸಬೇಕು ಎನ್ನುತ್ತಾರೆ ಪ್ರಾಂತ ರೈತ ಸಂಘದ ತುಮಕೂರು ಜಿಲ್ಲಾ ಸಂಚಾಲಕ ಸಿ.ಅಜ್ಜಪ್ಪ.

ಸದಾ ಜನರ ಸೇವೆಗೆ ಹೆಸರಾಗಿರುವ ಡಾ. ಎಚ್ ಎಲ್ ನಾಗರಾಜು ಅವರು ಅತ್ಯಂತ ಪ್ರಾಮಾಣಿಕ ಅಧಿಕಾರಿಯೆಂಬುದು ಅವರು ಈ ಹಿಂದೆ ಅವರು ಕೆಲಸ ನಿರ್ವಹಿಸಿದ ಕಡೆಯಲ್ಲಾ ರುಜುವಾತಾಗಿದೆ. ಇಂಥಹ ಪ್ರಾಮಾಣಿಕ ಅಧಿಕಾರಿಯನ್ನ ಸರ್ಕಾರ ಮತ್ತಷ್ಟು ಪ್ರೋತ್ಸಾಹಿಸಬೇಕಿದೆ.


ನಾನು ತಹಸೀಲ್ದಾರ್ ಹುದ್ದೆಯಿಂದಲೂ ಕರ್ತವ್ಯ ನಿರ್ವಹಿಸಿದ ಸ್ಥಳಗಳಲ್ಲಿ ಸಾರ್ವಜನಿಕರ ಹಾಗೂ ವಿಶೇಷವಾಗಿ ರೈತರ ಸಾಕಷ್ಟು ಕೆಲಸ ಮಾಡಿಕೊಟ್ಟಿದ್ದೇನೆ. ಸರ್ಕಾರಿ ಶಾಲೆಗಳನ್ನ ಉಳಿಸಲು ನನ್ನ ಪ್ರಯತ್ನ ಮಾಡಿಕೊಂಡು ಬಂದಿದ್ದೇನೆ. ಇಷ್ಟಾದರೂ ಕೆಲಸ ಮಾಡುವ ಹುಮ್ಮಸ್ಸು ಮತ್ತಷ್ಟೂ ಹೆಚ್ವಿದೆ. ನನ್ನದು ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕು. ನನ್ನ ಜಿಲ್ಲೆಯಲ್ಲಿ ಅಧಿಕಾರಿಯಾಗಿ ಜನರಿಗೆ ಸೇವೆ ಮಾಡುವ ಅವಕಾಶವನ್ನ ಸರ್ಕಾರ ಮಾಡಿಕೊಟ್ಟರೆ ಇನ್ನೂ ಹೆಚ್ಚಿನ ಶ್ರಮವಹಿಸಿ ಕೆಲಸ ಮಾಡುವ ಆಸೆ ಇದೆ ಎನ್ನುತ್ತಾರೆ ನಾಗರಾಜ್
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?