ತುಮಕೂರ್ ಲೈವ್

ಕಣಕುಪ್ಪೆ ಅಂಗನವಾಡಿ ಕೇಂದ್ರಕ್ಕೆ ಸಿಇಓ ಭೇಟಿ

ತುಮಕೂರು ತಾಲ್ಲೂಕಿನ ಕಣಕುಪ್ಪೆ ಗ್ರಾಮದ ಪಂಚಾಯಿತಿ ಅಂಗನವಾಡಿ ಕೇಂದ್ರಕ್ಕೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾಕಲ್ಯಾಣ್ ಭೇಟಿ ನೀಡಿ ಪರಿಶೀಲಿಸಿದರು.ಅಂಗನವಾಡಿಯಲ್ಲಿ ಜರುಗುತ್ತಿದ್ದ ಬಾಲವಿಕಾಸ ಸಮಿತಿ ಸಭೆ ಸಂದರ್ಭದಲ್ಲಿ ಅನಿರೀಕ್ಷಿತ ಭೇಟಿ ನೀಡಿದ ಅವರು, ಮಕ್ಕಳಿಗೆ ವಿತರಿಸುವ ಪೌಷ್ಠಿಕ ಆಹಾರ, ಕುಡಿಯುವ ನೀರು, ವೈಯುಕ್ತಿಕ ಆರೋಗ್ಯ, ಶೌಚಾಲಯ ವ್ಯವಸ್ಥೆ ಕುರಿತಂತೆ ಸಮಿತಿಯ ಸದಸ್ಯರಾದ ಮಕ್ಕಳ ತಾಯಂದಿರು, ಅಂಗನವಾಡಿ ಕಾರ್ಯಕರ್ತೆ, ಆಶಾ ಕಾರ್ಯಕರ್ತೆ ಹಾಗೂ ಕಣಕುಪ್ಪೆ ಗ್ರಾಮ ಪಂಚಾಯಿತಿ ಸದಸ್ಯರೊಡನೆ ಚರ್ಚಿಸಿದರು. ನಂತರ ಮಕ್ಕಳ ತಾಯಂದಿರಿಗೆ ವಿತರಿಸುವ ಕೋಳಿ ಮೊಟ್ಟೆಯ ಹಣ ಅವರ ಬ್ಯಾಂಕ್ ಖಾತೆಗೆ ಜಮಾ ಆಗಿರುವ ಬಗ್ಗೆ ಪರಿಶೀಲಿಸಿದರು.ನಂತರ ಹೆಬ್ಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಮ್ಮಸಂದ್ರ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಭೇಟಿ ನೀಡಿ ಹಾಜರಾತಿ, ವಸತಿ ಸೌಕರ್ಯ, ವಿತರಿಸಲಾಗುತ್ತಿರುವ ಆಹಾರದ ಗುಣಮಟ್ಟ, ಮಕ್ಕಳ ವಿದ್ಯಾಭ್ಯಾಸದ ಗುಣಮಟ್ಟ ಮತ್ತು ಶುಚಿತ್ವದ ಬಗ್ಗೆ ಪರಿಶೀಲಿಸಿದರು.

Comment here