ಜನಮನ

ಕಾನೂನು ಕ್ಷೇತ್ರದಲ್ಲಿ ಎರಡು ಸವಾಲುಗಳು: ಪ್ರೊ. ಕರಿಯಣ್ಣ

ಪಬ್ಲಿಕ್ ಸ್ಟೋರಿ


ತುಮಕೂರು: ಪ್ರಾಧ್ಯಾಪಕರು, ಉಪನ್ಯಾಸಕರು ಪ್ರತಿ ದಿನವೂ ಓದಬೇಕು. ಅಪ್ ಡೇಟ್ ಆಗುತ್ತಿರಬೇಕು ಎಂದು ಚಿತ್ರದುರ್ಗ ಸರಸ್ವತಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಕರಿಯಣ್ಣ ತಿಳಿಸಿದರು‌.

ತುಮಕೂರಿನಲ್ಲಿ ಈಚೆಗೆ ಅವರ ಸ್ನೇಹ ಬಳಗದ ವತಿಯಿಂದ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜ್ಯ ಮುಕ್ತವಿಶ್ವವಿದ್ಯಾಲಯದಿಂದ ಪೇಟೆಂಟ್ ವಿಷಯವಾಗಿ ಡಾಕ್ಟರೇಟ್ ಪದವಿ ಪಡೆದ ಅವರನ್ನು ಸನ್ಮಾನಿಸಲಾಯಿತು.

ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ನಡುವೆ ಸುಮಧುರ ಭಾವನೆಗಳಿರಬೇಕು. ಆದರೆ ಅವರಿಗೆ ಕಲಿಸುವ ವಿಚಾರದಲ್ಲಿ ಕಠಿಣವಾಗಿಯೇ ನಡೆದುಕೊಳ್ಳಬೇಕು ಎಂದು ತಿಳಿಸಿದರು.

ಕಾನೂನು ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿವೆ ಹಾಗೆಯೇ ಸವಾಲುಗಳು ಸಹ ಇವೆ. ಅವಕಾಶಗಳನ್ನು ಬಳಸಿಕೊಳ್ಳುವ, ಸವಾಲುಗಳನ್ನು ಎದುರಿಸುವ ಎರಡೂ ಕಲೆಗಳನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡಬೇಕು ಎಂದರು.

ಕಾಲೇಜಿನ ಸಿಬ್ಬಂದಿ, ಉಪನ್ಯಾಸಕರ ನಡುವೆ ಸೌಹಾರ್ದತೆ ಹೆಚ್ಚಾಗಿ ಇದ್ದಷ್ಟು ಕಾಲೇಜಿನ ವಾತಾವರಣ ಚೆನ್ನಾಗಿರಲಿದೆ.‌ಇದು ಬೋಧನೆಯ ಗುಣಮಟ್ಟದ ಹೆಚ್ಚಳಕ್ಕೂ ಕಾರಣವಾಗಲಿದೆ ಎಂದರು.
ರಾಜ್ಯ ಕಾನೂನು ವಿ.ವಿ. ಅಕಡೆಮಿಕ್ ಕೌನ್ಸಿಲ್ ಸದಸ್ಯರಾದ ಎಸ್. ರಮೇಶ, ವಕೀಲರಾದ ಮಹೇಂದ್ರ ಕೃಷ್ಣಮೂರ್ತಿ, ಸುಫಿಯಾ ಕಾನೂನು ಕಾಲೇಜಿನ ಜಗದೀಶ್, ಗ್ರಂಥಾಧಿಕಾರಿ ಸುಬ್ಬು, ವಕೀಲರಾದ ಗೌರಿಶಂಕರ್ ಇತರರು ಇದ್ದರು.

Comment here