Publicstory. in
Tumkuru: ಕುಷ್ಠರೋಗ ದೇವರ ಶಾಪ ಎಂದು ಭಾವಿಸದೆ ಒಂದು ಸಾಂಕ್ರಾಮಿಕ ಕಾಯಿಲೆ ಎಂದು ತಿಳಿದು ಸ್ಪರ್ಶ ಜ್ಞಾನವಿಲ್ಲದ ಮಚ್ಚೆಗಳು ಚರ್ಮದ ಮೇಲೆ ಬಂದರೆ ಚರ್ಮರೋಗ ತಜ್ಞರ ಬಳಿ ಪರೀಕ್ಷಿಸಿಕೊಂಡರೆ ಪ್ರಾಥಮಿಕ ಹಂತದಲ್ಲೇ ಕುಷ್ಠರೋಗವನ್ನು ಸಂಪೂರ್ಣವಾಗಿ ವಾಸಿ ಮಾಡಬಹುದಾದ ಕಾಯಿಲೆ ಎಂದು ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.M.ಚೇತನ್ ತಿಳಿಸಿದರು.
ಅವರು ಸಿದ್ದಗಂಗಾ ಮಠದಲ್ಲಿ ಫೆಬ್ರುವರಿ 13ರಂದು ಕುಷ್ಠರೋಗ ಜಾಗೃತಿ ಅಭಿಯಾನದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಎಲ್ಲಾ ಮಚ್ಚೆಗಳು ಕುಷ್ಠರೋಗ ಆಗಿರುವುದಿಲ್ಲ ಆದರೆ ಸ್ಪರ್ಶಜ್ಞಾನವಿಲ್ಲದ ಮಚ್ಚೆಗಳು ಕುಷ್ಠರೋಗ ಆಗಿರಲು ಸಾಧ್ಯ. ಮೊದಲ ಹಾಗೂ ಎರಡನೇ ಹಂತದಲ್ಲಿ ರೋಗಿಗಳನ್ನು ಪತ್ತೆಹಚ್ಚಿ ಸರಿಯಾದ ವೇಳೆಯಲ್ಲಿ ನಿಗದಿತ ಚಿಕಿತ್ಸೆ ನೀಡಿದಾಗ ಎಲ್ಲಾ ಕುಷ್ಠರೋಗಿಗಳು ಈ ಕಾಯಿಲೆಯಿಂದ ಗುಣಮುಖರಾಗಬಹುದು ಎಂದರು.
ಕುಷ್ಠರೋಗಿಗಳನ್ನು ಕಡೆಗಣಿಸದೆ ಅವರಿಗೆ ಚಿಕಿತ್ಸೆಗೆ ಸಹಾಯ ಸಹಕಾರ ನೀಡಿ ರೋಗದಿಂದ ವಾಸಿಯಾಗಲು ಸಹಕರಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಜಪಾನಂದ ಸ್ವಾಮೀಜಿ ಮಾತನಾಡಿ, ಒಳ್ಳೆಯ ಕಾರ್ಯಕ್ಕೆ ನಾವೆಲ್ಲರೂ ಸಹಕಾರ ನೀಡಿ ಕುಷ್ಠರೋಗ ನಿಯಂತ್ರಣಕ್ಕೆ ಮುಂದಾಗೋಣ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರಾಜಣ್ಣ, ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಪಾವಗಡ ಕೇಂದ್ರದ ಯೋಜನಾಧಿಕಾರಿ ನಾಗರಾಜು, ಹಿರಿಯ ಆರೋಗ್ಯ ಸಹಾಯಕ ರುದ್ರಮೂರ್ತಿ, ಸತೀಶ್ ಬಾಬು ಸೇರಿದಂತೆ ಸಿಬ್ಬಂದಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Comment here