ತುಮಕೂರ್ ಲೈವ್

ಕೆಬಿ ಸಿದ್ದಯ್ಯ‌ಸಂತನೂ ಹೌದು,‌ಸಂಸಾರಿಯೂ ಹೌದು

ಕವಿ ಕೆ.ಬಿ.ಸಿದ್ದಯ್ಯ ಏಕಕಾಲಕ್ಕೆ ಕವಿಯೂ ಸಂತನೂ ಸಂಸಾರಿಯೂ ಮತ್ತು ರಾಜಕೀಯ ವ್ಯಕ್ತಿಯಾಗಿ ಕಾಣುತ್ತಿದ್ದರು. ಬಿಳಿಗಡ್ಡ ಮತ್ತು ಬಿಳಿ ಕೂದಲು ಕಂಡರೆ ಎಷ್ಟೇ ಜನರಿರಲಿ ಕೆ.ಬಿ ಅವರನ್ನು ಗುರುತಿಸಬಹುದಾಗಿತ್ತು ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅಭಿಪ್ರಾಯಪಟ್ಟರು.

ಜನಪರ ಸಂಘಟನೆಗಳ ಒಕ್ಕೂಟದ ವತಿಯಿಂದ ತುಮಕೂರಿನ ಅಮಾನಿಕೆರೆ ಎದುರಿನಲ್ಲಿರುವ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಕೆ.ಬಿ.ಸಿದ್ದಯ್ಯನವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರಾಗಿದ್ದ ಕೆ.ಬಿ.ಸಿದ್ದಯ್ಯ ಎಂದೂ ವಿಧಾನಸೌಧದಲ್ಲಿ ಕಾಣಿಸಿಕೊಳ್ಳಲಿಲ್ಲ. ಆದರೆ ಸಿದ್ದರಾಮಯ್ಯ ಮನೆಗೆ ಬರುತ್ತಿದ್ದರು. ಅಲ್ಲಿ ನಾನು ಅವರನ್ನು ನೋಡಿದ್ದೆ. ಅವರ. ಬಿಳಿಯ ಗಡ್ಡ, ಬಿಳಿಯ ಕೂದಲ ಮತ್ತು ಇತ್ತೀಗೆ ಹಾಕಿಕೊಳ್ಳುತ್ತಿದ್ದ ಕಪ್ಪು ಕನ್ನಡ ಎಲ್ಲರ ನಡುವೆ ಅವರನ್ನು ಗುರುತಿಸುವಂತಹ ವ್ಯಕ್ತಿತ್ವವಾಗಿತ್ತು.

ಕವಿ ಕೆ.ಬಿ.ಸಿದ್ದಯ್ಯ ಸಂತನೋ, ಸಂಸಾರಿಯೋ ರಾಜಕಾರಣಿಯೋ ಏನೆಂದು ತಿಳಿಯುವ ಮೊದಲೇ ಅವರು ಹೋದರು. ಸಾಹಿತಿಗಳ ಸುತ್ತಮುತ್ತ ಒಂದು ಪ್ರಭಾವಳಿ ಇರುತ್ತದೆ. ಆದರೆ ದೇವನೂರು ಮಹಾದೇವ ಮತ್ತು ಕೆ.ಬಿ.ಸಿದ್ದಯ್ಯ ಅವರಲ್ಲಿ ಅಂತಹ ಯಾವುದೇ ಪ್ರಭಾವಳಿ ಇರಲಿಲ್ಲ ಎಂದು ಹೇಳಿದರು.

ಕೆ.ಬಿ. ಸಿದ್ದಯ್ಯ ಭಾಷಣದಲ್ಲಿ ಕಟುವಾಗಿ ಮಾತನಾಡುತ್ತಿದ್ದರೋ ಅವರ ಮನಸ್ಸಿನಲ್ಲಿ ಅಂತಹ ಯಾವುದೇ ಭಾವನೆ ಇರುತ್ತಿರಲಿಲ್ಲ. ಬೇರೆಯವರನ್ನು ಟೀಕೆ ಮಾಡಿ ಏಕೆ ತಮ್ಮ ಮೇಲೆ ಎಳೆದುಕೊಳ್ಳುತ್ತಿರಿ ಎಂದರೆ ಬಿಡೋ ಎನ್ನುತ್ತಿದ್ದರು. ಮೇಲ್ನೋಟಕ್ಕೆ ಕಟುವಾಗಿ ಟೀಕಿಸಿದರೂ ಅವರ ಒಳಗಡೆ ಅಂತಹ ಕಹಿ ಇರಲಿಲ್ಲ.

ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮ ಕುಮಾರ್ ಮಾತನಾಡಿ ಕೆ.ಬಿ.ಸಿದ್ದಯ್ಯ ಇನ್ನೂ ಎತ್ತರಕ್ಕೆ ಬೆಳೆಯಬಹುದಿತ್ತು. ಆದರೆ ಹಾಗೆ ಆಗಲಿಲ್ಲ. ಅವರೊಂದು ಪುಷ್ಪಕವಿಮಾನವಿದ್ದಂತೆ. ಅದರಲ್ಲಿ ಯಾರೂ ಹತ್ತಲಿಲ್ಲ. ಅದು ಮೇಲಕ್ಕೂ ಹೋಗಲಿಲ್ಲ. ಪುಷ್ಪಕ ವಿಮಾನ ಹತ್ತಿದ್ದರೆ ಮೇಲಕ್ಕೆ ಹೋಗುತ್ತಿದ್ದರು ಎಂದು ಮೆಲುಕು ಹಾಕಿದರು. ದಲಿತರಲ್ಲಿ ಅಸ್ಪøಶ್ಯರಲ್ಲಿಯೂ ಅಸ್ಪøಶ್ಯತೆ, ಸ್ಪರ್ಶತೆ ಇದೆ. ಅಸ್ಪøಶ್ಯರಲ್ಲಿಯೇ ವಿವಾಹವಾಗಿ ಸಾಧನೆ ಮಾಡಿ ತೋರಿಸಿದರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜನಪರ ಚಿಂತಕ ಕೆ.ದೊರೈರಾಜ್, ವಿಮರ್ಶಕ ನಟರಾಜ್ ಬೂದಾಳ್, ಕವಿ ಡಾ.ಜಿ.ವಿ.ಆನಂದಮೂರ್ತಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷೆ ಬಾ.ಹ.ರಮಾಕುಮಾರಿ, ಲೇಖಕಿ ಅನ್ನಪೂರ್ಣ ವೆಂಕಟನಂಜಪ್ಪ, ಕಾರ್ಮಿಕ ಮುಖಂಡ ಸೈಯದ್ ಮುಜೀಬ್, ಹೋರಾಟಗಾರಿ ಕುಂದೂರು ತಿಮ್ಮಯ್ಯ ಮೊದಲಾದವರು ಮಾತನಾಡಿದರು.

ಚರಕ ಆಸ್ಪತ್ರೆಯ ಡಾ. ಬಸವರಾಜು ಪ್ರಾಸ್ತಾವಿಕ ಮಾತನಾಡಿ ಕಬಿ ಅವರನ್ನು ಕಳೆದುಕೊಂಡಿದ್ದೇವೆ. ಅವರ ಚಿಂತನೆಗಳನ್ನು ಮುಂದಿನ ಪೀಳಿಗೆಗೆ ಸಾಗಿಸಬೇಕಾಗಿದೆ ಎಂದರು.

ಉಪನ್ಯಾಸಕ ಕೊಟ್ಟಶಂಕರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಯುವ ಮುಖಂಡ ಡ್ಯಾಗೇರಹಳ್ಳಿ ವಿರೂಪಾಕ್ಷ ವಂದಿಸಿದರು.

Comment here