Publicstory. in
Tumkur: ಜಿಲ್ಲೆಯ ಹಳ್ಳಿ,ಹಳ್ಳಿಗಳನ್ನು ಬಿಡದ ಕೊರೊನಾ ಗುರುವಾರ ಒಂದೇ ದಿನ 44 ಜನರಿಗೆ ದೃಢಪಟ್ಟಿದೆ.
ಇದೇ ಪ್ರಮಾಣದಲ್ಲಿ ಏರುತ್ತಾ ಹೋದರೆ ಗತಿ ಏನು ಎಂದು ಜನರು ಭಯಭೀತರಾಗಿದ್ದಾರೆ.
ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಹೆಚ್ಚು ಜನರು ಸೋಂಕು ಪೀಡಿತರಾಗುತ್ತಿರುವುದು ಭಯಬೀತಿ ಹೆಚ್ಚಲು ಕಾರಣವಾಗಿದೆ.
ಗುಬ್ಬಿಯಲ್ಲಿ 13 ಮಂದಿ, ಕೊರಟಗೆರೆಯಲ್ಲಿ 17, ತಿಪಟೂರಿನಲ್ಲಿ 5 ಹಾಗೂ ತುರುವೇಕೆರೆ ಒಬ್ಬರು ಹಾಗೂ ಪಾವಗಡದಲ್ಲಿ ಓರ್ವ ವ್ಯಕ್ತಿಗೆ ಸೋಂಕು ಕಾಣಿಸಿಕೊಂಡಿದೆ.
ಗುಬ್ಬಿ ಬ್ಯಾಂಕ್ ಮ್ಯಾನೇಜರ್ ಒಬ್ಬರು ಸೋಂಕಿಗೆ ತುತ್ತಾಗಿದ್ದು, ಗ್ರಾಹಕರು ಭಯ ಬೀಳುವಂತಾಗಿದೆ.
Comment here