ತುಮಕೂರು ಲೈವ್

ಕೊರೊನಾ: ಖರೀದಿಯಲ್ಲಿ ಅವ್ಯವಹಾರ ಆರೋಪ ಬೆನ್ನಲ್ಲೇ ತುಮಕೂರು DHO ಎತ್ತಂಗಡಿ

Publicstory. in


ತುಮಕೂರು: ಕೊರೊನಾ ಸೋಂಕಿತರನ್ನು ಪರೀಕ್ಷಿಸಬೇಕಾದರೆ ವೈದ್ಯರು ಬಳಸುವ ಪಿಪಿಇ ಸಾಮಾಗ್ರಿಗಳ ಖರೀದಿಯಲ್ಲಿ ಅವ್ಯವಹಾರ ನಡೆಸಿದ ಆರೋಪ ಕೇಳಿ ಬಂದಿದ್ದ ತುಮಕೂರು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಚಂದ್ರಿಕಾ ಅವರನ್ನು ಸರ್ಕಾರ ಏಕಾಏಕಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಖರೀದಿಯಲ್ಲಿ ಅವ್ಯವಹಾರ ಎಸಗಲಾಗಿದೆ ಎಂದು ಬಿಜೆಪಿ ಹಿರಿಯ ಮುಖಂಡ ದಿಲೀಪ್ ಕುಮಾರ್ ದಾಖಲೆಗಳನ್ನು ಬಿಡುಗಡೆ ಮಾಡಿದ್ದರು.

ಆದರೆ, ವರ್ಗಾವಣೆಗೆ ಸರ್ಕಾರ ಯಾವುದೇ ಕಾರಣ ನೀಡಿಲ್ಲ. ಬೇರೆ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ಈ ಸಾಮಗ್ರಿಗಳನ್ನು ಆಯಾ ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕಂಡುಕೊಳ್ಳಬೇಕಿತ್ತು. ಆದರೆ ಡಿಎಚ್ಒ ಅವರು ಅಧಿಕಾರಿಗಳನ್ನು ಕರೆಸಿ ಏಕಾಏಕಿ ಕಚೇರಿಗೆ ಕರೆಸಿಕೊಂಡು ಜಿಲ್ಲೆಯ ಎಲ್ಲ 145 ಪಿಎಸ್ ಸಿಗಳಿಗೆ ಖರೀದಿಸಲು ಒತ್ತಾಯಿಸಿದ್ದರು. ಅಲ್ಲದೇ ಪಾರ್ಮ್ ಗಳಿಗೆ ಸಹಿ ಹಾಕಿದ್ದರು. ಒಂದೇ ಏಜೆನ್ಸಿಗೆ ಆರ್ಡರ್ ಕೊಟ್ಟಿದ್ದಾರೆ ಎಂದು ಆರೋಪಿಸಲಾಗಿತ್ತು.

ಚಂದ್ರಿಕಾ ಅವರನ್ನು ಹೊಸದುರ್ಗ ತಾಲ್ಲೂಕು ಆಸ್ಪತ್ರೆಯ ನೇತ್ರ ತಜ್ಞರಾಗಿ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಚಂದ್ರಿಕಾ ಜಾಗಕ್ಕೆ ತುಮಕೂರು ಜಿಲ್ಲೆಯ ಜಿಲ್ಲಾಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ ನಾಗೇಂದ್ರಪ್ಪ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಏನಿದು ಹಗರಣ


Comment here