ಹೆಲ್ತ್

ಕೊರೊನಾ ಬಂದ್ರೆ ಹೇಳ್ಬೇಕಾ, ಬೇಡ್ವ?

Publicstory. in


Tumkuru:, ಕೊರೊನಾ ಪಾಸಿಟಿವ್ ಬಂದವರು ಅದನ್ನು ಹೇಳ್ಬೇಕಾ ಬೇಡ್ವ…

ಆರೋಗ್ಯ ಸಿಬ್ಬಂದಿ, ಕಾರ್ಯಕರ್ತರಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯೋಜಿಸಿದ್ದ ಕೊರೊನಾ ಮನೋ ಪ್ರವೃತ್ತಿ ವೆಬ್ ನಾರ್ ನಲ್ಲಿ ಹಿರಿಯ ತಜ್ಞ ವೈದ್ಯ ಡಾ. ರಜನಿ ಹೇಳಿದ್ದು ಹೀಗೆ.

ಕೊರೊನಾ ಬಂದವರು ಏಕೆ ಹೆದರುತ್ತೀರಿ. ಎದೆತಟ್ಟಿ ದೈರ್ಯವಾಗಿ ಹೇಳಿ ನನಗೆ ಕೊರೊನಾ ಬಂದಿದೆ, ದೈರ್ಯವಾಗಿ ಹೇಳಿ ನಾನು ಕೊರೊನಾ ಟೆಸ್ಟ್ ಮಾಡಿಸಿಕೊಂಡಿದ್ದೇನೆ. ದೈರ್ಯವಾಗಿ ಹೇಳಿ ನಮ್ಮನೆಯಲ್ಲೇ ಕೊರೊನಾ ರೋಗಿಯನ್ನು ಆರೈಕೆ ಮಾಡುತ್ತಿದ್ದೇವೆ ಎಂದು ಹೇಳಿದರು.

ರಾಜಕಾರಣಿಗಳು, ಸಿನಿಮಾ ನಟರು ಕೊರೊನಾ ಬಂದರೆ ಅವರ ಟ್ವಿಟರ್ ಗಳಲ್ಲಿ ಹಾಕಿಕೊಳ್ತಾರೆ, ಫೇಸ್ ಬುಕ್ ನಲ್ಲಿ ಹಾಕ್ತಾರೆ. ಕೊರೊನಾ ಯಾರಿಗೂ ತಾರತಮ್ಯ ಮಾಡುವುದಿಲ್ಲ, ಎಲ್ಲರಿಗೂ ಬರುತ್ತದೆ, ಎಲ್ಲರಿಗು ಹೋಗುತ್ತದೆ. ಹೀಗಾಗಿ ಯಾರು ಹೆದರಬಾರದು. ಇದು ಒಂದು ರೋಗ ಅಷ್ಟೇ ಎಂದು ತಿಳಿಸಿದರು.

ಆರಂಭಿಕ ಹಂತದಲ್ಲೇ ಕೊರೊನಾ ಇರುವುದು ಪತ್ತೆಯಾದರೆ ಚಿಕಿತ್ಸೆ ನೀಡುವುದು ಸುಲಭ. ಆರೇಳು ದಿನಗಳಲ್ಲಿ ಬಹುತೇಕರು ಗುಣವಾಗುತ್ತಾರೆ. ಅದರೆ ನನಗೆ ಏನು ಅಗಿಲ್ಲ ಎಂದು ದಿನದೂಡುವುದರಿಂದ ಅಪಾಯವೇ ಹೆಚ್ಚು ಎಂದರು.

ಮಾಸ್ಕ್ ಅ‌ನ್ನು ಫ್ಯಾಷನ್ ತರಾ ಬಳಸುವುದರಿಂದ, ಟೆಸ್ಟ್ ಮಾಡಿಕೊಳ್ಳದವರೆ ರೋಗ ಹರಡಲು ಕಾರಣರು. ಮಾಸ್ಕ್ ಅನ್ನು ಕೊರಳಿಗೆ ನೇತು ಹಾಕಿಕೊಳ್ಳಲು ಅದೇನು ನಕ್ಲೇಸ್ ಅಲ್ಲ ಎಂದರು.

ಸರಿಯಾದ ರೀತಿಯಲ್ಲಿ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ದೈಹಿಕ ಅಂತರ ಕಾಪಾಡಿಕೊಂಡರೇ ಕೊರೊನಾ ಒದ್ದೋಡಿಸಬಹುದು ಎಂದರು.

ದೈಹಿಕ ಅಂತರ ಎಂಬುದು ಸಾಮಾಜಿಕ ಅಂತರ ಎಂಬ ತಪ್ಪು ಕಲ್ಪನೆಯಲ್ಲಿ ಬಿತ್ತರವಾಯಿತು. ಸಾಮಾಜಿಕ ಅಂತರವಲ್ಲ ದೈಹಿಕ ಅಂತರವನ್ನು ಕಾಪಾಡಿ ಎಂದರು.

ವೈಯಕ್ತಿಕ ಸ್ವಚ್ಛತೆ, ಬಿಸಿಬಿಸಿ ಊಟ, ಒಳ್ಳೆಯ ನಿದ್ದೆ, ವ್ಯಾಯಾಮ, ಕೈ ತೊಳೆಯುವುದು, ಜನರೊಂದಿಗೆ ದೈಹಿಕ ಅಂತರ, ಬಿಸಿ ನೀರು ಕುಡಿಯುವುದು ಎಲ್ಲರ ಮೂಲಮಂತ್ರವಾಗಬೇಕು ಎಂದರು.

ಮಾಧ್ಯಮಗಳಲ್ಲಿ ಬರುವುದೆಲ್ಲವನ್ನು ನಂಬಬೇಡಿ. ಕೈಗೆ ಸಿಕ್ಕಿದೆಲ್ಲವನ್ನು ಕುಡಿದು, ತಿನ್ನಬೇಡಿ. ರೋಗದ ನಿರ್ವಣೆಯ ಬಗ್ಗೆ ಮಾಹಿತಿ ಬೇಕಿದ್ದರೆ ವಿಶ್ವ ಆರೋಗ್ಯ ಸಂಸ್ಥೆ, ರಾಜ್ಯ, ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ವೆಬ್ ಸೈಟ್ ಗಳನ್ನು ನೋಡಿ ತಿಳಿದುಕೊಳ್ಳಿ. ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಹಂಚಿಕೊಳ್ಳಿ ಎಂದು ಸಲಹೆ ನೀಡಿದರು.

ಕೋವಿಡ್ ಬಂದ ವಯಸ್ಸಾದವರು ಸಹ ಆರೇಳು ದಿನಗಳಲ್ಲಿ ಹುಷಾರಾಗುತ್ತಿದ್ದಾರೆ. ಬಿಪಿ, ಶುಗರ್ ಇದ್ದವರು ವಾಸಿಯಾಗುತ್ತಿದ್ದಾರೆ. ಹಾಗಂತ ರೋಗಕ್ಕೆ ಸೆಡ್ಡು ಹೊಡೆದು ಹೇಗೆ ಬೇಕೆಂದು ನಡೆದುಕೊಳ್ಳಬೇಡಿ. ಮಾಸ್ಕ್ ಹಾಕದೇ ಹೊರಹೋಗಬೇಡಿ. ಮಾಸ್ಕ್ ಕುತ್ತಿಗೆಗೆ ಹಾಕಿಕೊಳ್ಳಬೇಡಿ, ಮೂಗು, ಬಾಯಿ ಮುಚ್ಚಿಕೊಳ್ಳಲು ಹಾಕಿಕೊಳ್ಳಿ ಎಂದು ಸಲಹೆ ನೀಡಿದರು.

Comment here