ತುಮಕೂರು ಲೈವ್

ಗ್ರಾಮಾಂತರ ಕ್ಷೇತ್ರದ ಬಡವರಿಗೆ ಉಚಿತ ಔಷದ: ಶಾಸಕ ಗೌರಿ ಶಂಕರ್

Tumkuru: ಹಳ್ಳಿಗಳಲ್ಲಿ ಯಾರಿಗಾದರೂ ಔಷಧಿ ಕೊಳ್ಳದೆ ಆಗದಿದ್ದಲ್ಲಿ ಅಂತಹವರು ಸ್ಥಳೀಯ ನಮ್ಮ ಜೆಡಿಎಸ್ ಪಕ್ಷದ ಮುಖಂಡರ ಬಳಿ ಡಾಕ್ಟರ್ ನೀಡಿರುವಂತಹ ಚೀಟಿಯನ್ನು ತೆಗೆದುಕೊಂಡು ಹೋಗಿ ನೀಡಿದರೆ ಅಂಥವರಿಗೆ ಉಚಿತವಾಗಿ ಔಷಧಿ ತರಿಸಿಕೊಡುವುದಾಗಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸಿ.ಗೌರಿಶಂಕರ್ ತಿಳಿಸಿದರು.

ಆಹಾರ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ಷೇತ್ರದ ಜನರು ಭಯ ಬೀಳುವುದು ಬೇಡ. ಔಷಧಿ ಕೊಡುವ ಕೆಲಸ ಮಾಡಲಾಗುವುದು ಎಂದರು.

ಗ್ರಾಮಾಂತರ ಕ್ಷೇತ್ರದ ಕುಟುಂಬಗಳಿಗೆ 10 ಕೆಜಿ ದಿನಸಿ ಪದಾರ್ಥಗಳ ಕಿಟ್ ಹಾಗೂ 5 ಕೆಜಿ ತರಕಾರಿ ಹಣ್ಣು ವಿತರಿಸಲಾಗಿದೆ. ಯಾರು ಕೂಡ ಉಪವಾಸದಿಂದ ಇರಬಾರದೆಂದು ನಿರ್ಧರಿಸಿ ಈ ಕೆಲಸ ಮಾಡಲಾಗುತ್ತಿದೆ ಎಂದರು.

Comment here