Publicstory. in
ಚಿಕ್ಕನಾಯಕನಹಳ್ಳಿ : ತಾಲ್ಲೂಕಿನಲ್ಲಿ ಕೊರೋನಾ ಸೋಂಕು ತಗುಲಿದ್ದು, ಕೋರೋನ ರೋಗಿ ವಾಸಿಸುತ್ತಿರುವ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ.
ಪಟ್ಟಣದ ಹೊಸಬೀದಿ ಬಳಿ ಇರುವ ಹಿರಿಯಣ್ಣನಹಟ್ಟಿ ಪ್ರದೇಶದ ವಾಸವಿದ್ದ ಮಹಿಳೆಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಆದರೆ ಇನ್ನೂ, ಅಧಿಕೃತವಾಗಿ ಇನ್ನೂ ಸರ್ಕಾರ ಪ್ರಕಟಿಸಿಲ್ಲ. ಪತಿ ಗಾರೆ ಕೆಲಸ ಮಾಡುತ್ತಿದ್ದು, ಮಗಳು ಗಾರ್ಮೆಂಟ್ ಉದ್ಯೋಗಿ.
ಈಗ ಇವರನ್ನೆಲ್ಲ ಕ್ವಾರಂಟೈನ್ ಮಾಡಲಾಗಿದೆ.
ಸೋಂಕಿತ ಮಹಿಳೆಯನ್ನು ತುಮಕೂರಿನ ಕೋವಿಡ್ ಆಸ್ಪತ್ರೆಗೆ ಕರೆದೊಯ್ಯಲಾಗುವುದು, ಕುಟುಂಬದವರನ್ನು ಚಿ.ನಾ.ಹಳ್ಳಿ ಆಸ್ಪತ್ರೆಯಲ್ಲಿ ಪರೀಕ್ಷಿಸಲಾಗುವುದು ಎಂದು ಆಸ್ಪತ್ರೆಯ ಸಿಬ್ಬಂದಿ ತಿಳಿಸಿದರು.
ಸೋಂಕಿತೆ ವಾಸಿಸುತ್ತಿರುವ ಪ್ರದೇಶವದಲ್ಲಿ ಯಾರೂ ಓಡಾಡದಂತೆ ಪುರಸಭೆ, ಪೋಲಿಸ್ ಇಲಾಖೆ ಸೀಲ್ ಡೌನ್ ಮಾಡಲಾಗಿದೆ.
Comment here