ತುಮಕೂರ್ ಲೈವ್

`ತಂಗಡಿ’ ಮದುಮೇಹಕ್ಕೆ ರಾಮಬಾಣ

ತುಮಕೂರು:

ಗ್ರಾಮೀಣ ಭಾಗದಲ್ಲಿ ಅತಿ ಹೆಚ್ಚು ಔಷಧೀಯ ಗುಣವನ್ನು ಹೊಂದಿರುವ ಸಸ್ಯಗಳು, ಗಿಡ, ಮರ ಬಳ್ಳಿಗಳು ಕಾಣ ಸಿಗುತ್ತವೆ. ಆದರೆ ಅವುಗಳು ಪಕ್ಕದಲ್ಲಿದ್ದರೂ ಅವುಗಳ ಮಹತ್ವ ಎಷ್ಟೋ ಜನರಿಗೆ ತಿಳಿದೇ ಇರುವುದಿಲ್ಲ.

ಇತ್ತೀಚಿನ ದಿನಗಳಲ್ಲಿ ಸಕ್ಕರೆ ಕಾಯಿಲೆ(ಮಧುಮೇಹ) ಕಾಯಿಲೆ ಎಂಬುದು ಸಹಜವಾಗಿ ಜನರಲ್ಲಿ ಕಾಣಿಸಿಕೊಳ್ಳುತ್ತಿರುವ ಕಾಯಿಲೆಯಾಗಿದೆ. ಒಮ್ಮೆ ಸಕ್ಕರೆ ಕಾಯಿಲೆ ದೇಹವನ್ನು ಆಕ್ರಮಿಸಿದರೆ ನಮ್ಮ ಜೀವನವೇ ಮುಗಿದು ಹೋಯಿತು ಎಂಬಂತೆ ಹಲವರು ತಮಗೆ ತಾವು ಅಂದುಕೊಂಡು ಅದೇ ಆಲೋಚನೆಯಲ್ಲೆ ಇನ್ನಷ್ಟು ಕಾಯಿಲೆಗಳನ್ನು ತಂದು ಕೊಳ್ಳುತ್ತಿರುವುದು ಕಾಣುತ್ತಿದ್ದೇವೆ. ನಮ್ಮ ದೈನಂದಿನ ಚಟುವಟಿಕೆ ಹಾಗೂ ಆಹಾರ ಕ್ರಮದಿಂದ ಉಂಟಾಗುವ ಕಾಯಿಲೆಗೆ ಎದರುವ ಅವಶ್ಯಕತೆಯಿಲ್ಲ. ಕೆಲವು ದಿನಚರಿಗಳನ್ನು ರೂಢಿಸಿಕೊಳ್ಳುವ ಮೂಲಕ ಅದನ್ನು ತಡೆಗಟ್ಟಬಹುದು ಎಂದು ಅನೇಕ ತಜ್ಞರು ಅಭಿಪ್ರಾಯ ಪಡುತ್ತಾರೆ. ನವೆಂಬರ್ 14 ವಿಶ್ವ ಮಧುಮೇಹ ದಿನ ಎಂದು ಗುರುತಿಸಲಾಗಿದೆ. ಇಂತಹ ಸಂದರ್ಭಕ್ಕೆ ಅನುಗುಣವಾಗಿ ಮಧುಮೇಹ ಕಾಯಿಲೆಗೆ ಮನೆ ಮದ್ದನ್ನು ಖರ್ಚಿಲ್ಲದೆ ಮಾಡಬಹುದಾಗಿದೆ.

ಗ್ರಾಮೀಣ ಭಾಗದಲ್ಲಿ ಅದರಲ್ಲೂ ಬೆಟ್ಟಗುಡ್ಡ ಪ್ರದೇಶಗಳಲ್ಲಿ ಎತ್ತೇಚವಾಗಿ ಈ ಗಿಡ ಬೆಳೆದುಕೊಂಡಿರುತ್ತದೆ. ಇದನ್ನು ಗ್ರಾಮ್ಯ ಭಾಷೆಯಲ್ಲಿ ತಂಗಡಿ ಗಿಡ ಎನ್ನುವರು. ಅನೇಕ ಔಷಧೀಯ ಗುಣ ಹೊಂದಿರುವ ಈ ಗಿಡದ ಪ್ರತಿಯೊಂದು ಭಾಗವೂ ಉಪಯುಕ್ತವಾದುದು. ಜೀವಕ್ಕೆ ತಂಪು ಜುಟ್ಟಿಗೆ ಭದ್ರ ಎಂದು ಗ್ರಾಮೀಣ ಭಾಗದ ಜನರು ಇದನ್ನು ವ್ಯಾಖ್ಯಾನಿಸುವುದು ಹೌದು. ಈ ಗಿಡದ ಹೂವುಗಳಿಂದ ಮದು ಮೇಹ ಕಾಯಿಲೆ ನಿಯಂತ್ರಿಸಬಹುದಾಗಿದೆ. ಮಧು ಮೇಹ ಕಾಯಿಲೆಯಿಂದ ಬಳಲುತ್ತಿರುವವರು ಇದನ್ನು ಉಪಯೋಗಿಸಿ ಉತ್ತಮ ಫಲಿತಾಂಶವನ್ನು ಕಂಡುಕೊಂಡಿದ್ದಾರೆ.

ಇದನ್ನು ಹೇಗೆ ಉಪಯೋಗಿಸುವುದೆಂದರೆ ಹಳದಿ ಬಣ್ಣದ ಹೂವುಗಳಲ್ಲಿನ ದಳಗಳನ್ನು ಬಿಡಿಸಿ ಅವುಗಳನ್ನು ನೀರಿನಲ್ಲಿ ತೊಳೆದು ಬೆಳಿಗ್ಗೆ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ 5 ಅಥವಾ 6 ದಳಗಳನ್ನು ಪ್ರತಿ ದಿನ ತಿನ್ನ ಬೇಕು. ಅಲ್ಲದೇ ಚಿಕ್ಕ ಮಕ್ಕಳಿಗೆ ಕೆಮ್ಮು, ನೆಗಡಿಯಾದರೆ ಹಾಲಿನಲ್ಲಿ ಈ ಹೂವಿನ ದಳವನ್ನು ಹಾಕಿ ಕುಡಿಸಿದರೆ ಮಕ್ಕಳ ಬಹಳ ದಿನಗಳ ಕೆಮ್ಮು ಹಾಗೂ ನೆಗಡಿ ಗುಣಮುಖವಾಗುತ್ತದೆ.  ಹಾಗೇ ಇದರ ಗಿಡದ ಚಕ್ಕೆಯನ್ನು ಅಡಕೆಯ ಬದಲಾಗಿ ಎಲೆಯೊಂದಿಗೆ ತಾಂಬೂಲದ ಜೊತೆಯಲ್ಲಿ ಜಗಿಯಲು ಈ ಹಿಂದೆ ಬಳಸುತ್ತಿದ್ದರು. ಈಗಲು ಕೆಲವರು ಅಡಿಕೆ ಬೇಯಿಸುವ ಸಂದರ್ಭದಲ್ಲಿ ತಂಗಡಿ ಚೆಕ್ಕೆ ಹಾಕಿ ಬೇಯಿಸುವುದು ಉಂಟು. ಹಾಗೂ ದೇಹದಲ್ಲಿ ಉಷ್ಣಾಂಶ ಹೆಚ್ಚಾಗಿ ಕೈ, ಕಾಲು, ಕಣ್ಣು ಉರಿಯಲು ಪ್ರಾರಂಭವಾದಾಗ ಬೇಯಿಸಿದ ಹರಳೆಣ್ಣೆ ತಲಗೆ ಹಚ್ಚಿ ತಂಗಡಿ ಸೊಪ್ಪನ್ನು ತಲಗೆ ಕಟ್ಟಿಕೊಂಡರೆ ಸಾಕು ಇಡೀ ದೇಹದಲ್ಲಿನ ಉಷ್ಣಾಂಶ ಕಡಿಮೆಯಾಗಿ ಸಮತೋಲನವಾಗುತ್ತದೆ. ಇದನ್ನು ಗ್ರಾಮೀಣ ಭಾಗದಲ್ಲಿ ಇಂದಿಗೂ ಕೆಲವರು ರೂಡಿಸಿಕೊಂಡು ಬಂದಿದ್ದಾರೆ. ಆದರೆ ಅನೇಕರಿಗೆ ತಂಗಡಿ ಗಿಡ, ಹೂವು, ಸೊಪ್ಪು ಹಾಗೂ ಚೆಕ್ಕೆಯ ಮಹತ್ವ ತಿಳಿದಿಲ್ಲ. ಇದನ್ನು ಯಾರು ಬೇಕಾದರು ಬಳಸಬಹುದಾಗಿದೆ.

Comment here