ತುಮಕೂರು ಲೈವ್

ತಿಪಟೂರು ACಗೆ ₹ 3 ದಂಡ ಹಾಕಿದ ಕುರಿಗಾಹಿ!

Publicstory.in


ತಿಪಟೂರು: ಆಗಿನ ತಿಪಟೂರು ಉಪ ವಿಭಾಗಾಧಿಕಾರಿ ಅನುಮತಿ ಇಲ್ಲದೇ ಇಲ್ಲಿನ ಈರ್ಲಿಗೆರೆಗೆ ಬಂದೇ ಬಿಟ್ಟರು. ನಮಗೆಲ್ಲ ಕೋಪ. ಅಲ್ಲೇ ಅಧಿಕಾರಿಯನ್ನು ತಡೆದವು. ಮರದ ಕೆಳಗೆ ಕುರಿ ಮೇಯಿಸುತ್ತಿದ್ದ ಅಜ್ಜನಿಗೆ ಈ ಅಧಿಕಾರಿಗೆ ಏನ್ ಶಿಕ್ಷೆ ನೀಡೋಣ ಎಂದಿದ್ದೆ ತಡ ಅವರು ₹3 ಜುಲ್ಮಾನೆ ವಿಧಿಸಿದರು.

– ಇದು ತಿಪಟೂರಿನಲ್ಲಿ ನಡೆದ ಈಚೆಗೆ ಅಗಲಿದ ಹಿರಿಯ ರೈತ ಮುಖಂಡ‌ ಬೆನ್ನನಾಯಕನಹಳ್ಳಿ ದೇವರಾಜಣ್ಣ ನೆನಪಿನ ಕಾರ್ಯಕ್ರಮದಲ್ಲಿ ರೈತ ಸಂಘಟನೆ ಹೋರಾಟದ ಝಲಕ್ ಅನ್ನು ವಿವರಿಸಿದ ರೀತಿ.

ತಿಪಟೂರು ತಾಲ್ಲೂಕಿನಲ್ಲಿ ಆರಂಭದಲ್ಲಿ ಕಟ್ಟಿದ ರೈತ ಸಂಘಟನೆ,‌ ಹೋರಾಟದ ಹಲವು ನೆನಪುಗಳನ್ನು ಹಿರಿಯ ರೈತ ಮುಖಂಡ ಜನಾರ್ಧನ್ ನೆನಪು ಮಾಡಿಕೊಂಡರು.

ಇದನ್ನು ಓದಿ:ಕನಸುಗಳನ್ನು ಬಿಟ್ಟು ದೂರ ಸರಿದ ನಾಯಕ

ರೈತರ ಸಾಲ ವಸೂಲಿಗೆ ಗ್ರಾಮಕ್ಕೆ ಬಂದ ಅಧಿಕಾರಿಗಳನ್ನು ತಡೆದು ವಾಪಸ್ ಕಳುಸುತ್ತಿದ್ದವು. ರೈತ ಸಂಘಟನೆಯ ಗಮನಕ್ಕೆ ಬಾರದೇ ಈರ್ಲೇಗೆರೆಗೆ ಬಂದು ಉಪ ವಿಭಾಗಾಧಿಕಾರಿಗೆ ಕುರಿಗಾಹಿಯಿಂದ ದಂಡ ಹಾಕಿಸಿದ ಬಗೆಯನ್ನು ಸ್ವಾರಸ್ಯಕರವಾಗಿ ಹೇಳಿದರು.

ರೈತರು ಪ್ರತಿಭಟನೆ ಮಾಡಿ ಜೈಲಿಗೆ ಹೋಗಲು ಸಹ ಹಿಂಜರಿಯುತ್ತಿರಲಿಲ್ಲ. ಜೈಲಿನಿಂದ ರೈತ ಮುಖಂಡರು ಬಿಡುಗಡೆಯಾದ ದಿನ ಸಾವಿರಾರು ರೈತರು ಸೇರಿಗೆ ಮೆರವಣಿಗೆಯಲ್ಲಿ ಊರಿಗೆ ಕರೆದುಕೊಂಡು ಹೋಗಿ ಬಿಡುತ್ತಿದ್ದರು ಎಂದು ನೆನಪು ಮಾಡಿಕೊಂಡರು.

ರೈತ ಸಂಘಟನೆಯ ಹೋರಾಟ ರೈತರನ್ನು ಸ್ವಾತಂತ್ರಗೊಳಿಸು ರೈತ ಸ್ವಾತಂತ್ರ್ಯ ದ ಸಂಗ್ರಾಮದ ಅನೇಕ ಕತೆಗಳನ್ನು ವಿವರಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ಬೆನ್ನನಾಯಕನಹಳ್ಳಿ ದೇವರಾಜಣ್ಣ ಅವರ ಅನೇಕ ಹೋರಾಟದ ಕಥನಗಳನ್ನು ವಿವರಿಸಿದರು.

ಜಿಲ್ಲೆಯಲ್ಲಿ ಮಾತ್ರವಲ್ಲದೇ ಹೊರ ದೇಶಗಳಲ್ಲೂ ರೈತ ಹೋರಾಟದಲ್ಲಿ ದೇವರಾಜಣ್ಣ ಅವರು ಭಾಗವಹಿಸಿದ ಬಗ್ಗೆ, ಅವರಲ್ಲಿದ್ದ ರೈತರ ಕುರಿತ ಕಾಳಜಿಯ ಬಗ್ಗೆ ಹೇಳಿದರು.

ಪ್ರಾಂತ ರೈತ ಸಂಘದ ಹಿರಿಯ ಮುಖಂಡ ಬಿ.ಉಮೇಶ್ ಮಾತನಾಡಿ, ತಿಪಟೂರು ಕೊಬ್ಬರಿ ಚಳವಳಿಯ ಹಿಂದೆ ದೇವರಾಜಣ್ಣ ಅವರ ಹೋರಾಟಗಳನ್ನು ಸ್ಮರಿಸಿದರು.

ಪರಿಸರವಾದಿ ಸಿ.ಯತಿರಾಜು, ಜನಸ್ಪಂದನಾ ಟ್ರಸ್ಟ್ ನ ಸಿ.ಬಿ.ಶಶಿಧರ್ ಮಾತನಾಡಿದರು.

Comment here