ಜನಮನ

ತಿಳಿಹೇಳು ನಿನ್ನ ತಮ್ಮರಿಗೆ ಬಾಂಬ್ ಗಳು ಸಾಕು…

ಕೆ.ಎಸ್.ಲಕ್ಷ್ಮೀ


ಹಾಹಾಕಾರ ಎಲ್ಲಿ
ದೊಡ್ಡಣ್ಣನ ಅಮೇರಿಕಾದಲ್ಲಿ
ಯಾಕಾಗಿ ?
ಯಾಕಾಗಿ ?

ವೆಂಟಿಲೇಟರ್ ಗಳಿಗಾಗಿ
ಡಾಕ್ಟರ್ ಗಳಿಗಾಗಿ
ಔಷದಿಗಳಿಗಾಗಿ

ವಿಶ್ವವನ್ನೆಲ್ಲಾ ನಾಶಮಾಡುವ ಅಣುಬಾಂಬುಗಳು ಇವೆ
ದೊಡ್ಡಣ್ಣನಲ್ಲಿ.
ಯಾಕಾಗಿ ?
ಯಾಕಾಗಿ ?
ಜೀವ ಉಳಿಸುವ ಜೀವರಕ್ಷಗಳೇ ಇಲ್ಲದ ನಾಡಲ್ಲಿ

ನಿನ್ನ ಜನರನ್ನುಳಿಸಲೇ ನಿನ್ನ ಬಳಿ ವೈದ್ಯರಿಲ್ಲವಲ್ಲಾ
ಎಂಥಾ ಅಮನಾವೀಯ
ಹಾದಿಯಲ್ಲಿ ದೇಶಕಟ್ಟಿದೆ ನೀನು
ನಿನ್ನ ನಾಡಿಗೆ ನೀನೆ ವಿನಾಶಕಾರಿಯಾದೆಯಲ್ಲಾ
ವಿನಾಶಕಾರಿಯಾದೆಯಲ್ಲಾ.

ಅಗೋ ನೋಡು ಕ್ಯೂಬಾದೆಡೆ
ಜಗದ ನೋವಿಗೆ ಮಿಡಿವ ನಾಡಿನಿಂದ ಇಂದು ಇಟಲಿಯಡೆಗೆ
ವೈದ್ಯರ ನಡಿಗೆ

ಏನಿದ್ದರೇನು ದೊಡ್ಡಣ್ಣ
ಜಗವ ಬೆಸೆದಿರುವ
ಪ್ರೀತಿ, ಮಾನವೀಯ ಅಂತಃಕರಣದ ಮುಂದೆ
ನೀನು ದೊಡ್ಡಣ್ಣನು ಆಗಲಾರೆ
ಚಿಕ್ಕಣ್ಣನೂ ಆಗಲಾರೆ
ಬಂಧುವಂತೂ
ಆಗಲಾರೆ,ಆಗಲಾರೆ

ತಿಳಿಹೇಳು ನಿನ್ನ ತಮ್ಮರಿಗೆ
ಬಾಂಬ್ ಗಳು ಸಾಕು
ಬದುಕನ್ನುಳಿಸುವ ಜೀವರಕ್ಷಗಳು ಆದ್ಯತೆಯಾಗಬೇಕೆಂದು
ಹಸಿವಿನ ಸಂಕಟಗಳು
ನಿವಾರಣೆಯಾಗಲೇಬೇಕೆಂದು.

ಪ್ರೀತಿಯಿಂದ ನಾಡ ಕಟ್ಟೋಣವೆಂದು
ಬೆವರಿನ ಪಾಲ ಜನತೆಗೆ ಹಂಚೋಣವೆಂದು.


ಕವಯತ್ರಿ ಮಹಿಳಾ ಹೋರಾಟಗಾರರು ಹಾಗೂ ಬೆಂಗಳೂರು ವಿ.ವಿ. ಮಾಜಿ ಸೆನೆಟ್ ಸದಸ್ಯೆ

Comment here