ತುಮಕೂರು ಲೈವ್

ತುಮಕೂರಿನಲ್ಲೊಂದು ಕುದುರೆ ಸವಾರಿ ಮೋಡಿ!

Publicstory. in


ಮಹೇಂದ್ರ ಕೃಷ್ಣಮೂರ್ತಿ


ತುಮಕೂರು: ಮಂಗಳೂರಿನ ಕಡಲ ತೀರಕ್ಕೆ ಹೋದರೆ ಅಲ್ಲಿ ಕುದುರೆ ಸವಾರಿ ಮಾಮೂಲಿ, ಸಮುದ್ರ ತಡದಲ್ಲಿ ಕುದುರೆ, ಒಂಟೆಗಳನ್ನು ಏರಿ ಒಂದು ಸುತ್ತು ಬಂದರೆ ಅದರ ಸುಖ, ಮಜವೇ ಬೇರೆ.

ತುಮಕೂರಿನಲ್ಲೊಂದು ಕುದುರೆ ಸವಾರಿಗೆ ಸ್ಥಳಗಳೇ ಇಲ್ಲ. ಮೈಸೂರಿನ ಕುಕ್ಕರಹಳ್ಳಿ ಕೆರೆ ನೋಡಿ ಬಂದವರೂ ನಮ್ಮೂರಲ್ಲೂ ಇಂಥದೊಂದು ಕೆರೆ ಇದ್ದರೆ ಎಂದು ಮನಸ್ಸಲ್ಲೇ ಮಂಡಿಗೆ ಮುರಿಯುತ್ತಾರೆ.

ಕುದುರೆ ನೋಡಿದರೂ ನಾವೂ ಒಮ್ಮೆ ಕುದುರೆ ಏರಿ ಬಂದರೆ ಎಂದು ಮನಸ್ಸಲ್ಲೇ ಅಂದುಕೊಳ್ಳುತ್ತಾರೆ. ತುಮಕೂರಿನ ಮುಸ್ಲಿಂ ಹುಡುಗರು ಅಂಥದೊಂದು ಅವಕಾಶವನ್ನು ತುಮಕೂರಿನ ಜನರಿಗೆ ಈ ಸಲ ಒದಗಿಸಿಕೊಟ್ಟಿದ್ದಾರೆ.

ಈ ಒಂದು ತಿಂಗಳ ಕುದುರೆ ಏರಿ ಸವಾರಿ ಹೋಗುವ ಕನಸನ್ನು ನನಸು ಮಾಡಿಕೊಳ್ಳಬೇಕೆಂಬುವವರು ಸೀದಾ ಸಿದ್ದಗಂಗೆಯ ಜಾತ್ರೆಗೇನೆ ಬರಬೇಕು. ಈ ಸಲ ಜಾತ್ರೆಯಲ್ಲಿ ಕುದುರೆ ಸವಾರಿಯ ಮೋಜು, ಖುಷಿಗೆ ಅವಕಾಶ ಮಾಡಿಕೊಡಲಾಗಿದೆ.

ಖಾದರ್ ಹೇಳುವ ಪ್ರಕಾರ, ಒಂದು ಸುತ್ತಿಗೆ 40 ರೂಪಾಯಿ., ದೊಡ್ಡವರಿಗಿಂತ ಮಕ್ಕಳೇ ಕುದುರೆ ಏರುವುದು ಹೆಚ್ಚು, ತಂದೆ ತಾಯಿಗಳು ಅವರಿಗಲ್ಲದಿದ್ದರೂ ಮಕ್ಕಳಿಗೆ ಖುಷಿ ತರಲೆಂದು ಕುದುರೆ ಸವಾರಿ ಮಾಡಿಸುತ್ತಾರೆ.

ಅಲಂಕಾರಿಕ ಕುದುರಿಗಳನ್ನು ನೋಡಿದರೆ ಒಮ್ಮೆ ಏರಿಯೇ ಬಿಡಬೇಕು ಎಂಬ ಮನಸ್ಸು ಎಲ್ಲರಿಗೂ ಒಂದೇ ಬರುತ್ತದೆ. ಅನಾದಿ ಕಾಲದಿಂದಲೂ ಸಾರಿಗೆ ವಾಹನವಾಗಿರುವ ಕುದುರೆ ಹಿಂದೆ ರಾಜ ಮಹಾರಾಜರು, ದಂಡನಾಯಕರ ಪ್ರೀತಿಗೆ ಪಾತ್ರವಾಗಿತ್ತು. ಈಗ ಕುದುರೆ ಸವಾರಿ ಬೆರಳಣಿಕೆಯ ಮಂದಿಗಷ್ಟೇ ಸೀಮಿತ. ಸುಮ್ಮನೇ ಒಮ್ಮೆ ಕುದುರೆ ಏರಿ ಬರೋಣ ಬನ್ನಿ ಸಿದ್ದಗಂಗೆಗೆ.

Comment here