ತುಮಕೂರು ಲೈವ್

ತುಮಕೂರು; ಕರೊನಾ ರೋಗಿ ಗುಣಮುಖ: ಯಾರಿಗೂ ಇಲ್ಲ ಸೋಂಕು

ತುಮಕೂರು : ಜಿಲ್ಲೆಯಲ್ಲಿ ಇಲ್ಲಿಯವರೆಗೆ ಕೋವಿಡ್ 19 ಎರಡು ಪ್ರಕರಣಗಳು ಕಂಡು ಬಂದಿದ್ದವು. ಅದು P 60 ಮತ್ತು P 84. P 60 ಪೇಷಂಟ್ 22 ಮಾರ್ಚ್ ಸಾವನ್ನಪ್ಪಿದ್ದರು. P 84 ಪ್ರಕರಣವನ್ನು ಹೆಚ್ಚಿನ ಚಿಕಿತ್ಸೆಗಾಗಿ ಇಂದಿರಾ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಸಂಪೂರ್ಣವಾಗಿ ಗುಣಮುಖರಾಗಿ ಇಂದು ಜಿಲ್ಲೆಗೆ ವಾಪಸಾಗಿದ್ದಾರೆ.

P 84 ಅವರನ್ನು ಮನೆಯಲ್ಲಿಯೇ ಪ್ರತ್ಯೇಕವಾಗಿ ಇಸೋಲೇಶನ್ ಮಾಡುವುದಕ್ಕೆ ತಿಳಿಸಲಾಗಿದೆ. ಶಿರಾ ನಗರಕ್ಕೆ ಭೇಟಿ ನೀಡಿ ಅವರ ಮನೆಯವರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ. ಮುಂದಿನ 14 ದಿನಗಳು ಮನೆಯಲ್ಲಿಯೇ ಕ್ವಾರೈಂಟೈನ್ ಆಗಿರಬೇಕು. ಅವರ ಸಂಬಂಧಿಕರದ್ದು ಕೂಡ ಎರಡು ಬಾರಿ ನೆಗೆಟಿವ್ ಬಂದಿರುವುದರಿಂದ ಮನೆಗೆ ಕಳುಹಿಸಲಾಗಿದೆ.

ಇದನ್ನು ಹೊರತುಪಡಿಸಿ ತುಮಕೂರು ಜಿಲ್ಲೆ ಅಥವಾ ಶಿರಾ ತಾಲೂಕಿನಲ್ಲಿ ಯಾವುದೇ ಪ್ರಕರಣ ಕಂಡುಬಂದಿಲ್ಲ, ಹೆಚ್ಚುವರಿಯಾಗಿ ತಬ್ಲಿಖಿ ಜಮಾತ್ ಗೆ ತೆರಳಿದ್ದ ಇತರೆ ವ್ಯಕ್ತಿಗಳ ಸ್ಯಾಂಪಲ್ ಗಳನ್ನು ನೆನ್ನೆ ಮತ್ತೆ ಕಳಿಸಲಾಗಿದೆ ಅದರ ರಿಪೋರ್ಟ್ ಬರುವುದು ಬಾಕಿಯಿದೆ, ಅದು ಬಂದ ನಂತರ ತಿಳಿಸಲಾಗುತ್ತದೆ.

ಮೇ 3ರವರೆಗೆ ಲಾಕ್ಡೌನ್ ಮುಂದುವರೆಯುತ್ತದೆ ಆದ್ದರಿಂದ ಸಾರ್ವಜನಿಕರು ಕಟ್ಟುನಿಟ್ಟಾಗಿ ಸರ್ಕಾರದ ಆದೇಶವನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ತಿಳಿಸಿದರು.

Comment here