ಜನಮನ

ತುಮಕೂರು ಗ್ರಾಮಾಂತರದಲ್ಲಿ ಸದ್ದಿಲ್ಲದೆ‌‌ ನಡೆದಿದೆ ನೆರವಿನ ಕೆಲಸ…

Publicstory.in


ತುಮಕೂರು: ಕರೊನಾ,‌ಲಾಕ್ ಡೌನ್ ಕಾರಣದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ನೆರವಾಗುವಲ್ಲಿ ಇಲ್ಲಿನ ಮಾಜಿ ಶಾಸಕ ಬಿ.ಸುರೇಶ ಗೌಡ ಕಾರಣದಿಂದಾಗಿ ತುಮಕೂರು ಗ್ರಾಮಾಂತರ ಕ್ಷೇತ್ರ ಮಾದರಿಯಾಗಿ ಗಮನ ಸೆಳೆಯುತ್ತಿದೆ.

ಮಾಜಿ ಶಾಸಕ, ಬಿಜೆಪಿ ಬಿ.ಸುರೇಶ್ ಗೌಡ ಹಲವು ಕಾರ್ಯಕ್ರಮಗಳ ಮೂಲಕ ಇಲ್ಲಿನ ಜನರಿಗೆ ನೆರವಿನ ಹಸ್ತ ಚಾಚುತ್ತಿದ್ದಾರೆ.‌ ನೆರವಷ್ಟೆ ಅಲ್ಲ ಕರೊನಾದಿಂದ ರಕ್ಷಣೆ ಪಡೆಯುವ ಕುರಿತೂ ಅಲ್ಲಲ್ಲಿ ಜನರಿಗೆ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ.

https://youtu.be/24fPgZn4gUk

ಲಾಕ್ ಡೌನ್ ಘೋಷಣೆಯಾದಾಗಿ‌ನಿಂದಲೂ ಕ್ಷೇತ್ರದ ಜನರೊಟ್ಟಿಗೆ ಸಂಪರ್ಕದಲ್ಲಿದ್ದೇನೆ. ಗ್ರಾ‌ಮಗಳಿಗೆ ಭೇಟಿ ನೀಡಿ ಜನರ ಕಷ್ಟಗಳನ್ನು ಆಲಿಸುತ್ತಿದ್ದೇ‌ನೆ ಎಂದು ಮಾಜಿ ಶಾಸಕರಾದ ಸುರೇಶ ಗೌಡ ಪಬ್ಲಿಕ್ ಸ್ಟೋರಿ.ಇನ್ ಗೆ ತಿಳಿಸಿದರು.

ಕ್ಷೇತ್ರದ ಎಲ್ಲ ಜನರಿಗೂ ಮಾಸ್ಕ್ ಹಂಚುವ ಕೆಲಸವನ್ನು ಸದ್ದಿಲ್ಲದೇ ಮಾಡತೊಡಗಿದ್ದಾರೆ. ಒಟ್ಟು ಒಂದು ಲಕ್ಷ ಮಾಸ್ಕ್ ಹಂಚುವ ಕೆಲಸಕ್ಕೆ ಚಾಲನೆ ನೀಡಿದ್ದಾರೆ.

ಗ್ರಾಮೀಣ ಪ್ರದೇಶಗಳತ್ತ ಯಾರೂ ಅಷ್ಟಾಗಿ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಆದರೆ ಇವರು ಮಾತ್ರ ನಗರ, ಗ್ರಾಮ ಎಲ್ಲರಿಗೂ ಆರೋಗ್ಯದ ಕಾಳಜಿ ವಹಿಸಿದ್ದಾರೆ.

ಸುರೇಶ ಗೌಡ ಅವರ ಜತೆ ಮಾಜಿ ಸಚಿವ ಸೊಗಡು ಶಿವಣ್ಣ ಅವರು ಸೇರಿಕೊಂಡಿದ್ದ ಈ ಇಬ್ಬರೂ ಮುಖಂಡರು ಹಲವಾರು ಗ್ರಾಮಗಳಿಗೆ ಭೇಟಿ ನೀಡುತ್ತಿದ್ದಾರೆ. ಸಹಾಯ ಹಸ್ತ ಚಾಚ ತೊಡಗಿದ್ದಾರೆ.

ಪಕ್ಷದ ಕಾರ್ಯಕರ್ತರನ್ನು ಒಟ್ಟು ಗೂಡಿಸಿಕೊಂಡು ಅಲ್ಲಲ್ಲಿ ನಾಲ್ಕೈದು ಕಾರ್ಯಕರ್ತರ ಕರೆದು ಸಭೆಗಳನ್ನು ನಡೆಸುತ್ತಾ ಸಂಕಷ್ಟದಲ್ಲಿರುವ ಜನರ ಪಟ್ಟಿ ತಯಾರಿಸಿ ನೆರವಾಗಲು ಸೂಚನೆಗಳನ್ನು ನೀಡ ತೊಡಗಿದ್ದಾರೆ.

ಪ್ರತಿ ಗ್ರಾಮವಾರು ಪಡಿತರ ಚೀಟಿಗಳನ್ನು ಹೊಂದಿರದ ಜನರ ಪಟ್ಟಿ ತಯಾರಿಸಿ ಅವರಗಳಿಗೆ ಅಕ್ಕಿ, ಅಡುಗೆ ಎಣ್ಣೆ, ಈರುಳ್ಳಿ ಮತ್ತಿತರ ಸಾಮಾಗ್ರಿಗಳನ್ನು ನೀಡಲಾಗುತ್ತಿದೆ.

ಯಾರೂ ಉಪವಾಸ ಇರಬಾರದು


ಕ್ಷೇತ್ರದಲ್ಲಿ ಯಾರೂ ಉಪವಾಸ ಇರಬಾರದು. ಹೊರಗೆ ಹೋಗಬೇಕಾದರೆ ಕನಿಷ್ಠ ಮಾಸ್ಕ್ ಧರಿಸಿಯೇ ಹೋಗಬೇಕು. ಗ್ರಾಮಾಂತರ ಕ್ಷೇತ್ರದಲ್ಲಿ ಕರೊನಾ ಸೋಂಕದಂತೆ ನೋಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಪಕ್ಷ ಬೇಧ ಮಾಡಬಾರದು. ಎಲ್ಲರಿಗೂ ಸೌಲಭ್ಯ ತಲುಪುವಂತಾಗಬೇಕು ಎಂಬ ಕಟ್ಟುನಿಟ್ಟಿನ ಸೂಚನೆಯನ್ನು ಸುರೇಶ ಗೌಡರು ನೀಡಿದ್ದಾರೆ. ಅದರಂತೆ ಕೆಲಸ ಮಾಡಲಾಗುತ್ತಿದೆ ಎಂದು ಬಿಜೆಪಿ ಕಾರ್ಯಕರ್ತ ರಾಜೇಶ್ ತಿಳಿಸಿದರು.

ಹಳ್ಳಿಗಳಲ್ಲಿ ಮಾಸ್ಕ್ ಖರೀದಿಸಲು ಸಹ ಸಿಗುವುದಿಲ್ಲ. ಸುರೇಶ ಗೌಡರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಇದು ಅಗತ್ಯವಾಗಿತ್ತು ಎಂದು ಗೋವಿಂದಯ್ಯ ತಿಳಿಸಿದರು.

ಹೊಳಕಲ್, ಮಸ್ಕಲ್, ನಾಗವಲ್ಲಿ ಪಂಚಾಯತ್ ಗೆ ಸೇರಿರುವ ಹಲವು ಗ್ರಾಮಗಳಿಗೆ ಮಾಸ್ಕ್ ಹಂಚಿಕೆ ಮಾಡಲಾಗಿದೆ. ಆಹಾರ ಹಂಚುವ ಕೆಲಸವೂ ನಡೆದಿದೆ.

ಪ್ರಾಣಿಗಳಿಗೂ ರಕ್ಷಣೆ


ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಅಲ್ಲಲ್ಲಿ ಅರಣ್ಯವೂ ಸೇರಿಕೊಂಡಿದೆ. ವಿಶೇಷವಾಗಿ ಕೋತಿಗಳು, ಬೀದಿ ನಾಯಿಗಳ‌ ಹಸಿವು ನೀಗಿಸಲು ಕ್ರಮ ಕೈಗೊಂಡಿದ್ದಾರೆ.

ದೇವರಾಯನ ದುರ್ಗ ಕಾಡಿನಲ್ಲಿ ಅಲ್ಲಲ್ಲಿ ಬಾಳೆ ಗೊನೆಗಳನ್ನು ಕಟ್ಟಲು ನಿರ್ಧರಿಸಿ ಅಲ್ಲಿಗೆ ಬಾಳೆಗೊನೆಗಳ ಸಮೇತ‌ ಹೋಗಿದ್ದವು. ಆದರೆ ಆ ಭಾಗದ ಜನರೇ ನೂರಾರು ಗೊನೆಗಳನ್ನು ಮರಗಳಿಗೆ ಕಟ್ಟಿ ಹೋಗುತ್ತಿದ್ದಾರೆ. ಹೀಗಾಗಿ ಅಲ್ಲಿ ನನಿರ್ಧರಿಸಿ ಅಲ್ಲಿಗೆ ಬಾಳೆಗೊನೆಗಳ ಸಮೇತ‌ ಹೋಗಿದ್ದವು. ಆದರೆ ಆ ಭಾಗದ ಜನರೇ ನೂರಾರು ಗೊನೆಗಳನ್ನು ಮರಗಳಿಗೆ ಕಟ್ಟಿ ಹೋಗುತ್ತಿದ್ದಾರೆ. ಹೀಗಾಗಿ ಅಲ್ಲಿ ನಮ್ಮ ಅಗತ್ಯ ಇಲ್ಲವಾಗಿದೆ. ಗ್ರಾಮಾಂತರ ಕ್ಷೇತ್ರದ ಜನರಲ್ಲಿ ಧರ್ಮ ಉಳಿದಿದೆ ಎಂಬುದರ ದ್ಯೋತಕ ಇದಾಗಿದೆ. ನನ್ನ ಕ್ಷೇತ್ರದ ಜನರ ಬಗ್ಗೆ ಹೆಮ್ಮೆ ಮೂಡಿಸಿತು ಎಂದು ಸುರೇಶ ಗೌಡ ತಿಳಿಸಿದರು.

ತರಕಾರಿಕೊಳ್ಳಲು ಯೋಜನೆ


ರೈತರು ಬೆಳೆದಿರುವ ತರಕಾರಿಯನ್ನು ಕೊಂಡು ಅದನ್ನು ಗ್ರಾಮಾಂತರದಲ್ಲಿ ಹಂಚಲು ಸಹ ಕ್ರಮ ಕೈಗೊಳ್ಳಲಾಗಿದೆ ಎನ್ನುತ್ತಾರೆ ಸುರೇಶ ಗೌಡರು.

ರೈತರಿಗೆ ಆದಷ್ಟು ನೆರವಾಗಬೇಕು. ಇನ್ನೊಂದೆಡೆ ಹಸಿದವರ ಹೊಟ್ಟೆಯೂ ತುಂಬಬೇಕು. ಅದಕ್ಕಾಗಿ ಈ ಚಿಂತನೆ ಎಂದರು.

ತುಮಕೂರು ನಗರಕ್ಕೆ ಕರಳು ಬಳ್ಳಿಯಂತೆ ಸುತ್ತಿಕೊಂಡಿರುವ ಗ್ರಾಮಾಂತರ ಕ್ಷೇತ್ರದಲ್ಲಿ ಸಾವಿರಾರು ದಿನಗೂಲಿ ಕೆಲಸಗಾರರು ಇದ್ದಾರೆ. ರೇಷನ್ ಕಾರ್ಡ್ ಇದ್ದವರಿಗೆ ಸರ್ಕಾರ ಪಡಿತರ ವಿತಸುತ್ತಿರುವುದರಿಂದ ಪಡಿತರದ ಸಮಸ್ಯೆ ಬಂದಿಲ್ಲ. ಪಡಿತರ ಕಾರ್ಡ್ ಇಲ್ಲದ ಕಡುಬಡವರು, ದಿನಗೂಲಿ ಕೆಲಸಗಾರರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದರು. ಇಂಥವರಿಗೆ ಪಡಿತರ ವಿತರಣೆ ಮಾಡುತ್ತಿರುವುದು ನಮಗೂ ಹೆಮ್ಮೆ ಎನಿಸುತ್ತಿದೆ ಎನ್ನುತ್ತಾರೆ ಬಿಜೆಪಿ ಕಾರ್ಯಕರ್ತರು.

Comment here