ಸಿನಿಮಾ

ದ್ರೋಣ ‘ದಿ ಮಾಸ್ಟರ್’ ಲುಕ್ ನಲ್ಲಿ ಶಿವರಾಜ್ ಕುಮಾರ್

ಪಬ್ಲಿಕ್ ಸ್ಟೋರಿ.ಇನ್


ಡಾ.ಶಿವರಾಜ್ ಕುಮಾರ್ ಅವರ ‘ದ್ರೋಣ’ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆಯಂತೆ.

ದ್ರೋಣ.. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಮತ್ತೊಂದು ಸ್ಪೆಷಲ್ ಸಿನಿಮಾ.

ದಿ ಮಾಸ್ಟರ್ ಎನ್ನುವ ಟ್ಯಾಗ್ ಲೈನ್ ನೊಂದಿಗೆ ದ್ರೋಣ ತೆರೆಗೆ ಬರುತ್ತಿದೆ. ಪ್ರಸ್ತುತ ಸಮಾಜದಲ್ಲಿ, ಶೈಕ್ಷಣಿಕ ಕ್ಷೇತ್ರದ ಅವ್ಯವಸ್ಥೆ, ಸರ್ಕಾರಿ ಶಾಲೆಗಳ ಬಗೆಗಿನ ಕೀಳಿರಿಮೆ. ಶೈಕ್ಷಣಿಕ ಕ್ಷೇತ್ರದಲ್ಲಿನ ಅನ್ಯಾಯ ಧೋರಣೆ ವಿರುದ್ಧ ಹೋರಾಟ ಮಾಡುವ ಶಿಕ್ಷಕನ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದಾರೆ.

ಈ ಸಿನಿಮಾದ ಮೂಲಕ ಮತ್ತೊಮ್ಮೆ ವಿಶಿಷ್ಠಪಾತ್ರದಲ್ಲಿ ಅಭಿಮಾನಿಗಳ ಮುಂದೆ ಶಿವಣ್ಣ ಬರ್ತಿದ್ದಾರೆ.

ನಾಯಕಿಯಾಗಿ ತಮಿಳಿನ ಇನಿಯಾ ನಟಿಸಿದ್ದಾರೆ. ಸ್ವಾತಿ ಶರ್ಮಾ, ರಂಗಾಯಣ ರಘು, ಬಾಬು ಹಿರಣ್ಣಯ್ಯ, ಶಂಕರ್ ರಾವ್, ರೇಖಾದಾಸ್, ರಾಮಸ್ವಾಮಿ ಗೌಡ, ಶ್ರೀನಿವಾಸ್ ಗೌಡ, ಆನಂದ್, ನಾರಾಯಣ ಸ್ವಾಮಿ, ರವಿಕಿಶನ್, ಜಯಶ್ರೀ, ಮಾಸ್ಟರ್ ಮಹೇಂದ್ರ ಸೇರಿದಂತೆ ಬಹು ದೊಡ್ಡ ತಾರಾಬಳಗವಿದೆ.

ಪ್ರಮೋದ್ ಚಕ್ರವರ್ತಿ ನಿರ್ದೇಶಿಸಿದ್ದಾರೆ. ಡಾಲ್ಫಿನ್ ಮೀಡಿಯಾ ಹೌಸ್ ಬ್ಯಾನರ್ ನಲ್ಲಿ ಮಹದೇವ.ಬಿ, ಎಸ್.ಬಿ.ಹೆಚ್ (ಸಂಗಮೇಶ್ ಬಿ) ಶೇಷು ಚಕ್ರವರ್ತಿ ನಿರ್ಮಾಣ ಮಾಡಿದ್ದಾರೆ. ರಾಮ್ ಕ್ರಿಶ್ ಸಂಗೀತ, ಜಗದೀಶ್ ವಾಲಿ ಛಾಯಾಗ್ರಹಣ ನೀಡಿದ್ದಾರೆ. ಟೀಸರ್ ಈಗಾಗಲೆ ರಿಲೀಸ್ ಆಗಿದೆ. ಕನ್ನಡ ಸಿನಿ ಪ್ರಿಯರಲ್ಲಿ ವಿಶೇಷ ಕುತೂಹಲವನ್ನು ಹುಟ್ಟಿಸಿದೆ. ಈಚೆಗೆ ರಿಲೀಸ್ ಆಗಿದ್ದ ಮೊದಲ ಲಿರಿಕಲ್ ವಿಡಿಯೋ ರಾಮನ ಹಾಡು ಜನ ಮನ್ನಣೆಗಳಿಸಿದೆ.

ಸಿನಿಮಾ ರಿಲೀಸ್ ಗೆ ರೆಡಿಯಾಗಿದ್ದು ಪ್ರಚಾರ ಕಾರ್ಯವನ್ನ ಶುರುಮಾಡೋದಕ್ಕೆ ಚಿತ್ರ ತಂಡ ಮುಂದಾಗಿದೆ. ಮೊದಲ ಮೇಕಿಂಗ್ ವಿಡಿಯೋ ರಿಲೀಸ್ ಮಾಡೋದಕ್ಕೆ ತಯಾರಿ ನಡೆದಿದೆ. ಈ ವಾರ ದ್ರೋಣ ಚಿತ್ರದ ಮೊದಲ ಮೇಕಿಂಗ್ ವಿಡಿಯೋ ರಿಲೀಸ್ ಆಗಲಿದೆ. ಸದ್ಯದಲ್ಲೇ ಆಡಿಯೋ ಲಾಂಚ್ ಮತ್ತು ಟ್ರೈಲರ್ ನ ಲಾಂಚ್ ಮಾಡಿ ಚಿತ್ರ ಬಿಡುಗಡೆ ಮಾಡುವ ದಿನಾಂಕ ಅಭಿಮಾನಿಗಳಿಗೆ ತಿಳಿಸಲಿದ್ದಾರಂತೆ.

ಸಿನಿ ಪ್ರಿಯರಂತೂ ಶಿವಣ್ಣ ಅವರು ವಿಭಿನ್ನ ಪಾತ್ರದಲ್ಲಿ ನಟಿಸಿರುವ ಚಿತ್ರದ ಬಿಡುಗಡೆಗಾಗಿ ಕಾದು ಕುಳಿತಿದ್ದಾರೆ.

Comment here