ತುಮಕೂರು ಲೈವ್

ನಾಳೆ ‘ಮಾರ್ಗಾನ್ವೇಷಣೆ’ ಪುಸ್ತಕ ಲೋಕಾರ್ಪಣೆ

Publicstory.in


ತುಮಕೂರು: ವಿಶ್ವವಿದ್ಯಾನಿಲಯದ ಸರ್ ಎಂ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಆಗಸ್ಟ್ 7ರ ಬೆಳಿಗ್ಗೆ 10:30 ಗಂಟೆಗೆ ಪ್ರೊ. ನಿತ್ಯಾನಂದ ಬಿ ಶೆಟ್ಟಿ ಅವರ ‘ಮಾರ್ಗಾನ್ವೇಷಣೆ'(ಸಾಹಿತ್ಯ ಸಂಶೋಧನೆಯ ರೀತಿ-ನೀತಿ) ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಪ್ರಸಾರಾಂಗ ತುಮಕೂರು ವಿಶ್ವವಿದ್ಯಾಲಯ ಮತ್ತು ಬೆಸುಗೆ ಟ್ರಸ್ಟ್ ಇವರ ಸಹಯೋಗದಲ್ಲಿ ಈ ಕಾರ್ಯಕ್ರಮ ನೆರವೇರಲಿದೆ.

ಕನ್ನಡದ ಪ್ರಖ್ಯಾತ ವಿಮರ್ಶಕರೂ, ಇಂಟೆಲ್ ದಕ್ಷಿಣ ಏಷಿಯಾದ ಸಲಹೆಗಾರರು, ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ವಿಭಾಗದ ಗೌರವ ನಿರ್ದೇಶಕರೂ ಆದ ಎಸ್ ಆರ್ ವಿಜಯಶಂಕರ ಮತ್ತು ಕವಿ-ನಾಟಕಕಾರ-ರಂಗ ನಿರ್ದೇಶಕ, ನೀನಾಸಂ, ರಂಗಾಯಣ, ನವದೆಹಲಿಯ ರಾಷ್ಟ್ರೀಯ ನಾಟಕಶಾಲೆಯ ಸಂದರ್ಶಕ ಪ್ರಾಧ್ಯಾಪಕರಾದ ರಘುನಂದನ ಪುಸ್ತಕ ಕುರಿತು ಮಾತನಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ತುಮಕೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಕರ್ನಲ್ (ಪ್ರೊ) ವೈ ಎಸ್ ಸಿದ್ದೇಗೌಡ, ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಾ ಹ ರಮಾಕುಮಾರಿ, ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಕೆ ಶಿವಚಿತ್ತಪ್ಪ, ಸಾಹಿತ್ಯ-ಸಂಶೋಧನಾಸಕ್ತರು ಉಪಸ್ಥಿತರಿರಲಿದ್ದಾರೆ.

Comment here